

ಉತ್ತರ: ದಾನ ಪತ್ರದ ಒಕ್ಕಣೆಯನ್ನು ಸರಿಯಾಗಿ ಓದಿ ನೋಡಿ ನಿಮಗೆ ಸಲಹೆ ಕೊಡಬೇಕಾಗುತ್ತದೆ. ನೀವು ಹೇಳಿದ್ದರ ಮೇಲೆ ಓದಿದರೆ, ಇಬ್ಬರಿಗೂ ಭೂಮಿಯಲ್ಲಿಯೂ ಸಮಭಾಗ ಇರುವಂತೆ ಕಾಣುತ್ತದೆ.
ಒಂದು ವೇಳೆ ಮನೆ ಕಟ್ಟಿಕೊಳ್ಳಬೇಕು ಎಂದು ಇರುವವರು, ಮತ್ತೊಬ್ಬರಿಗೆ ತೊಂದರೆ ಕೊಡದೇ ಮನೆ ಕಟ್ಟಿಕೊಳ್ಳಲು ಆಗುವುದಾದರೆ ತೊಂದರೆ ಇಲ್ಲ. ಹಾಗೆ ಆಗದೇ ಹೋದರೆ, ಒಬ್ಬರು ಮತ್ತೊಬ್ಬರ ವಿರುದ್ಧ ಆಸ್ತಿಯನ್ನು ʼಮೀಟ್ಸ್ ಆ್ಯಂಡ್ ಬೌಂಡ್ಸ್ʼ ಮೂಲಕ ಭಾಗ ಮಾಡಬೇಕೆಂದು ಪ್ರಕರಣ ದಾಖಲಿಸಬೇಕಾಗುತ್ತದೆ.
ಯಾವುದಕ್ಕೂ ಮೊದಲಿಗೆ ನೀವು ನಿಮ್ಮ ತಾಲ್ಲೂಕಿನ ಕಾನೂನು ಸೇವಾ ಕೇಂದ್ರದಲ್ಲಿ ನಿಮ್ಮ ಸಮಸ್ಯೆ ತಿಳಿಸಿ ಅರ್ಜಿ ಕೊಡಿ. ಅಲ್ಲಿ ಇಬ್ಬರನ್ನೂ ಕರೆಯಿಸಿ ಒಂದು ವ್ಯವಸ್ಥೆಗೆ ಬರುವಂತೆ ಸಹಾಯ ಮಾಡುತ್ತಾರೆ. ಅಲ್ಲಿ ರಾಜಿ ಆಗದಿದ್ದರೆ ಪ್ರಕರಣ ದಾಖಲಿಸಿ.