More

    ಲೋಕಸಭಾ ಚುನಾವಣೆ ಗದಗ ಜಿಲ್ಲೆಯಾದ್ಯಂತ ಬಿರುಸಿನ ಮತದಾನ

    ವಿಜಯವಾಣಿ ಸುದ್ದಿಜಾಲ ಗದಗ
    ಲೋಕಸಭಾ ಚುನಾವಣೆ ಹಿನ್ನೆಲೆ ಬಿರು ಬಿಸಿಲನ್ನು ಲೆಕ್ಕಿಸದೇ ಮತದಾರರು ಬಲು ಬಿರುಸಿನಿಂದಲೇ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾದರು. ಕೆಲವಡೆ ಸಣ್ಣಪುಟ್ಟ ಗೊಂದಲ, ಗಲಾಟೆಗಳನ್ನು ಹೊರತುಪಡಿಸಿ ಜಿಲ್ಲೆಯಾದ್ಯಂತ ಶಾಂತಿಯುತ ಮತದಾನ ಜರುಗಿತು.
    ಕಳೆದ ನಾಲ್ಕೆದು ದಿನಗಳಿಂದ ಜಿಲ್ಲೆಯಲ್ಲಿ ಸರಾಸರಿ 41 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ಹೀಗಿದ್ದರೂ ಸಹ ಬೆಳಗ್ಗೆಯಿಂದಲೇ ಮತಗಟ್ಟೆಯತ್ತ ಜನರು ದಾವಿಸಿ ಬಂದರು. ಬೆಳಗ್ಗೆ ಬಿಸಿಲಿನ ತಾಪಮಾನ ಕಡಿಮೆ ಇರುವ ಹಿನ್ನೆಲೆ ವಯೋ ವೃದ್ಧರು, ಮಧ್ಯ ವಯಸ್ಕರು ಮತಕೇಂದ್ರದತ್ತ ಧಾವಿಸಿ ಬಂದು ಮತದಾನ ಮಾಡಿದರು. ಬೆಳಗ್ಗೆ 9 ಗಂಟೆ ವೇಳೆಗೆ ಶೇ 8.7 ರಷ್ಟು, ಬೆಳಗ್ಗೆ 11 ಗಂಟೆ ವೇಳೆಗೆ ಶೇ 23.37 ರಷ್ಟು, ಮಧ್ಯಾಹ್ನ 1 ಗಂಟೆ ವೇಳೆಗೆ ಶೇ 41.57 ರಷ್ಟು, ಮಧ್ಯಾಹ್ನ 3 ಗಂಟೆ ವೇಳೆಗೆ ಶೇ 55.60 ರಷ್ಟು , ಹಾಗೆಯೇ ಸಂಜೆ 5 ಗಂಟೆ ವೇಳೆಗೆ 67.47 ರಷ್ಟು ಮತ್ತು ಸಂಜೆ 6 ಗಂಟೆಗೆ 77.1 ರಷ್ಟು ಮತದಾನ ಜರುಗಿತ್ತು. ಸಂಜೆ 6ರ ನಂತರವೂ ಮತಗಟ್ಟೆ ಕೇಂದ್ರದಲ್ಲಿ ಜಮಾಯಿಸಿದ್ದ ಜನರಿಗೆ ಮತದಾನ ಚಲಾಯಿಸಲು ಅನುಮತಿಸಿದ ಹಿನ್ನೆಲೆ ಅಂತಿಮವಾಗಿ ಜಿಲ್ಲೆಯಲ್ಲಿ 77 ರಷ್ಟು ಮತದಾನ ಜರುಗಿತು.
    ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದ ಒಟ್ಟು 961 ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹ ಹಾಗೂ ಸಂಭ್ರಮದಿಂದ ಭಾಗವಹಿಸಿದ್ದರು.
    ಜಿಲ್ಲಾ ಉಸ್ತುವಾರಿ ಸಚಿವ ಎಚ್​.ಕೆ. ಪಾಟೀಲರು ಪತ್ನಿ ಹೇಮಾ ಪಾಟೀಲ, ಪುತ್ರಿ ಲಕ್ಷಿ$್ಮ ಪಾಟೀಲ, ಸಹೋದರ ಪಿ.ಕೆ.ಪಾಟೀಲ ಕುಟುಂಬದವರು ಒಟ್ಟಿಗೆ ಆಗಮಿಸಿ ಮತದಾನ ಮಾಡಿದರು. ನರಗುಂದ ಪಟ್ಟಣದ ಸರ್ಕಾರ ಶಾಲೆಯಲ್ಲಿನ ಮತದಾನ ಕೇಂದ್ರದಲ್ಲಿ ಸರದಿ ಸಾಲಿನಲ್ಲಿ ನಿಂತು ಮಾಜಿ ಸಚಿವ, ನರಗುಂದ ಶಾಸಕ ಸಿ.ಸಿ.ಪಾಟೀಲ, ಪತ್ನಿ ಶೋಭಾ ಪಾಟೀಲ, ಪುತ್ರ ಉಮೇಶಗೌಡ ಪಾಟೀಲ ಹಾಗೂ ಸೊಸೆಯಂದಿರೊಂದಿಗೆ ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ಮಾಡಿದರು. ಹಾವೇರಿ ಕ್ಷೇತ್ರದ ಕಾಂಗ್ರೆಸ್​ ಅಭ್ಯಥಿರ್ ಆನಂದಸ್ವಾಮಿ ಗಡ್ಡದೇವರಮಠ ಅವರು ಕುಟುಂಬ ಸಮೇತರಾಗಿ ಆಗಮಿಸಿ ಮತದಾನ ನೆರವೇರಿಸಿದರು. ನಗರದ ಮುಳಗುಂದ ನಾಕಾ ಬಳಿಯ ನೀರಾವರಿ ಇಲಾಖೆ ಕಚೇರಿಯ ಮತಗಟ್ಟೆ ಸಂಖ್​ಎ 124 ರಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಬಿ.ಎಸ್​.ನೇಮಗೌಡ ಅವರು ಮತ ಚಲಾಯಿಸಿದರು.

    ವಿಶೇಷ ಮತಗಟ್ಟೆಗಳು:
    ಜಿಲ್ಲೆಯ ವಿವಿಧ ಕಡೆ ಸ್ಥಾಪಿಸಲಾಗಿದ್ದ ಸಖಿ, ವಿಶೇಷ ಚೇತನರ ಸ್ನೇಹಿ ಮತಗಟ್ಟೆ, ಯುವ ಮತದಾರರ ಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಥೀಮ್​ ಬೇಸಡ್​ ಮತಗಟ್ಟೆ ಸ್ಥಾಪಿಸಲಾಗಿತ್ತು. ಈ ಮತಗಟ್ಟೆಗಳು ಮತದಾರರ ಗಮನ ಸೆಳೆದವು. ಮತಗಟ್ಟೆಯಲ್ಲಿ ನಿಯೋಜನೆಗೊಂಡ ಸಿಬ್ಬಂದಿಗಳಿಗೆ ಕುಡಿಯುವ ನೀರು, ಊಟ ಮತ್ತು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿತ್ತು.
    ಕೆಲವಡೆ ಗೊಂದಲ:
    ಗದಗ ಜಿಲ್ಲೆಯ ಲೆ$್ಮಶ್ವರ ಪಟ್ಟಣದ ಎಪಿಎಂಸಿ ಆಡಳಿತ ಭವನದ ಮತಗಟ್ಟೆಸಂಖ್ಯೆ 99, 107 ಮತಗಟ್ಟೆಯ ವಿವಿ ಪ್ಯಾಟ್​ ಗಳಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆ ಅಲ್ಪ ಗೊಂದಲದ ವಾತಾವರಣ ನಿಮಾರ್ಣವಾಯಿತು. ಅದನ್ನು ತಕ್ಷಣವೇ ಸರಿಪಡಿಸಿದ ಅಧಿಕಾರಿಗಳು ಮತದಾನ ಪ್ರಕ್ರಿಯೆಯ ಪ್ರಾರಂಭಿಸಿದರು. ಇನ್ನುಳಿದಂತೆ ಜಿಲ್ಲೆಯ ಯಾವುದೇ ಭಾಗದಲ್ಲಿ ಈ ಸಮಸ್ಯೆ ಕಂಡು ಬರಲಿಲ್ಲ.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts