

ನವದೆಹಲಿ: ಹೆಜ್ಜೆಹೆಜ್ಜೆಗೂ ಆತಂಕ ಸೃಷ್ಟಿಸುತ್ತಿರುವ ಕರೊನಾದಿಂದ ಆಗುತ್ತಿರುವ ಅನಾಹುತಗಳು ಅಷ್ಟಿಷ್ಟಲ್ಲ. ಕರೊನಾವನ್ನು ಹೊಡೆದೋಡಿಸಲು ತಜ್ಱರೆಲ್ಲರೂ ಸೇರಿ ವರ್ಷದಿಂದಲೂ ಏನೆಲ್ಲಾ ಸರ್ಕಸ್ ಮಾಡುತ್ತಿದ್ದರೂ ಅದು ಸಂಪೂರ್ಣವಾಗಿ ಯಶಸ್ಸು ಕಂಡಿಲ್ಲ.
ಕರೊನಾ ಲಸಿಕೆ ಕಂಡುಹಿಡಿದರೂ, ಲಸಿಕೆ ಹಾಕಿಸಿಕೊಂಡ ನಂತರ ಕರೊನಾ ವೈರಸ್ ಹತ್ತಿರ ಸುಳಿಯುವುದಿಲ್ಲ ಎಂಬ ಮಾತು ಹುಸಿಯಾಗತೊಡಗಿದೆ. ಲಸಿಕೆ ಹಾಕಿಸಿಕೊಂಡವರಿಗೂ ಸೋಂಕು ತಗುಲಿ ಅನಾಹುತವನ್ನೇ ಸೃಷ್ಟಿಸಿರುವ ಘಟನೆಗಳು ಅಲ್ಲಲ್ಲಿ ವರದಿಯಾಗುತ್ತಿವೆ.
ಇಡೀ ವೈದ್ಯಕೀಯ ಲೋಕವೇ ಈ ಮಹಾಮಾರಿಯ ಹಿಂದೆ ಬಿದ್ದಿರುವಾಗ ಇಲ್ಲೊಬ್ಬ ಮಹಿಳೆ ಮಾತ್ರ ಕರೊನಾಕ್ಕೆ ಒಂದು ಐಡಿಯಾ ಕೊಟ್ಟು, ಸಕತ್ ಫೇಮಸ್ ಆಗಿದ್ದಾಳೆ.
ಅಷ್ಟಕ್ಕೂ ಈ ಮಹಿಳೆ ಹೇಳಿದ್ದೇನೆಂದರೆ, ಇಂಜೆಕ್ಷನ್ನಿಂದ ಯಾವುದೇ ಲಾಭವಿಲ್ಲ. ಲಸಿಕೆ ಹಾಕಿಸಿಕೊಂಡರೆ ಕರೊನಾ ಹೋಗಲ್ಲ. ಆದರೆ ಇದನ್ನೊಮ್ಮೆ ಏರಿಸಿ ನೋಡಿ ಎಂದು ಮದ್ಯದ ಬಾಟಲಿಯನ್ನು ತೋರಿಸಿದ್ದಾಳೆ. ದೆಹಲಿಯ ಶಿವಪುರಿ ಗೀತಾ ಕಾಲೋನಿಯಲ್ಲಿ ಇರುವ ಮದ್ಯದಂಗಡಿಗೆ ಮದ್ಯ ಖರೀದಿಗೆ ಬಂದಿದ್ದ ಈ ಮಹಿಳೆಯನ್ನು ಮಾತನಾಡಿದಾಗ, ನನಗೆ ಬೇರೆ ಯಾವುದೇ ಔಷಧಗಳಿಂದ ಯಾವುದೇ ಪ್ರಯೋಜನ ಆಗುವುದಿಲ್ಲ. ಪ್ರಯೋಜನ ಆಗಬೇಕೆಂದರೆ ಇದೊಂದು ಔಷಧ ಬೇಕು ಎಂದಿದ್ದಾರೆ. ಈಕೆ ಆಡಿದ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ.