More

    ಇಲಿಗೆ ಸಿಕ್ಕಿತು ಪ್ರತಿಷ್ಠಿತ ಚಿನ್ನದ ಪದಕ, ಶೌರ್ಯ ಪ್ರಶಸ್ತಿ- ಇದರ ಸಾಹಸ ಏನು ಗೊತ್ತಾ?

    ಕಾಂಬೋಡಿಯಾ: ಏನಾದರೊಂದು ಸಾಹಸ ಮಾಡಿದಾಗ ಕೇಂದ್ರ, ರಾಜ್ಯ ಸರ್ಕಾರಗಳಿಂದ ಶೌರ್ಯ ಪ್ರಶಸ್ತಿ ಸಿಗುವುದು ಮಾಮೂಲು. ಅದರಂತೆಯೇ ಸೇನೆಯಲ್ಲಿರುವ ಶ್ವಾನಗಳಿಗೂ ಈ ಪ್ರಶಸ್ತಿಗಳನ್ನು ಕೊಡುವುದುಂಟು.

    ಆದರೆ. ಅಪರೂಪದ ಪ್ರಕರಣದಲ್ಲಿ ಇಲಿಗೆ ಶೌರ್ಯ ಪ್ರಶಸ್ತಿ ಜತೆಗೆ ಚಿನ್ನದ ಪದಕವನ್ನೂ ನೀಡಲಾಗಿದೆ.

    ಇದು ನಡೆದಿರುವುದು ಕಾಂಬೋಡಿಯಾದಲ್ಲಿ. “ಜೀವ ಉಳಿಸುವ ಶೌರ್ಯ ಮತ್ತು ಕರ್ತವ್ಯದ ಭಕ್ತಿ” ಪ್ರಶಸ್ತಿಗೆ ಇಲಿ ಭಾಜನವಾಗಿದೆ.

    ಅಂದಹಾಗೆ ಈ ಇಲಿಯ ಹೆಸರು ಮಗಾವಾ. ಆಫ್ರಿಕಾದ ದೈತ್ಯ ಪೌಚ್ ತಳಿಯ ಇಲಿ ಇದು. ಮನುಷ್ಯರಿಗೆ ಮೃಗಗಳನ್ನು ಪಳಗಿಸುವುದು ಎಂದರೆ ಹೊಸ ವಿಷಯ ಅಲ್ಲವಲ್ಲ. ಅದರಂತೆ ಇಲ್ಲಿ ಈ ತಳಿಯ ಇಲಿಯೊಂದನ್ನು ಪಳಗಿಸಲಾಗಿದ್ದು, ಅದಕ್ಕೆ ವಿಶೇಷ ತರಬೇತಿ ನೀಡಲಾಗಿದೆ.

    ಅದೇನಂದರೆ ಇಲ್ಲಿ ಸ್ಫೋಟಕಗಳನ್ನು ಇರಿಸುವುದು ಮಾಮೂಲಾಗಿದೆ. ಈ ಇಲಿಯು 28 ನೆಲಬಾಂಬ್​ಗಳ ಸುಳಿವನ್ನು ನೀಡಿದ್ದರೆ, 39 ಬಾರಿ ಸ್ಫೋಟಕಗಳನ್ನು ಪತ್ತೆಹಚ್ಚಿವೆ. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜನರು ಮುಂಜಾಗರೂಕತೆ ವಹಿಸಿದ್ದರಿಂದ ಅಪಾರ ಪ್ರಮಾಣ ಸಾವುನೋವು ಕಡಿಮೆಯಾಗಿದೆ ಎಂದು ಮೂಲಗಳು ಹೇಳಿವೆ.

    ಇದನ್ನೂ ಓದಿ: ವಿರಾಟ್​ ಕೊಹ್ಲಿ ಕುರಿತು ಅಸಭ್ಯ ಕಮೆಂಟ್​: ಸುನಿಲ್​ ಗಾವಸ್ಕರ್​ ವಿರುದ್ಧ ಭುಗಿಲೆದ್ದ ಆಕ್ರೋಶ

    ಸ್ಫೋಟಕಗಳೊಳಗಿನ ರಾಸಾಯನಿಕ ಸಂಯುಕ್ತವನ್ನು ಕಂಡುಹಿಡಿಯಲು ಇಲಿಗಳಿಗೆ ತರಬೇತಿ ನೀಡಲಾಗುತ್ತದೆ ಮತ್ತು ಪ್ರಮಾಣೀಕರಿಸುವ ಮೊದಲು ಒಂದು ವರ್ಷದ ತರಬೇತಿಯ ಅಗತ್ಯವಿರುತ್ತದೆ. ಈ ತರಬೇತಿಯನ್ನು ಅಪೋಪೋ ಸಂಸ್ಥೆ ಮಗಾವಾ ಇಲಿಗೆ ನೀಡಿದ್ದು, ಅದು ಸಾಕಷ್ಟು ಪರಿಣತಿ ಪಡೆದಿದೆ. ಈ ಇಲಿಗೆ ಏಳು ವರ್ಷಗಳಾಗಿದ್ದು, ಕೆಲ ವರ್ಷಗಳಿಂದ ಬಾಂಬ್​ ಪತ್ತೆಯನ್ನು ಮಾಡಲು ಇದನ್ನು ಬಳಸಿಕೊಳ್ಳಲಾಗುತ್ತದೆ ಎಂದು ಸಂಸ್ಥೆ ಹೇಳಿದೆ.

    ಒಂದು ಟೆನ್ನಿಸ್​ ಕೋರ್ಟ್​ನಷ್ಟು ಜಾಗದಲ್ಲಿ ನೆಲಬಾಂಬ್​ಗಳನ್ನು ಇಟ್ಟರೆ, ಅದನ್ನು ಡಿಟೆಕ್ಟರ್​ ಮೂಲಕ ಕಂಡುಹಿಡಿಯಲು ಮೂರ್ನಾಲ್ಕು ದಿನಗಳು ಬೇಕಾಗಬಹುದು. ಆದರೆ ಈ ಇಲಿಯು ಕೇವಲ 20 ನಿಮಿಷದಲ್ಲಿ ಸಂಪೂರ್ಣ ಚೆಕ್​ ಮಾಡಿ ಬಾಂಬ್​ ಇರುವಿಕೆ ಸ್ಥಳವನ್ನು ಪತ್ತೆಹಚ್ಚಬಲ್ಲುದು ಎನ್ನುತ್ತಾರೆ ಅಪೋಪೊ ಸಂಸ್ಥೆಯ ತರಬೇತುದಾರರು.

    ಚಿಕ್ಕಮ್ಮನನ್ನು ಕೊಲ್ಲಲು 9 ವರ್ಷದ ಮಗನಿಗೆ ಟ್ರೇನಿಂಗ್​ ಕೊಟ್ಟ ಅಪ್ಪ- ಮುಂದೆ ಆದದ್ದೆಲ್ಲವೂ ಅನಾಹುತವೇ!

    ರಫೇಲ್ ಯುದ್ಧ ವಿಮಾನಕ್ಕೆ ಮಹಿಳಾ ಸಾರಥ್ಯ: ಮೊದಲ ವನಿತೆಯಾಗಿ ಮಿಂಚಿದ ಶಿವಾನಿ

    ಶೌಚಗೃಹದಲ್ಲಿ ಸಿಸಿಟಿವಿ ಇಟ್ಟು ಬ್ಲ್ಯಾಕ್​ಮೇಲ್​- ಸಂಬಳವಿಲ್ಲದೇ ಶಿಕ್ಷಕಿಯರ ದುಡಿತ!

    ಹಲ್ಲುಜ್ಜುವಾಗ ಪೇಸ್ಟ್​ ಅಲ್ಲ… ಟೂಥ್​ಬ್ರಷನ್ನೇ​ ನುಂಗಿದ! ಮುಂದೇನಾಯ್ತು ನೋಡಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts