'ನಾನು ಸಮಾಧಿಯಲ್ಲಿದ್ದೇನೆ... 2026ಕ್ಕೆ ಲೌಖಿಕ ಲೋಕಕ್ಕೆ ಬರುತ್ತೇನೆ, ದೀಪದ ಬೆಳಕಲ್ಲಿ ನಾನು ಕಾಣುವೆ...'

nityananda
Published on

ಬೆಂಗಳೂರು: ವಿವಾದಿತ ಸ್ವಯಂ ಘೋಷಿತ ಸ್ವಾಮಿ, ತಮ್ಮದೇ ಕೈಲಾಸವನ್ನು ನಿರ್ಮಿಸಿಕೊಂಡು ಭಾರಿ ಸುದ್ದಿಯಲ್ಲಿರುವ ನಿತ್ಯಾನಂದ, ಇದೀಗ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಇವರು ಸತ್ತೇ ಹೋಗಿದ್ದಾರೆ ಎಂದು ಕಳೆದ ಕೆಲವು ದಿನಗಳಿಂದ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಇದು ತುಂಬಾ ವೈರಲ್​ ಆಗಿದೆ.

ಇದನ್ನು ನೋಡಿರುವ ನಿತ್ಯಾನಂದ ಸ್ವಾಮಿ, ‘ಕೈಲಾಸ್ ಅವತಾರ್ ಕ್ಲಿಕ್ಸ್‘ ಎಂಬ ಫೇಸ್​ಬುಕ್ ಪೇಜ್​ನಲ್ಲಿ ಪುಟಗಟ್ಟಲೆ ಬರೆದುಕೊಂಡಿದ್ದಾರೆ. ಅದರಲ್ಲಿ 'ಶಿವ ಶಿವಾ... ನಾನು ಸತ್ತಿಲ್ಲ, ಸಮಾಧಿಯಾಗಿದ್ದೇನೆ' ಎಂದು ಬರೆದುಕೊಂಡಿದ್ದಾರೆ. 'ನಾನು ಆರೋಗ್ಯದಿಂದ ಇದ್ದೇನೆ. ನನ್ನ ವಿರೋಧಿಗಳು ನಾನು ಸತ್ತಿರುವುದಾಗಿ ಸುಳ್ಳು ಸುದ್ದಿ ಹರಡುತ್ತಿದ್ದಾರೆ. ನಾನು ಎಲ್ಲಿಗೂ ಓಡಿಯೂ ಹೋಗಿಲ್ಲ. ಕೈಲಾಸದಲ್ಲಿ ಇದ್ದೇನೆ. ನಾನು ಸದ್ಯ ಸಮಾಧಿಯಲ್ಲಿರುವುದಾಗಿ ನನ್ನ ಭಕ್ತಾಧಿಗಳಿಗೆ ತಿಳಸಿಲು ಬಯಸುತ್ತೇನೆ. ಅಲ್ಲದೇ ನನಗೆ ನಿಮ್ಮ ಮುಂದೆ ಬಂದು ಮಾತನಾಡಲು ಅಥವಾ ಸತ್ಸಂಗ ನಡೆಸಲು ಇನ್ನೂ ಸ್ವಲ್ಪ ಸಮಯಬೇಕು' ಎಂದಿದ್ದಾರೆ. 2026ಕ್ಕೆ ಲೌಕಿಕ ಜಗತ್ತಿಗೆ ಬರುತ್ತೇನೆ ಎಂದು ವೇಳೆಯನ್ನೂ ಕೊಟ್ಟಿದ್ದಾರೆ.

ನಾನು ಜೀವಂತವಾಗಿದ್ದೇನೆ ಎಂದು ನಿಮಗೆ ಸಾಕ್ಷಿ ಸಹಿತ ತೋರಿಸಬಲ್ಲೆ. ನೀವು ಬೇಕಿದ್ದರೆ ತಿರುಮಣ್ಣಾಮಲೈ ಅರುಣಗಿರಿಯ ಯೋಗೇಶ್ವರ ಸಮಾಧಿಗೆ ಹೋಗಿ ದೀಪ ಬೆಳಗಿಸಿ. ಆಗ ನಾನು ಅವರಿಗೆ ಸ್ಪಷ್ಟವಾಗಿ ಗೋಚರಿಸುತ್ತೇನೆ. ಅಲ್ಲದೇ ಈ ಕೆಳಗೆ ನೀಡಿರುವ ಫೋಟೋಗಳು ಸುಳ್ಳು ಎನ್ನುವವರು ಸಹ ದೀಪ ಬೆಳಗಿಸಲಿ ಎಂದಿದ್ದಾರೆ.

ನನ್ನೊಂದಿಗೆ 27 ವೈದ್ಯರು ಮತ್ತು ಭಕ್ತರು ಇದ್ದಾರೆ. ಅವರು ಸೂಪರ್ ಕಾನ್​ಶ್ಯಿಯಸ್​ನೆಸ' ಕುರಿತು ಸಂಶೋಧನೆ ಮಾಡುತ್ತಿದ್ದಾರೆ. ಇಲ್ಲಿ ನಿತ್ಯ ಶಿವಪೂಜೆ ನಡೆಯುತ್ತಿದೆ, ನೀವು ಕಾಮೆಂಟ್​ ಮಾಡಿದರೆ ನಾನು ಪ್ರತಿಕ್ರಿಯಿಸುತ್ತೇನೆ. ನಾನು ನಿಮ್ಮೆಲ್ಲರನ್ನೂ ಪ್ರಾಮಾಣಿಕವಾಗಿ ಪ್ರೀತಿಸುತ್ತೇನೆ ಎಂದು ಫೇಸ್​ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net