More

    ಪಿಯುಸಿ ಪರೀಕ್ಷೆ ರದ್ದು- ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ: ಸಚಿವರ ಭರವಸೆಯನ್ನೂ ಕೇಳಲಿಲ್ಲ ಈಕೆ!

    ಶಿರಸಿ (ಉತ್ತರ ಕನ್ನಡ): ದ್ವಿತೀಯ ಪಿಯುಸಿಯ ಪರೀಕ್ಷೆ ರದ್ದಾಗಿರುವ ಹಿನ್ನೆಲೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಖುಷಿಯಿಂದ ಕುಣಿದಾಡುತ್ತಿದ್ದರೆ, ಅದೇ ಇನ್ನೊಂದೆಡೆ, ತುಂಬಾ ಶ್ರಮಪಟ್ಟು ಓದಿ, ರ್ಯಾಂಕ್‌ ಬರುವ ನಿರೀಕ್ಷೆಯಲ್ಲಿ ಕಾದುಕುಳಿತಿರುವ ವಿದ್ಯಾರ್ಥಿಗಳಿಗೆ ಶಾಕ್‌ ಆಗಿದೆ.

    ತುಂಬಾ ಶ್ರಮಪಟ್ಟು ಓದಿದ್ದೇನೆ, ನಮಗೆ ಪರೀಕ್ಷೆ ಬೇಕು ಎಂದುಕೊಳ್ಳುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ಮಾಡಲಾಗುವುದು, ಯಾರೂ ನೊಂದುಕೊಳ್ಳುವ ಅಗತ್ಯವಿಲ್ಲ. ಖಂಡಿತವಾಗಿಯೂ ಪರೀಕ್ಷೆ ನಡೆಸಿ ಅವರ ಆಸೆ ಈಡೇರಿಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಭರವಸೆ ನೀಡಿದ್ದರು. ಪರೀಕ್ಷೆ ರದ್ದತಿ ಕುರಿತಂತೆ ಅವರು ಮಾಹಿತಿ ನೀಡುತ್ತಿದ್ದ ಸಂದರ್ಭದಲ್ಲಿಯೇ ಈ ವಿಷಯವನ್ನೂ ಪ್ರಸ್ತಾಪಿಸಿದರು.

    ಆದರೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ವಿದ್ಯಾರ್ಥಿನಿ ಧನ್ಯಾ ಪರೀಕ್ಷೆ ರದ್ದಾದ ಹಿನ್ನೆಲೆಯಲ್ಲಿ ಮನನೊಂದು ನೇಣಿಗೆ ಶರಣಾಗಿದ್ದಾಳೆ! ಶಿರಸಿಯ ಯಡಳ್ಳಿ ಗ್ರಾಮದ ಧನ್ಯಾ ಶಿರಸಿಯ ಮಾರಿಕಾಂಬಾ ಕಾಲೇಜಿನಲ್ಲಿ ದ್ವಿತೀಯ ಪಿ.ಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾಗಿದ್ದಳು. ಈ ಬಗ್ಗೆ ಶಿರಸಿ ಗ್ರಾಮಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

    ಡಿಎಲ್‌ ಪಡೆಯಲು ಇನ್ನು ಏಜೆಂಟೂ ಬೇಡ, ಆರ್‌ಟಿಒಗೆ ಹೋಗೋ ಅಗತ್ಯವೂ ಇಲ್ಲ- ಆನ್‌ಲೈನ್‌ನಲ್ಲಿಯೂ ಲಭ್ಯ

    ಉಟ್ಟ ಸೀರೆಯಲ್ಲೇ ಮ್ಯಾನ್‌ಹೋಲ್‌ ಒಳಗಿಳಿದ ಮುನ್ಸಿಪಲ್‌ ಅಧಿಕಾರಿ: ಶ್ಲಾಘನೆಗಳ ಮಹಾಪೂರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts