More

    ಸಾಲದ ಇಎಂಐಯಿಂದ 2 ವರ್ಷ ಮುಕ್ತಿಗೆ ನೀವೂ ಅರ್ಹರಾ? ಅರ್ಜಿ ಸಲ್ಲಿಕೆ ಹೇಗೆ? ಇಲ್ಲಿದೆ ಫುಲ್​ ಡಿಟೇಲ್ಸ್​

    ನವದೆಹಲಿ: ಕರೊನಾ ಬಿಕ್ಕಟ್ಟು ಹಾಗೂ ಅದರ ನಂತರ ಉಂಟಾದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಅವೆಷ್ಟೋ ವ್ಯವಹಾರಗಳು ನಿಂತು ಹೋಗಿವೆ. ಇದೇ ಕಾರಣಕ್ಕೆ ಬ್ಯಾಂಕ್​ಗಳಿಂದ ತೆಗೆದುಕೊಂಡಿರುವ ವಿವಿಧ ಸಾಲಗಳ ಇಎಂಐ ಕಟ್ಟಲಾಗದೇ ತೊಂದರೆ ಅನುಭವಿಸುತ್ತಿದ್ದಾರೆ.

    ಗೃಹ, ಶಿಕ್ಷಣ, ವಾಹನ ಅಥವಾ ವೈಯಕ್ತಿಕ ಸಾಲಗಳು ಈ ವ್ಯಾಪ್ತಿಗೆ ಬರುತ್ತವೆ. ಅಂಥವರು ಇನ್ನೆರಡು ವರ್ಷಗಳವರೆಗೆ ಇಎಂಐ ಕಟ್ಟಬೇಕಿಲ್ಲ. ಎರಡು ವರ್ಷಗಳ ನಂತರ ಇಎಂಐ ಮುಂದುವರೆಸಬೇಕು ಎಂದು ನಿನ್ನೆಯಷ್ಟೇ ಸ್ಟೇಟ್​ ಬ್ಯಾಂಕ್ ಆಫ್​ ಇಂಡಿಯಾ ಹೇಳಿದೆ.

    ಆದರೆ ಸ್ಟೇಟ್​ ಬ್ಯಾಂಕ್​ ಈ ಕುರಿತು ಕೆಲವೊಂದು ಸ್ಪಷ್ಟನೆಗಳನ್ನು ನೀಡಿದೆ. ಯಾರೆಲ್ಲಾ ಈ ಯೋಜನೆಗೆ ಅರ್ಹರು ಎಂಬ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ಸ್ಪಷ್ಟಪಡಿಸಿದೆ.
    ಬ್ಯಾಂಕ್​ ಹೇಳಿರುವುದು ಹೀಗೆ:

    * ಇದಾಗಲೇ ಹೇಳಿರುವಂತೆ ಇಐಎಂ ಎರಡು ವರ್ಷ ಮುಂದೂಡಿದ ಮಾತ್ರಕ್ಕೆ ಗ್ರಾಹಕರು ತುಂಬಬೇಕಿರುವ ಮೊತ್ತವು ಕಡಿಮೆಯಾಗುತ್ತದೆ ಎಂಬ ಅರ್ಥ ಕಲ್ಪಿಸಕೂಡದು. ಏಕೆಂದರೆ, ಈ ಸೌಲಭ್ಯದ ಪ್ರಯೋಜನ ಪಡೆದುಕೊಳ್ಳುವವರು ಎರಡು ವರ್ಷಗಳವರೆಗೆ ಕಂತನ್ನು ತುಂಬಬೇಕಿಲ್ಲ ಎನ್ನುವುದು ನಿಜವಾದರೂ, ಈ ಅವಧಿ ಮುಗಿದ ಮೇಲೆ ಶೇ. 0.35 ರಷ್ಟು ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

    1) 24 ತಿಂಗಳ ಅವಧಿಯು ಗರಿಷ್ಠ ಅವಧಿಯಾಗಿದೆ. ಆದ್ದರಿಂದ ಆ ನಂತರ ಹೆಚ್ಚುವರಿ ಬಡ್ಡಿ ಕಟ್ಟಲು ಇಷ್ಟವಿಲ್ಲದ ಸಾಲಗಾರರು 1 ರಿಂದ 24 ತಿಂಗಳ ಮೊರಟೋರಿಯಂ ಆಯ್ಕೆ ಮಾಡಿಕೊಳ್ಳಬಹುದಾಗಿದೆ.

    2) ಈ ಯೋಜನೆಗೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಸಾಲಗಾರರದ್ದು ‘ಪ್ರಮಾಣಿತ ಖಾತೆ’ ( ‘standard account’) ಆಗಿರಬೇಕು.

    3) ಮಹತ್ವದ ವಿಷಯ ಎಂದರೆ, ಕರೊನಾ, ಲಾಕ್​ಡೌನ್​ ಸಮಯದಲ್ಲಿ ವೇತನ ಅಥವಾ ಆದಾಯವು ಕರೊನಾ ಅವಧಿಯಲ್ಲಿ ಪಡೆಯುತ್ತಿರುವ ವೇತನಕ್ಕಿಂತ ಕಡಿಮೆಯಾಗಿರಬೇಕು. ಅಂದರೆ 2020ರ ಫೆಬ್ರವರಿಗೆ ಹೋಲಿಸಿದರೆ 2020ರ ಆಗಸ್ಟ್​ನ ವೇತನ ಅಥವಾ ಆದಾಯ ಕಡಿಮೆಯಾಗಿರಬೇಕು.

    4) ಈ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡಿರಬೇಕು ಇಲ್ಲವೇ ಉದ್ಯೋಗ/ವ್ಯಾಪಾರ ನಷ್ಟವಾಗಿ ಅದನ್ನು ಬಂದ್​ ಮಾಡಿರಬೇಕು.

    5) ಸ್ವಯಂ ಉದ್ಯೋಗಿಗಳು, ವೃತ್ತಿಪರರು/ಉದ್ಯಮಿಗಳು ಸಾಲ ಪಡೆದಿದ್ದರೆ, ಅವರ ಉದ್ಯಮ/ಘಟಕ/ ಅಂಗಡಿ/ ವ್ಯಾಪಾರ ಚಟುವಟಿಕೆ ಕರೊನಾ ಸಮಯದಲ್ಲಿ ಬಂದ್​ ಆಗಿ ನಷ್ಟ ಅನುಭವಿಸಿರಬೇಕು ಇಲ್ಲವೇ ಶಾಶ್ವತವಾಗಿ ಅದನ್ನು ಬಂದ್​ ಮಾಡಿರಬೇಕು.

    6) 2020ರ ಮಾರ್ಚ್ 1ಕ್ಕಿಂತ ಮೊದಲು ಸಾಲ ಪಡೆದ ಹಾಗೂ ಕೋವಿಡ್-19 ಲಾಕ್‌ಡೌನ್‌ವರೆಗೆ ಸಾಲಮರುಪಾವತಿ ಕಂತನ್ನು ನಿಗದಿತ ಅವಧಿಯಲ್ಲಿ ಕಟ್ಟುತ್ತಾ ಬಂದಿರಬೇಕು.

    ಇದನ್ನೂ ಓದಿ: ಎಸ್​ಬಿಐ ಸಾಲಗಾರರಿಗೆ ಗುಡ್​ನ್ಯೂಸ್​: ಇಎಂಐಯಿಂದ ಎರಡು ವರ್ಷ ಮುಕ್ತಿ- ಷರತ್ತುಗಳು ಇಲ್ಲಿವೆ…

    ಅರ್ಜಿ ಸಲ್ಲಿಕೆ ಹೇಗೆ?

    ಈ ಮೇಲಿನ ಷರತ್ತುಗಳು ನಿಮಗೆ ಅನ್ವಯ ಆಗುವುದೇ ಆಗಿದ್ದಲ್ಲಿ, ನೀವು ಎಸ್​ಬಿಐ ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು (ನಕಲಿ ವೆಬ್​ಸೈಟ್​ಗಳ ಬಗ್ಗೆ ಇರಲಿ ಎಚ್ಚರ). ನಿಮ್ಮ ಅಕೌಂಟ್​ ಇರುವ ಬ್ಯಾಂಕ್​ಗೆ ಖುದ್ದಾಗಿ ಹೋಗಿಯೂ ಅರ್ಜಿ ಸಲ್ಲಿಸುವ ಅವಕಾಶವಿದೆ.

    ವೆಬ್​ಸೈಟ್​ ಓಪನ್​ ಮಾಡಿದ ಸಂದರ್ಭದಲ್ಲಿ ನಿಮ್ಮ ವೈಯಕ್ತಿಕ ಕೆಲವೊಂದು ವಿವರಗಳನ್ನು ಕೇಳಲಾಗುತ್ತದೆ (ಖಾತೆ ಸಂಖ್ಯೆಗಳು ಮತ್ತು ಮೊಬೈಲ್ ಸಂಖ್ಯೆ ಇತ್ಯಾದಿ) ನಂತರ, ಒಟಿಪಿ ಮೂಲಕ ಅರ್ಜಿಯನ್ನು ಮಾನ್ಯ ಮಾಡಲಾಗುತ್ತದೆ. ಅಲ್ಲಿ ಕೆಲವೊಂದು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆಗ ನೀವು ಈ ಯೋಜನೆಗೆ ಅರ್ಹರೇ ಎಂಬುದನ್ನು ತಿಳಿಯಲು ಒಂದು ಉಲ್ಲೇಖ ಸಂಖ್ಯೆ (reference number) ನೀಡಲಾಗುತ್ತದೆ. ಈ ಸಂಖ್ಯೆ 30 ದಿನಗಳ ಕಾಲ ಮಾನ್ಯವಾಗಿರುತ್ತದೆ. ಉಳಿದ ವಿಷಯಗಳು ಅಲ್ಲಿಯೇ ಉಲ್ಲೇಖಗೊಂಡಿವೆ.

    ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸುವ ಮುನ್ನ ಇವುಗಳನ್ನು ರೆಡಿ ಇಟ್ಟುಕೊಳ್ಳಿ

    1) 2020ರ ಫೆಬ್ರವರಿ ತಿಂಗಳ ಮತ್ತು ಕೊನೆಯ/ ಅರ್ಜಿ ಸಲ್ಲಿಸುವ ತಿಂಗಳ ವೇತನ ಸ್ಲಿಪ್.

    2) ಕೆಲಸದಿಂದ ವಜಾಗೊಂಡಿದ್ದರೆ, ಬಿಡುಗಡೆ ಪತ್ರ

    3) ಫೆಬ್ರುವರಿ ತಿಂಗಳಿನಿಂದ ನೀವು ಈ ಅರ್ಜಿ ಸಲ್ಲಿಸುವ 15 ದಿನಗಳ ಮುಂಚೆ ಮಾಡಿರುವ ಅಕೌಂಟ್​ ಸ್ಟೇಟ್​ಮೆಂಟ್​ಗಳು

    4) ತಮ್ಮ ವ್ಯಾಪಾರದ ಮೇಲೆ ಕರೊನಾ, ಲಾಕ್​ಡೌನ್​ ಪರಿಣಾಮ ಬೀರಿದೆ ಎಂದು ಹೇಳುವ ಡಿಕ್ಲರೇಷನ್​.

    ಕರೊನಾ ತಡೆಯಲು ಅಯೋಡಿನ್ ದ್ರಾವಣ: ಸಂಶೋಧಕರಿಂದ ನೂತನ ಆವಿಷ್ಕಾರ

    ಶೂಟಿಂಗ್​ನಲ್ಲಿ ತಗುಲಿದ ಸೋಂಕು: ನಟಿ ಆಶಾಲತಾ ಕರೊನಾಕ್ಕೆ ಬಲಿ

    ಬಾಲಕಿಯ ಬ್ಯಾಂಕ್ ಖಾತೆಯಲ್ಲಿ ​₹10 ಕೋಟಿ! ಬ್ಯಾಲೆನ್ಸ್​ ಕೇಳಿ ಮೂರ್ಛೆ ಹೋದ ಅಮ್ಮ-ಮಗಳು

    ನಿಮ್ಮ ವಸ್ತುಗಳು ಕಳೆದುಹೋಗಿವ್ಯಾ? ಇನ್ಮುಂದೆ ಮನೆಯಲ್ಲೇ ಕೂತು ಕಂಪ್ಲೇಟ್​ ಕೊಡ್ಬೋದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts