ಶಾಸಕನಿಗೆ ಹಾಕಿದ್ರು ಸೇಬಿನ ಹಾರ: ಕರೊನಾ ಲೆಕ್ಕಿಸದೇ ಹಣ್ಣು ತಿನ್ನಲು ಮುಗಿಬಿದ್ರು ಜನ- ವಿಡಿಯೋ ನೋಡಿ...

apple
Published on

ವಿಜಯನಗರ: ಕರೊನಾ ಕ್ಷಣಕ್ಷಣಕ್ಕೂ ಆತಂಕ ಸೃಷ್ಟಿಸುತ್ತಿರುವ ನಡುವೆಯೇ ವಿಜಯನಗರದ ಹರಪನಹಳ್ಳಿ ತಾಲೂಕಿನ ಕೂಲಹಳ್ಳಿ ಗ್ರಾಮದಲ್ಲಿ ವಿವಾದಿತ ಘಟನೆಯೊಂದು ನಡೆದಿದೆ.

ಅದೇನೆಂದರೆ ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಜಿ. ಕರುಣಾಕರ್ ರೆಡ್ಡಿ ಅವರು ನೆರವೇರಿಸಿದ ಭೂಮಿಯ ಪೂಜೆಯಲ್ಲಿ ಆಗಿರುವ ಗಲಾಟೆ ಇದು. ಕರೊನಾ ನಿಯಮವನ್ನು ತಾವೂ ಪಾಲಿಸಿ, ಜನರಿಗೆ ಬುದ್ಧಿ ಹೇಳಬೇಕಿದ್ದ ಶಾಸಕರು ಈ ಬಿಕ್ಕಟ್ಟಿನ ದಿನಗಳಲ್ಲಿ ಸನ್ಮಾನ ಮಾಡಿಸಿಕೊಂಡಿದ್ದಾರೆ. ಅದೂ ನಿಷೇಧಾಜ್ಞೆ ಜಾರಿಯಲ್ಲಿ ಇರುವಾಗ.

ಬರೀ ಸನ್ಮಾನವಷ್ಟೇ ಆಗಿದ್ದರೆ ಪರವಾಗಿರಲಿಲ್ಲ. ಆದರೆ ಇಲ್ಲಿ ಆಗಿದ್ದೇ ಬೇರೆ. ಕರೊನಾ ನಿಯಮಗಳು ಜಾರಿ ಇದ್ದರೂ ಶಾಸಕ ರೆಡ್ಡಿ ಅವರು ತಮ್ಮ ಅಭಿಮಾನಿಗಳಿಂದ ಸೇಬು ಹಣ್ಣಿನ ಹಾರ ಹಾಕಿಸಿಕೊಂಡಿದ್ದಾರೆ. ಭೂಮಿಪೂಜೆಯ ನಂತರ ಅಲ್ಲಿ ಹಾಕಿರುವ ಬೋರ್ಡ್‌ಗೆ ಈ ಹಾರವನ್ನು ಹಾಕಲಾಗಿದೆ. ದುರದೃಷ್ಟಕರ ಸಂಗತಿ ಎಂದರೆ ಕರೊನಾದ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಿ ಹಾರದಿಂದ ಸೇಬುಹಣ್ಣನ್ನು ತಿನ್ನಲು ಜನರು ಮುಗಿಬಿದಿದ್ದಾರೆ! ಬುದ್ಧಿ ಹೇಳಬೇಕಿರುವ ಜನಪ್ರತಿನಿಧಿಗಳೇ ಹೀಗೆ ಮಾಡಿದರೆ ಹೇಗೆ ಎಂದು ಜನರು ಗರಂ ಆಗಿದ್ದಾರೆ.

ನೀವೂ ನೋಡಿ ಈ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net