More

    ರಫೇಲ್ ಯುದ್ಧ ವಿಮಾನಕ್ಕೆ ಮಹಿಳಾ ಸಾರಥ್ಯ: ಮೊದಲ ವನಿತೆಯಾಗಿ ಮಿಂಚಿದ ಶಿವಾನಿ

    ನವದೆಹಲಿ: ಇತ್ತೀಚಿನ ವರ್ಷಗಳಲ್ಲಿ ಸೇನೆಯ ಪ್ರತಿಯೊಂದು ಘಟಕಗಳಲ್ಲಿಯೂ ಮಹಿಳಾ ಪ್ರಾಬಲ್ಯ ಹೆಚ್ಚುತ್ತಲೇ ಸಾಗಿದೆ. ಸಮಾನತೆ ಸಮಾನತೆ ಎಂದು ಪ್ರತಿಭಟನೆಗೆ ಇಳಿಯುವುದಕ್ಕಷ್ಟೇ ಸೀಮಿತವಾಗಿರುವ ಒಂದು ವರ್ಗದ ನಡುವೆಯೇ, ಪುರುಷರಿಗಷ್ಟೇ ಸೀಮಿತ ಎನ್ನಲಾಗಿದ್ದ ಸೇನೆಯ ಪ್ರತಿಯೊಂದು ಕಾರ್ಯವನ್ನು ಸದ್ದಿಲ್ಲದೇ ನಿರ್ವಹಿಸುತ್ತಿದ್ದಾರೆ ವನಿತೆಯರು.

    ಇದೀಗ ರಫೇಲ್ ಯುದ್ಧ ವಿಮಾನದ ಸರದಿ. ಈ ಯುದ್ಧ ವಿಮಾನಕ್ಕೆ ಪ್ರಥಮ ಮಹಿಳಾ ಪೈಲಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಶಿವಾಂಗಿ ಸಿಂಗ್. ವಾರಣಾಸಿಯ ಫೈಟ್ ಲೆಫ್ಟಿನೆಂಟ್ ಶಿವಾನಿ ಅವರು ಇದೇ 10ರಂದು ಭಾರತೀಯ ವಾಯುಪಡೆಗೆ ಅಧಿಕೃತವಾಗಿ ನೇಮಕಗೊಂಡಿದ್ದರು.

    ಶಿವಾಂಗಿ ಅಂಬಾಲದಲ್ಲಿ ರಫೇಲ್ ವಿಮಾನವನ್ನು ಹಾರಿಸುವ ತರಬೇತಿ ಪಡೆಯುತ್ತಿದ್ದಾರೆ. ಶೀಘ್ರವೇ ಇವರು ಅಂಬಾಲದ ಗೋಲ್ಡನ್ ಆಯರೋಸ್ ವಾಯುನೆಲೆಯಲ್ಲಿರುವ 17 ಸ್ಕ್ವಾಡ್ರನ್‌ನ ರಫೇಲ್ ಯುದ್ಧ ವಿಮಾನಗಳನ್ನು ಚಲಾಯಿಸಲಿದ್ದಾರೆ ಎನ್ನಲಾಗಿದೆ.

    ಉತ್ತರ ಪ್ರದೇಶದ ವಾರಣಾಸಿಯವರಾದ ಶಿವಾಂಗಿ ಸಿಂಗ್ ಐಎಎಫ್‌ನ 10 ಮಹಿಳಾ ಫೈಟರ್ ಪೈಲಟ್‌ಗಳಲ್ಲಿ ಒಬ್ಬರು. ಅವರು 2017 ರಲ್ಲಿ ವಾಯುಪಡೆಗೆ ಸೇರಿದ್ದರು ಮತ್ತು ಮಿಗ್ -21 ಫೈಟರ್ ಜೆಟ್ ಚಲಾಯಿಸುತ್ತಿದ್ದಾರೆ. ಇತ್ತೀಚಿನವರೆಗೂ ಅವರು ರಾಜಸ್ಥಾನದ ಫೈಟರ್ ಬೇಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.

    ಇದನ್ನೂ ಓದಿ: ಚಿಕ್ಕಮ್ಮನನ್ನು ಕೊಲ್ಲಲು 9 ವರ್ಷದ ಮಗನಿಗೆ ಟ್ರೇನಿಂಗ್​ ಕೊಟ್ಟ ಅಪ್ಪ- ಮುಂದೆ ಆದದ್ದೆಲ್ಲವೂ ಅನಾಹುತವೇ!

    ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದಿರುವ ಶಿವಾನಿ, ರಾಜಸ್ಥಾನದ ವಾಯುನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ರಾಜಸ್ಥಾನದ ಗಡಿ ತಳದಲ್ಲಿ ಇವರು ಸೇವೆ ಸಲ್ಲಿಸಿದ್ದಾರೆ, ಅಲ್ಲಿ ಅವರು ದೇಶದ ಪ್ರಸಿದ್ಧ ಪೈಲಟ್‌ಗಳಲ್ಲಿ ಒಬ್ಬರಾದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ ಜತೆ ಸಹ ಕೆಲಸ ಮಾಡಿದ್ದಾರೆ ಎಂದು ಸೇನೆಯ ಮೂಲಗಳು ಹೇಳಿವೆ.

    ‘ಇದು ನಮಗೆ ಹೆಮ್ಮೆಯ ವಿಷಯ. ಆಕೆಯ ಪರಿಶ್ರಮದ ಫಲ ಇದು. ನಾವು ಆಕೆಗೆ ಬೆಂಬಲ ನೀಡಿದ್ದೆವು. ನಮಗೆ ತುಂಬಾ ಖುಷಿಯಾಗಿದೆ’ ಎಂದು ಶಿವಾಂಗಿ ಅವರ ಅಪ್ಪ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

    ಭಾರತೀಯ ವಾಯುಪಡೆಯಲ್ಲಿ ಸದ್ಯ 1,875 ಮಹಿಳಾ ಅಧಿಕಾರಿಗಳಿದ್ದಾರೆ. ಈ ಪೈಕಿ 10 ಫೈಟರ್ ಪೈಲಟ್‌ಗಳು ಮತ್ತು 18 ಮಂದಿ ನಾವಿಗೇಟರ್‌ಗಳು ಇದ್ದಾರೆ.
    ಸೆಪ್ಟೆಂಬರ್ 2016 ರಲ್ಲಿ ಭಾರತವು 59,000 ಕೋಟಿ ರೂ. ಮೌಲ್ಯದ ಒಪ್ಪಂದದಲ್ಲಿ ಫ್ರಾನ್ಸ್‌ನಿಂದ 36 ರಫೇಲ್ ಜೆಟ್‌ಗಳನ್ನು ಪಡೆದುಕೊಂಡಿತ್ತು. ಇದೇ 10 ರಂದು ಅಂಬಾಲಾ ವಾಯುನೆಲೆಯಲ್ಲಿ ವಾಯುಪಡೆಯು ಔಪಚಾರಿಕವಾಗಿ ವಿಮಾನಗಳನ್ನು ಸೇರ್ಪಡೆಗೊಳಿಸಿತು.

    ಪಾಕಿಗಳಿಂದ ಅಪಹರಣಗೊಂಡು 73 ವರ್ಷದ ಬಳಿಕ ತವರನ್ನು ಕಂಡವಳ ಕಣ್ಣೀರ ಕಥೆಯಿದು…

    ಹಲ್ಲುಜ್ಜುವಾಗ ಪೇಸ್ಟ್​ ಅಲ್ಲ… ಟೂಥ್​ಬ್ರಷನ್ನೇ​ ನುಂಗಿದ! ಮುಂದೇನಾಯ್ತು ನೋಡಿ…

    ಡ್ರಗ್ಸ್​ ಕೇಸ್​: ಮಾಧ್ಯಮಗಳಿಗೆ ನಿರೂಪಕಿ ಅನುಶ್ರೀ ಮಾಡಿಕೊಂಡರೊಂದು ಮನವಿ…

    ಚಿಕ್ಕಮ್ಮನನ್ನು ಕೊಲ್ಲಲು 9 ವರ್ಷದ ಮಗನಿಗೆ ಟ್ರೇನಿಂಗ್​ ಕೊಟ್ಟ ಅಪ್ಪ- ಮುಂದೆ ಆದದ್ದೆಲ್ಲವೂ ಅನಾಹುತವೇ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts