ಲೈಂಗಿಕ ತೃಷೆ ತೀರಿಸಿಕೊಳ್ಳಲು ವಿದ್ಯಾರ್ಥಿನಿಯರ ಬಳಕೆ! ಜೈಲು ಸೇರಿದ ಶಿಕ್ಷಕಿಯ ದುರಂತ ಅಂತ್ಯ

teacher
Published on

ಅಲಬಮಾ (ಅಮೆರಿಕ): ಹೈಸ್ಕೂಲ್‌ ಶಿಕ್ಷಕಿಯೊಬ್ಬಳನ್ನು ತನ್ನ ವಿದ್ಯಾರ್ಥಿನಿಯರನ್ನೇ ರೇಪ್‌ ಮಾಡಿ ಜೈಲು ಪಾಲಾಗಿರುವ ಘಟನೆ ಅಮೆರಿಕದ ಅಲಬಮಾದಲ್ಲಿ ನಡೆದಿದೆ. ಸಲಿಂಗಕಾಮಿಯಾಗಿದ್ದ ಈಕೆ ತನ್ನ ಲೈಂಗಿಕ ತೃಷೆ ತೀರಿಸಿಕೊಳ್ಳಲು ವಿದ್ಯಾರ್ಥಿನಿಯರನ್ನು ಬಳಸಿಕೊಳ್ಳುತ್ತಿದ್ದ ಆಘಾತಕಾರಿ ಘಟನೆ ಇದಾಗಿದೆ.

ಶಾಲೆ ಮುಗಿದ ಬಳಿಕ 15 ಮತ್ತು 16 ವರ್ಷದ ಇಬ್ಬರು ಬಾಲಕಿಯರನ್ನು ಒತ್ತಾಯಪೂರ್ವಕವಾಗಿ ತರಗತಿಯಲ್ಲಿಯೇ ಇರಿಸಿಕೊಂಡಿದ್ದ ಲೆಸ್ಲಿ ಗಿಲ್ಲೆಸ್ಪಿ ಎಂಬ ಶಿಕ್ಷಕಿ ಅವರಿಬ್ಬರನ್ನೂ ರೇಪ್‌ ಮಾಡಿದ್ದಳು. ಇದರಿಂದ ಕೆಲ ತಿಂಗಳ ಹಿಂದೆ ಈಕೆಯನ್ನು ಜೈಲಿನಲ್ಲಿ ಇರಿಸಲಾಗಿತ್ತು.

ಇಂಗ್ಲಿಷ್‌ ವಿಷಯವನ್ನು ಬೋಧಿಸುತ್ತಿದ್ದ 44 ವರ್ಷದ ಈ ಶಿಕ್ಷಕಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. 60 ಸಾವಿರ ಡಾಲರ್‌ ಹಣ ಕೊಟ್ಟು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಳು.

ಮನೆಗೆ ಬಂದ ಆಕೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈಕೆಯ ಶವವು ಮನೆಯಲ್ಲಿ ಪತ್ತೆಯಾಗಿದೆ. ಈಕೆ ತಾನೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ. ಈ ಘಟನೆಯ ಬಳಿಕ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕಿರುವ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net