More

    ಹತ್ರಾಸ್​ ಸಂತ್ರಸ್ತೆ ಕುಟುಂಬದ ಭೇಟಿಗೆ ಅವಕಾಶ ನೀಡುತ್ತಿಲ್ಲ: ನಿರ್ಭಯಾ ವಕೀಲೆಯಿಂದ ಆಕ್ರೋಶ

    ಲಖನೌ: 2012ರಲ್ಲಿ ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ನಿರ್ಭಯಾ ರೇಪ್​ ಆ್ಯಂಡ್​ ಮರ್ಡರ್​ ಕೇಸ್​ನಲ್ಲಿ ನಿರ್ಭಯಾ ಪರವಾಗಿ ವಾದಿಸಿದ ವಕೀಲೆ ಸೀಮಾ ಕುಶ್ವಾಹಾ ಅವರಿಗೆ ಹತ್ರಾಸ್​ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಅವಕಾಶ ನೀಡಿಲ್ಲವಂತೆ.

    ಈ ಕುರಿತು ಹೇಳಿಕೆ ನೀಡಿರುವ ಸೀಮಾ ಅವರು, ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

    ನನ್ನನ್ನು ಭೇಟಿಯಾಗುವ ಇಂಗಿತವನ್ನು ಸಂತ್ರಸ್ತೆಯ ಕುಟುಂಬದವರು ಇಟ್ಟಿದ್ದರು. ಸಂತ್ರಸ್ತೆಯ ಪರವಾಗಿ ಅವರು ತಮ್ಮನ್ನು ವಕೀಲರನ್ನಾಗಿ ನೇಮಕ ಮಾಡಿಕೊಳ್ಳುವ ಆಸೆ ವ್ಯಕ್ತಪಡಿಸಿದ್ದರು. ಅದರಂತೆ ನಾನು ಅವರ ಮನೆಗೆ ಬರಲು ಮುಂದಾಗಿದ್ದೆ. ಆದರೆ ಸ್ಥಳೀಯ ಆಡಳಿತವು ನನಗೆ ಕುಟುಂಬಸ್ಥರನ್ನು ಭೇಟಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಮಾಧ್ಯಮಗಳ ಮುಂದೆ ಸೀಮಾ ಹೇಳಿದ್ದಾರೆ.

    ಅಕ್ಟೋಬರ್ 02: 2012 ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ವಕೀಲ ಸೀಮಾ ಕುಶ್ವಾಹಾ, ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಸಂತ್ರಸ್ತೆಯ ಕುಟುಂಬವು ತಮ್ಮ ಕಾನೂನು ಸಲಹೆಗಾರರಾಗಿ ನಿಲ್ಲುವಂತೆ ಕೋರಿದೆ ಆದರೆ ಅವರನ್ನು ಭೇಟಿ ಮಾಡಲು ರಾಜ್ಯ ಆಡಳಿತವು ಅವಕಾಶ ನೀಡುತ್ತಿಲ್ಲ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಶಾಕಿಂಗ್​! ಮಕ್ಕಳ ಮೇಲೆ ತಂದೆಯಿಂದ ನಿರಂತರ ರೇಪ್​- ಲಾಕ್​ಡೌನ್​ನಿಂದ ಕೃತ್ಯ ಬಯಲು

    ‘ನಾನು ಇಲ್ಲಿಗೆ ಬಂದರೆ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಬರುತ್ತದೆ ಎಂದು ಸ್ಥಳೀಯ ಆಡಳಿತವು ಹೇಳುತ್ತಿದೆ. ಇದ್ಯಾವ ನ್ಯಾಯ? ಕುಟುಂಬದೊಂದಿಗೆ ನನ್ನ ಭೇಟಿಯು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯನ್ನು ಹೇಗೆ ಸೃಷ್ಟಿಸುತ್ತದೆ? ನಾನು ಒಬ್ಬ ವ್ಯಕ್ತಿಯಾಗಿ ಇಲ್ಲಿಗೆ ಬಂದಿದ್ದೇನೆ. ಕಾನೂನು ಮತ್ತು ಸುವ್ಯವಸ್ಥೆಗೆ ನಾನು ಹೇಗೆ ಸಮಸ್ಯೆ ತರಲು ಸಾಧ್ಯ?’ ಎಂದು ಅವರು ಪ್ರಶ್ನಿಸಿದ್ದಾರೆ.

    ಕುಟುಂಬವನ್ನು ಭೇಟಿಯಾಗುವ ಮೊದಲು ನಾನು ಇಲ್ಲಿಂದ ಹೊರಡುವುದಿಲ್ಲ ಎಂದಿರುವ ಸೀಮಾ, ನನಗೆ ಆಡಳಿತವು ಸಹಕಾರ ನೀಡುತ್ತದೆ ಎಂದು ಅಂದುಕೊಂಡಿದ್ದೇನೆ ಎಂದಿದ್ದಾರೆ.

    2012 ರ ನಿರ್ಭಯಾ ಪ್ರಕರಣದಲ್ಲಿ ಸುದೀರ್ಘ ವಾದ ಮಂಡಿಸಿದ್ದ ಸೀಮಾ ಅವರು, ನಾಲ್ವರು ಅಪರಾಧಿಗಳಾದ ಅಕ್ಷಯ್ ಸಿಂಗ್ ಠಾಕೂರ್, ಪವನ್ ಗುಪ್ತಾ, ವಿನಯ್ ಶರ್ಮಾ ಮತ್ತು ಮುಖೇಶ್ ಸಿಂಗ್ ಅವರನ್ನು ಗಲ್ಲಿಗೇರಿಸುವಲ್ಲಿ ನೆರವಾಗಿದ್ದರು.
    ಸೀಮಾ ಸಮೃದ್ಧಿ ಕುಶ್ವಾಹ ಉತ್ತರಪ್ರದೇಶದ ಉಗ್ಗರ್‌ಪುರ ಎಂಬ ಹಳ್ಳಿಯವರು. ಸದ್ಯ ಇವರು ನಾಗರಿಕ ಸೇವೆಗಳ ಪರೀಕ್ಷೆಗೆ ತಯಾರಿ ನಡೆಸಿದ್ದಾರೆ.

    ಬಾಬ್ರಿಮಸೀದಿ ತೀರ್ಪಿನಲ್ಲಿವೆ ಸ್ಫೋಟಕ ಮಾಹಿತಿ: ಪಾಕ್ ಕೈವಾಡದ ‘ಮೌನ’ದ ಕುರಿತು ನ್ಯಾಯಾಧೀಶರ ಪ್ರಶ್ನೆ

    ಮಗನಿಗೆ ₹100 ಕೊಟ್ಟು ಕಳುಹಿಸಿದ ಅಮ್ಮ: 4 ಕೋಳಿಮರಿ ಜತೆ ₹150 ತಂದ ಪುಟಾಣಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts