More

    ಆಲಿಯಾ ಭಟ್ ಮತ್ತೊಮ್ಮೆ ಡೀಪ್​ಫೇಕ್​ಗೆ ಬಲಿ..ಈ ಬಾರಿ ಯಾರ ದೇಹಕ್ಕೆ ಈ ನಟಿ ಮುಖವನ್ನು ಮಾರ್ಫ್ ಮಾಡಲಾಗಿದೆ?

    ಮುಂಬೈ: ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ಕಾಜೋಲ್, ರಣವೀರ್ ಸಿಂಗ್ ಮತ್ತು ಅಮೀರ್ ಖಾನ್ ನಂತರ ಡೀಪ್‌ಫೇಕ್‌ಗೆ ಬಲಿಯಾದ ಇತ್ತೀಚಿನ ಸೆಲೆಬ್ರಿಟಿ ಆಲಿಯಾ ಭಟ್. ನಟಿ ವಾಮಿಕಾ ಗಬ್ಬಿ ವೀಡಿಯೋವನ್ನು ಬಳಸಿಕೊಂಡು ಆಲಿಯಾ ಮುಖವನ್ನು ಮಾರ್ಫ್ ಮಾಡಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ನಲ್ಲಿ ಹರಿಬಿಡಲಾಗಿದೆ.

    ಇದನ್ನೂ ಓದಿ: ವಿಶ್ವದಾದ್ಯಂತ ಕೋವಿಡ್ -19 ಲಸಿಕೆ ಹಿಂಪಡೆದ ಅಸ್ಟ್ರಾಜೆನೆಕಾ

    ವೀಡಿಯೊದಲ್ಲಿ ‘ಗಂಗೂಬಾಯಿ ಕಥಿಯಾವಾಡಿ ‘ ನಟಿ ಕೆಂಪು ಸೀರೆಯೊಂದಿಗೆ ಮ್ಯಾಚಿಂಗ್ ಬೋಲ್ಡ್ ಬ್ಲೌಸ್ ಅನ್ನು ಧರಿಸಿದ್ದರು. ಮಿಂಚು ಮತ್ತು ಕೆಂಪು ಹೃದಯದ ಎಮೋಜಿಗಳೊಂದಿಗೆ “ಆಲಿಯಾಭಟ್ ಆಫ್ ಸ್ಕ್ರೀನ್” ಎಂಬ ಶೀರ್ಷಿಕೆಯನ್ನು ವೀಡಿಯೊದಲ್ಲಿ ಬರೆಯಲಾಗಿದೆ.

    ಅಲಿಯಾ ಭಟ್ ಅಭಿಮಾನಿಗಳು ಮಾರ್ಫ್ ಮಾಡಿದ ವೀಡಿಯೊಗೆ ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಳಕೆದಾರರಲ್ಲಿ ಒಬ್ಬರು ಹೀಗೆ ಬರೆದಿದ್ದಾರೆ, “ಇದು ವಾಮಿಕಾ ಗಾಬಿ ಅವರ ನಿಜವಾದ ವೀಡಿಯೊ.. ಅವರ ದೇಹಕ್ಕೆ ಎಐ ಬಳಸಿ ಆಲಿಯಾಳ ಮುಖದೊಂದಿಗೆ ಬದಲಾಯಿಸಸಲಾಗಿದೆ ಎಂದಿದ್ದಾರೆ. ಇನ್ನೊಬ್ಬ ಬಳಕೆದಾರ “ಇದು ಕಾನೂನುಬದ್ಧವೇ?? ಎಂದು ಮೂರನೇ ಬಳಕೆದಾರ ಪ್ರಶ್ನಿಸಿದ್ದಾರೆ, “ಇದು ಹೇಗೆ ಸಾಧ್ಯ @aliaabhatt.” ಎಂದು ಹಲವರು ನಟಿಯನ್ನು ಟ್ಯಾಗ್ ಮಾಡಿ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ 2023ರ ನವೆಂಬರ್ ನಲ್ಲಿ ಆಲಿಯಾ ಇದೇ ರೀತಿ ಡೀಪ್​ಫೇಕ್​ ಗೆ ಒಳಗಾಗಿದ್ದಳು. ಈಗ ಎರಡನೇ ಬಾರಿಗೆ(ಏ.29) ಮತ್ತದೇ ಡೀಪ್​ಫೇಕ್​ ಗೆ ಗುರಿಯಾಗಬೇಕಾದ ಪರಿಸ್ಥಿತಿ ಎದುರಾಗಿದೆ. ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳನ್ನು ಗುರಿಯಾಗಿಸಿಕೊಂಡು ಡೀಪ್‌ಫೇಕ್ ಸೃಷ್ಟಿಸಲಾಗುತ್ತಿದೆ.

    ವಾಮಿಕಾ ಗಬ್ಬಿ ಯಾರು: ವಾಮಿಕಾ ಗಬ್ಬಿ ಕಲಿ ಜೋಟ್ಟ ಮತ್ತು ವಿಡಿ 18 ಚಲನಚಿತ್ರಗಳಲ್ಲಿ ನಟಿಸಿದ್ದಾಳೆ. ಆಕೆ ವರುಣ್ ಧವನ್ ಜೊತೆ ಮುಂದಿನ ಬೇಬಿ ಜಾನ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾಳೆ. ಈ ಚಿತ್ರ ಮೇ 31 ಬಿಡುಗಡೆಯಾಗಬೇಕಿತ್ತಾದರೂ ವಿಳಂಬವಾಗಿದೆ.
    ಮತ್ತೊಂದೆಡೆ, ಕರಣ್ ಜೋಹರ್ ಮತ್ತು ವಾಸನ್ ಬಾಲಾ ಸಹ ನಿರ್ಮಾಣದ ಜಿಗ್ರಾ ಚಿತ್ರದಲ್ಲಿ ಆಲಿಯಾ ಭಟ್ ನಟಿಸುತ್ತಿದ್ದಾರೆ. ಚಿತ್ರವು ಸೆ.27ಕ್ಕೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಆಕೆ ಪ್ರಸ್ತುತ ನ್ಯೂಯಾರ್ಕ್‌ನಲ್ಲಿದ್ದಾರೆ.

    ಸಿಡಿಮದ್ದು ತಯಾರಿಕಾ ಘಟಕದಲ್ಲಿ ಸ್ಫೋಟ: ಇಬ್ಬರು ಮಹಿಳೆಯರಿಗೆ ಗಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts