ಪ್ರೀತಿ ಎಂದ್ರೆ ಗಾಳಿ- ಫೀಲ್‌ ಮಾಡಿದ್ರಷ್ಟೇ ಗೊತ್ತಾಗೋದು ಎಂದು ಐದು ವರ್ಷ ಒಟ್ಟಿಗಿದ್ದು ಎಸ್ಕೇಪ್ ಆದವನಿಗೆ ಕೊಟ್ಟಳು ಗೂಸಾ!

love case
Published on

ಕಲಬುರಗಿ: ಇದು ಕಲಬುರಗಿ ತಾಲ್ಲೂಕಿನ ಪಟ್ನಾ ಗ್ರಾಮದ ನಿವಾಸಿ ಇರ್ಫಾನ್ ಹಾಗೂ ಬೆಂಗಳೂರಿನ ರಹೀನಾ ರಾನು ಪ್ರೇಮಕಥೆ.

ಒಂದೆ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಇವರಿಬ್ಬರೂ ಐದು ವರ್ಷಗಳಿಂದ ಲವ್‌ ಮಾಡುತ್ತಿದ್ದರು. ಬೆಂಗಳೂರಿನ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಮದುವೆ ರಿಜಿಸ್ಟಾರ್ ಕೂಡ ಮಾಡಿಸಿಕೊಂಡಿದ್ದರು. ಆದರೆ ಈ ನಡುವೆಯೇ ರಹೀನಾ ಮೇಲೆ ಸಂದೇಹ ವ್ಯಕ್ತಪಡಿಸಿದ ಇರ್ಫಾನ್‌ ಆಕೆಗೆ ಅಕ್ರಮ ಸಂಬಂಧ ಇದೆ ಎಂದು ಹೇಳಿಕೊಂಡು ಬೆಂಗಳೂರು ಬಿಟ್ಟು ಎಸ್ಕೇಪ್‌ ಆಗಿದ್ದ.

ಆತನನ್ನು ಹುಡುಕಿಕೊಂಡು ಬೆಂಗಳೂರಿನಿಂದ ಕಲಬುರಗಿಗೆ ಬಂದ ಯುವತಿ, ಕಲಬುರಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಮದುವೆಗಾಗಿ ನೋಂದಣಿ ಮಾಡಿಸಿದ್ದರೂ

ಮದುವೆಯಾಗಲು ಹಿಂದೇಟು ಹಾಕುತ್ತಿರುವುದಾಗಿ ಠಾಣೆ ಎದುರು ಯುವಕ ಯುವತಿ ಗಲಾಟೆ ಮಾಡಿದ್ದಾಳೆ. ಈ ಸಂದರ್ಭದಲ್ಲಿ ಇರ್ಫಾನ್‌ ಅಲ್ಲಿಗೆ ಬಂದಿದ್ದಾನೆ. ಅಲ್ಲಿ ಕೂಡ ಆತ ಮದುವೆಗೆ ಹಿಂದೇಟು ಹಾಕಿದ್ದಾನೆ.

ಇದರಿಂದ ರೊಚ್ಚಿಗೆದ್ದ ರಹೀನಾ ಅಲ್ಲಿಯೇ ಆತನಿಗೆ ಧರ್ಮದೇಟು ನೀಡಿದ್ದಾಳೆ. ಸದ್ಯ ಈ ಪ್ರಕರಣವನ್ನು ಬಗೆಹರಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net