ವಿರಾಟ್​ ಕೊಹ್ಲಿ ಕುರಿತು ಅಸಭ್ಯ ಕಮೆಂಟ್​: ಸುನಿಲ್​ ಗಾವಸ್ಕರ್​ ವಿರುದ್ಧ ಭುಗಿಲೆದ್ದ ಆಕ್ರೋಶ

sunil gavaskar
Published on

ನವದೆಹಲಿ: ಭಾರತದ ಕ್ರಿಕೆಟ್ ದಂತಕತೆ ಎಂದೇ ಖ್ಯಾತಿ ಗಳಿಸಿರುವ ಸುನಿಲ್​ ಗಾವಸ್ಕರ್​ ಅವರು ಇದೀಗ ವಿವಾದದ ಸುಳಿಯಲ್ಲಿ ಸಿಲುಕಿದ್ದಾರೆ. ಅಸಂಖ್ಯ ಅಭಿಮಾನಿ ಬಳಗವನ್ನು ಪಡೆದಿರುವ ಇವರು, ಕ್ರಿಕೆಟಿಗ ವಿರಾಟ್​ ಕೊಹ್ಲಿ ವಿರುದ್ಧ ಅಸಭ್ಯ ಪದ ಬಳಕೆ ಮಾಡುವ ಮೂಲಕ ಬಹುತೇಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ 6ನೇ ಪಂದ್ಯದ ವೇಳೆ ಕೆಟ್ಟ ಪದ ಬಳಕೆ ಮಾಡಿರುವ ಗಾವಸ್ಕರ್​ ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದಲೇ ಕಿತ್ತು ಎಸೆಯಿರಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ದೊಡ್ಡ ಅಭಿಯಾನವೇ ಶುರುವಾಗಿದೆ.

ದುಬೈ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್-ಕಿಂಗ್ಸ್‌ ಇಲೆವೆನ್ ಪಂಜಾಬ್‌ ನಡುವಿನ ಪಂದ್ಯದಲ್ಲಿ ಕಾಮೆಂಟರಿ ನೀಡುತ್ತಿದ್ದ ಗಾವಸ್ಕರ್​, ಕೊಹ್ಲಿ ಕುರಿತು ನೀಡಿದ ಹೇಳಿಕೆ ಇದಾಗಿದೆ.

ಕಿಂಗ್ಸ್‌ ಇಲೆವೆನ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಕೆಎಲ್ ರಾಹುಲ್ ಅವರ ಕ್ಯಾಚ್ ಅನ್ನು ಎರಡೆರಡು ಬಾರಿ ಬಿಟ್ಟಿದ್ದರು. ಬಳಿಕ ಬ್ಯಾಟಿಂಗ್ ವೇಳೆ ಕ್ರೀಸ್​ಗೆ ಬಂದ ಕೊಹ್ಲಿ ಕೇವಲ 1 ರನ್‌ ಅಷ್ಟೇ ಮಾಡಿ ವಿಕೆಟ್ ಒಪ್ಪಿಸಿದರು. ಇದು ಬೆಂಗಳೂರಿಗೆ ಮುಳುವಾಯಿತು.

ಆಗ ಕಾಮೆಂಟರಿ ನೀಡುತ್ತಿದ್ದ ಸುನಿಲ್ ಗಾವಸ್ಕರ್​, ಕೊಹ್ಲಿ ಅವರನ್ನು ಟೀಕಿಸುವ ಭರದಲ್ಲಿ, 'Inhone lockdown me to bas Anushka ki gendon ki practice ki hai' (ಲಾಕ್​ಡೌನ್​ ಸಮಯದಲ್ಲಿ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ ಚೆಂಡುಗಳ ವಿರುದ್ಧ ಮಾತ್ರ ಅಭ್ಯಾಸ ಮಾಡಿದ್ದಾರೆ) ಎನ್ನುವ ಅಸಭ್ಯ ಕಮೆಂಟ್​ ಮಾಡಿದ್ದಾರೆ.

ಇದೀಗ ಭಾರಿ ಟೀಕೆಗೆ ಗುರಿಯಾಗಿದೆ. ಅವರನ್ನು ಕಾಮೆಂಟರಿ ಪ್ಯಾನೆಲ್‌ನಿಂದಲೇ ಕಿತ್ತು ಹಾಕಬೇಕೆಂದು ಅನೇಕರು ಟ್ವಿಟರ್‌ ಮೂಲಕ ಒತ್ತಾಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net