ಸೊಳ್ಳೆಗಳಿಗೆ ದಿನವೂ ರಕ್ತ ಕುಡಿಸುತ್ತಾರೆ ಈ ವಿಜ್ಞಾನಿ- ಕಾರಣ ಏನು ಗೊತ್ತಾ?

mosquito2
Published on

ವಾಷಿಂಗ್ಟನ್​: ಸೊಳ್ಳೆ ಎಂದರೆನೇ ಭಯಪಡದವರು ಇಲ್ಲವೇ ಇಲ್ಲ ಎನ್ನಬಹುದೇನೋ? ಸೊಳ್ಳೆಗಳ ಮೇಲೆ ಭಯ ಇಲ್ಲದಿದ್ದರೂ, ಅದು ಕಚ್ಚಿದ ನಂತರ ಉಂಟಾಗುವ ನೋವು-ತುರಿಕೆ ಇಲ್ಲವೇ ಕೆಲವೊಂದು ಸೊಳ್ಳೆಗಳು ಹರಡುವ ಭಯಾನಕ ರೋಗಗಳಿಂದಾಗಿ ಹೆದರುವವರೇ ಎಲ್ಲಾ.

ಆದರೆ ಇಲ್ಲೊಬ್ಬ ವಿಜ್ಞಾನಿ ಮಾತ್ರ ಸೊಳ್ಳೆಗಳಿಗೆ ದಿನಂಪ್ರತಿ ರಕ್ತದಾನ ಮಾಡುತ್ತಿದ್ದಾರೆ. ಅರ್ಥಾತ್​, ದಿನವೂ ಸೊಳ್ಳೆಗಳಿಂದ ಉದ್ದೇಶಪೂರ್ವಕವಾಗಿ ಕಚ್ಚಿಸಿಕೊಳ್ಳುತ್ತಿದ್ದಾರೆ.

ಡೆಂಗ್ಯು, ಚಿಕುನ್ ಗುನ್ಯಾ, ಕಾಮಾಲೆ ಸೇರಿದಂತೆ ಮಾರಣಾಂತಿಕ ರೋಗಗಳಿಗೆ ಕಾರಣವಾಗುವ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಇವರೇನು ಮಾಡುತ್ತಾರೆ ಎನ್ನುವುದೇ ಕುತೂಹಲದ ಸಂಗತಿ. ಇವೆಲ್ಲಾ ರೋಗಗಳು ಸೊಳ್ಳೆಗಳಿಂದ ಹೇಗೆ ಹರಡುತ್ತಿವೆ, ಅವುಗಳನ್ನು ನಿಯಂತ್ರಿಸುವುದು ಹೇಗೆ ಎನ್ನುವುದನ್ನು ಕಂಡುಹಿಡಿಯಲು ಇಂಥದ್ದೊಂದು ಪ್ರಯೋಗ ಮಾಡುತ್ತಿದ್ದಾರೆ. ಇವರು.

ಅಂದಹಾಗೆ, ಇವರ ಹೆಸರು ಪೆರಾನ್ ರೋಸ್ , ಕೀಟ ಶಾಸ್ತ್ರಜ್ಞರಾಗಿರುವ ಇವರು 2018ರಲ್ಲಿಯೇ ತಮ್ಮ ಟ್ವಿಟರ್​ ಖಾತೆಯಲ್ಲಿ ಸೊಳ್ಳೆಗಳನ್ನು ಕಚ್ಚಿಸಿಕೊಳ್ಳುವ ಕುರತಂತೆ ವಿಡಿಯೋ ಶೇರ್​ ಮಾಡಿದ್ದಾರೆ. ಅದರ ಮುಂದುವರೆದಿರುವ ಭಾಗವಾಗಿ ತಾವು ಈ ಸಂಶೋಧನೆಯಿಂದ ಹಲವಾರು ವಿಷಯಗಳನ್ನು ತಿಳಿದುಕೊಂಡಿರುವುದಾಗಿ ಅವರು ಇದೀಗ ಹೇಳಿದ್ದಾರೆ.

ಆದರೆ ಇನ್ನೂ ಸೊಳ್ಳೆಗಳನ್ನು ಕಚ್ಚಿಸಿಕೊಳ್ಳುವುದು ಮುಗಿದಿಲ್ಲ. ಏನಿಲ್ಲವೆಂದರೂ ದಿನಕ್ಕೆ 250 ಸೊಳ್ಳೆಗಳಿಂದ ಕಚ್ಚಿಸಿಕೊಂಡು ಅವುಗಳಿಗೆ ರಕ್ತ ಕುಡಿಸ್ತಾರೆ. ನಂತರ ಮನುಷ್ಯನ ದೇಹದೊಳಕ್ಕೆ ಸೊಳ್ಳೆಗಳಿಂದ ಹೇಗೆ ಹಾನಿಯಾಗುತ್ತದೆ ಎಂಬುದನ್ನು ಇದಾಗಲೇ ಒಂದು ಹಂತದವರೆಗೆ ಅವರು ಪತ್ತೆಹಚ್ಚಿದ್ದಾರಂತೆ.

ಸೊಳ್ಳೆಗಳ ಬಗ್ಗೆ ಅಧ್ಯಯನ ಮಾಡಲು ಅವುಗಳ ಮೊಟ್ಟೆಗಳಿಗೆ ವೊಲ್ಬಾಸಿಯಾ ಎಂಬ ಬ್ಯಾಕ್ಟೀರಿಯ ಇಂಜಕ್ಟ್ ಮಾಡುತ್ತಾರೆ. ಆದರೆ, ಡೆಂಗ್ಯು ತರುವ ಈಡೀಸ್ ಇಜಿಪ್ಟೈ ಸೊಳ್ಳೆಯ ಮೊಟ್ಟೆಗಳು ಸಣ್ಣದಿರುತ್ತವೆ. ಪ್ರಯೋಗ ಮಾಡುವಾಗ ಅವುಗಳು ಹಾಳಾಗಿಬಿಡುತ್ತವೆ. ಇದರಿಂದ ಸೊಳ್ಳೆಗಳಿಗೆ ಹೆಚ್ಚು ರಕ್ತ ಕುಡಿಸಿ ಹೆಚ್ಚು ಮೊಟ್ಟೆ ಇಡುವಂತೆ ಮಾಡಲಾಗುತ್ತದೆ ಎಂದು ಪೆರಾನ್​ ರೋಸ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net