More

    ಹಲ್ಲುಜ್ಜುವಾಗ ಪೇಸ್ಟ್​ ಅಲ್ಲ… ಟೂಥ್​ಬ್ರಷನ್ನೇ​ ನುಂಗಿದ! ಮುಂದೇನಾಯ್ತು ನೋಡಿ…

    ರೋಯಿಂಗ್ ಲೋವರ್ ಡಿಬಾಂಗ್​ (ಅರುಣಾಚಲಪ್ರದೇಶ): ಹಲ್ಲುಜ್ಜುವಾಗ ಸಾಮಾನ್ಯವಾಗಿ ಪೇಸ್ಟ್​ ಹೊಟ್ಟೆಗೆ ಹೋಗುವುದು ಸಹಜ. ಆದರೆ ಇಲ್ಲೊಬ್ಬ ವ್ಯಕ್ತಿ ಪೇಸ್ಟ್​ ಅಲ್ಲ, ಬದಲಿಗೆ ಟ್ರೂಥ್​ಬ್ರಷನ್ನೇ ನುಂಗಿಬಿಟ್ಟಿದ್ದಾನೆ!

    ಇದೊಂದು ವಿಲಕ್ಷಣೆ ಘಟನೆ ನಡೆದಿರುವುದು ಅರುಣಾಚಲ ಪ್ರದೇಶದ ರೋಯಿಂಗ್ ಲೋವರ್ ಡಿಬಾಂಗ್​ ಎಂಬ ಪ್ರದೇಶದಲ್ಲಿ.
    39 ವರ್ಷದ ಈ ವ್ಯಕ್ತಿಯೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅದೃಷ್ಟವಶಾತ್​ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬ್ರಷ್​ ಎಲ್ಲಿ ಹೋಗಿದೆ ಎಂದು ಹುಡುಕಲು ವೈದ್ಯರು ಹರಸಾಹಸ ಮಾಡಬೇಕಾಗಿ ಬಂದಿತ್ತಂತೆ!

    ಅಷ್ಟಕ್ಕೂ ಆಗಿದ್ದೇನೆಂದರೆ ಈತ ಹಲ್ಲುಜ್ಜುವಾಗ ಗಂಟಲನ್ನು ಇದೇ ಬ್ರಷ್​ನಿಂದ ಸ್ವಚ್ಛಮಾಡಲು ಹೋಗಿದ್ದಾನೆ. ಈತ ಹಲ್ಲನ್ನು ಉಜ್ಜುತ್ತಿದ್ದುದು ಸುಮಾರು 19 ಸೆಂಟಿಮೀಟರ್​ ಉದ್ದವಿರುವ ಬ್ರಷ್​ನಿಂದ ಅಕಸ್ಮಾತ್ತಾಗಿ ಅದು ಗಂಟಲಿಗೆ ಜಾರಿ ಹೋಗಿ ಸಿಲುಕಿಕೊಂಡು ಬಿಟ್ಟಿದೆ.

    ಮಾತನಾಡಲೂ ಆಗದೆ, ಉಸಿರಾಡಲೂ ಆಗದೇ ನರಳುತ್ತಿದ್ದ ಈತನನ್ನು ಕೂಡಲೇ ಸಮೀಪದ ಬಾಕಿನ್ ಪರ್ಟಿನ್ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಈತನ ಮನೆಯವರಿಂದ ವಿಷಯ ತಿಳಿದ ವೈದ್ಯರೇ ಹುಬ್ಬೇರಿಸಿದ್ದಾರೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ರೈತ ಪ್ರತಿಭಟನೆಯ ತೀವ್ರತೆ ಹೇಗಿದೆ?

    ನಂತರ ವೈದ್ಯರು ಎಕ್ಸರೆ ನಡೆಸಿದರು. ಬ್ರಷ್​ ಅನ್ನನಾಳದಲ್ಲಿ ಸಿಲುಕಿರುವ ಸಾಧ್ಯತೆ ಇದೆ ಎಂದು ಮೊದಲು ಅನ್ನನಾಳದ ಸಮೀಪ ಎಕ್ಸ್​ರೇ ಮಾಡಿದ್ದಾರೆ. ಆದರೆ ಅಲ್ಲಿ ಬ್ರಷ್​ ಕಾಣಿಸಲಿಲ್ಲ. ನಂತರ ಹೊಟ್ಟೆಯನ್ನು ಪರೀಕ್ಷಿಸಿದಾಗ ಅಲ್ಲೊಂದು ಕಡೆ ಈ ಬ್ರಷ್​ ಹೋಗಿ ಕುಳಿತುಕೊಂಡಿರುವುದು ಕಂಡುಬಂದಿದೆ.

    ನಂತರ ಲ್ಯಾಪರೊಟಮಿ ಪರೀಕ್ಷೆಗೆಂದು ಬೇರೊಂದು ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸಲಹೆ ನೀಡಿದರು. ಅಲ್ಲಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬ್ರಷ್​ ತೆಗೆಯಲಾಗಿದೆ. ಅದೃಷ್ಟವಶಾತ್​ ಹೊಟ್ಟೆಯ ಮೇಲ್ಭಾಗದಲ್ಲಿ ಚಿಕ್ಕ ಪ್ರಮಾಣದ ಗಾಯಗಳಾಗಿರುವುದು ಬಿಟ್ಟರೆ ಬ್ರಷ್​ ಹೆಚ್ಚಿನ ಅನಾಹುತ ಮಾಡಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.

    ಅರ್ಧ ಗಂಟೆ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಈತ ಆರೋಗ್ಯದಿಂದ ಇದ್ದಾನೆ. ಸದ್ಯ ಸರ್ಜಿಕಲ್ ವಾರ್ಡ್‌ನಲ್ಲಿ ಇರಿಸಲಾಗಿದ್ದು, ಈತ ಹುಷಾರಾಗಿದ್ದಾನೆ ಎಂದು ಡಾ. ಬೊಮ್ನಿ ತಯೆಂಗ್ ತಿಳಿಸಿದ್ದಾರೆ. ಕುಟುಂಬಸ್ಥರ ಮನವಿ ಮೇರೆಗೆ ವ್ಯಕ್ತಿಯ ಹೆಸರನ್ನು ವೈದ್ಯರು ಬಹಿರಂಗಪಡಿಸಿಲ್ಲ.

    ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

    ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ​₹10 ಕೋಟಿ! ಬ್ಯಾಲೆನ್ಸ್​ ಕೇಳಿ ಮೂರ್ಛೆ ಹೋದ ಅಮ್ಮ-ಮಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts