ಹೆಂಡ್ತಿ ಪ್ರಚೋದನೆ ಮಾಡಿದ್ರೆ ನಾನೇನ್​ ಮಾಡ್ಲಿ ಸರ್​? ನಡು ರಸ್ತೆಯಲ್ಲಿ ಪೊಲೀಸರ ಮುಂದೆ ಪತಿಯ ಅಳಲು!

mask
Published on

ನವದೆಹಲಿ: ಕರೊನಾ ಶುರುವಾದಾಗಿನಿಂದಲೂ ಮಾಸ್ಕ್​ ಧರಿಸುವುದು ಕಡ್ಡಾಯ ಮಾಡಲಾಗಿದೆ. ಎಲ್ಲಾ ರಾಜ್ಯಗಳಲ್ಲಿಯೂ ಮಾಸ್ಕ್​ಅನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಇದನ್ನು ಧರಿಸದೇ ಹೋದರೆ ಭಾರಿ ಪ್ರಮಾಣದ ದಂಡವನ್ನೂ ವಿಧಿಸಲಾಗುತ್ತದೆ.

ಆದರೆ ದೆಹಲಿಯಲ್ಲೊಬ್ಬ ಪತಿರಾಯ ಮಾಸ್ಕ್​ ಧರಿಸದೇ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಹೀಗೆ ಮಾಸ್ಕ್​ ಧರಿಸದೇ ಸಿಕ್ಕಿಬಿದ್ದರೆ ಅದೇನು ಹೊಸ ವಿಷಯವಲ್ಲ. ಆದರೆ ಈ ಸುದ್ದಿ ಇಷ್ಟೆಲ್ಲಾ ವೈರಲ್​ ಆಗಲು ಕಾರಣ, ಮಾಸ್ಕ್​ ಧರಿಸದೇ ಇರುವುದಕ್ಕೆ ಆತ ಕೊಟ್ಟಿರುವ ಕಾರಣ!

ಪೊಲೀಸರು ಪಂಕಜ್​ ದತ್ತಾ ಎನ್ನುವವರನ್ನು ಮಾಸ್ಕ್​ ಧರಿಸದೇ ಇರುವುದಕ್ಕೆ ತಡೆದು ನಿಲ್ಲಿಸಿದ್ದಾರೆ. ಆಗ ಆತನ ಕೋಪ ನೇರವಾಗಿ ಪತ್ನಿಯ ಮೇಲೆ ಬಿದ್ದಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿಯೂ ಮಾಸ್ಕ್​ ಧರಿಸದೇ ಇರುವುದಕ್ಕೆ ಪಂಕಜ್​ ಅವರನ್ನು ಪೊಲೀಸರು ತರಾಟೆಗೆ ತೆಗೆದುಕೊಂಡಾಗ, ಅವರು ಏಕಾಏಕಿ, ನಾನೇನು ಮಾಡಲು ಆಗುತ್ತೆ ಸರ್​? ಇದೆಲ್ಲಾ ನನ್ನ ಪತ್ನಿ ಮಾಡಿದ ಪ್ರಚೋದನೆ. ತಾನೂ ಮಾಸ್ಕ್​ ಧರಿಸಲಿಲ್ಲ, ನನಗೂ ಧರಿಸಲು ಕೊಡಲಿಲ್ಲ. ಇದೇ ವಿಷಯವಾಗಿ ನಮ್ಮಿಬ್ಬರ ನಡುವೆ ಗಲಾಟೆ ಕೂಡ ಆಯಿತು. ಅಲ್ಲಿ ಅವಳೂ ಬೈತಾಳೆ, ಇಲ್ಲಿ ನೀವೂ ಬೈತೀರಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ!

ದಂಪತಿ ಕಾರಿನಲ್ಲಿ ಹೋಗುವಾಗ ಪೊಲೀಸರು ತಡೆದು ಮಾಸ್ಕ್​ ಧರಿಸದೇ ಇದ್ದುದಕ್ಕೆ ತರಾಟೆಗೆ ತೆಗೆದುಕೊಂಡಿದ್ದರು. ಆಗ ಪಂಕಜ್​ ಆವರು ತಮ್ಮ ಪತ್ನಿ ಅಭಾಳ ವಿರುದ್ಧ ಮಾತನಾಡಿದ್ದಾರೆ. ಮಾಸ್ಕ್​ ಧರಿಸದೇ ಇದ್ದುದಕ್ಕೆ ದಂಡ ವಿಧಿಸಿದಾಗ ಸಿಟ್ಟಿನಿಂದ ಆಭಾ ಅವರು, ಪೊಲೀಸರು ಭಿಕ್ಷುಕರು ಎಂದು ಕರೆದಿದ್ದಾರೆ! ಇವೆಲ್ಲವೂ ವಿಡಿಯೋದಲ್ಲಿ ದಾಖಲಾಗಿದೆ.

ಇಲ್ಲಿದೆ ನೋಡಿ ವಿಡಿಯೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net