More

    ಜ್ವರದಿಂದ ಬಳಲ್ತಿದ್ದಾರೆ ಸಿದ್ದರಾಮಯ್ಯ, ಎರಡು ದಿನ ಫುಲ್‌ ರೆಸ್ಟ್‌- ಕಾರ್ಯಕ್ರಮಗಳು ರದ್ದು

    ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ನಿನ್ನೆ ರಾತ್ರಿಯಿಂದ ಜ್ವರ ಕಾಣಿಸಿಕೊಂಡಿದೆ. ಹಿಂದೊಮ್ಮೆ ಕರೊನಾ ಸೋಂಕಿನಿಂದ ಬಳಲಿ ನಂತರ ಚೇತರಿಸಿಕೊಂಡಿರುವ ಸಿದ್ದರಾಮಯ್ಯ ಅವರಿಗೆ ಈಗ ಜ್ವರ ಕಾಣಿಸಿಕೊಂಡಿರುವ ಕಾರಣ, ಮುಂಜಾಗ್ರತಾ ಕ್ರಮವಾಗಿ ಕರೊನಾ ಪರೀಕ್ಷೆ ಕೂಡ ಮಾಡಿಸಲಾಗಿದೆ.

    ಈ ಕುರಿತು ಅವರ ಆಪ್ತರಾಗಿರುವ ವೈದ್ಯ ಡಾ.ರವಿ ಕುಮಾರ್ ಮಾಹಿತಿ ನೀಡಿದ್ದಾರೆ. ಸಿದ್ದರಾಮಯ್ಯ ಅವರಿಗೆ ತಪಾಸಣೆ ನಡೆಸಲಾಗಿದೆ. ಜ್ವರ ಇರುವ ಕಾರಣ ವಿಶ್ರಾಂತಿಗೆ ಸೂಚಿಸಲಾಗಿದೆ, ಅವರು ತಮ್ಮ ಮನೆಯಲ್ಲಿಯೇ ವಿಶ್ರಾಂತಿ ಪಡೆಯಲಿದ್ದಾರೆ ಎಂದು ತಿಳಿಸಿದ್ದಾರೆ.

    ಸದ್ಯ ಅವರಿಗೆ ವಿಶ್ರಾಂತಿ ಅಗತ್ಯ ಇರುವ ಕಾರಣದಿಂದಾಗಿ ಎರಡು ದಿನಗಳ ಎಲ್ಲಾ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ ಎಂದು ತಿಳಿದುಬಂದಿದೆ. ಇಂದು ಬೆಂಗಳೂರಿನ ಅನೇಕ ಕ್ಷೇತ್ರಗಳಿಗೆ ತೆರಳಿ ಉಚಿತ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವೀಗ ರದ್ದು ಮಾಡಲಾಗಿದೆ. ಸಿದ್ದರಾಮಯ್ಯ ಅನುಪಸ್ಥಿತಿಯಲ್ಲಿ ಬೆಂಗಳೂರಿನ ವಿವಿಧೆಡೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಕಿಟ್ ವಿತರಣೆ ಮಾಡಲಿದ್ದಾರೆ.

    ಜ್ವರ ಇರುವ ಕಾರಣದಿಂದಾಗಿ ತಮ್ಮ ನಿವಾಸದಲ್ಲಿಯೂ ಯಾರನ್ನೂ ಭೇಟಿ ಮಾಡದಿರಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.

    ಸೋಂಕಿತರಿಗೆ ಮತಾಂತರದ ಬ್ರೇನ್‌ವಾಷ್‌! ಐಎಎಂ ಜನ್ಮ ಜಾಲಾಡಿ ಕೋರ್ಟ್‌ನಲ್ಲಿ ಕೇಸ್‌- ತಗ್ಲಾಕೊಂಡ ಅಧ್ಯಕ್ಷ?

    ಮಗುವನ್ನು ದತ್ತು ಪಡೆದುಕೊಳ್ಳಲು ಪತಿಯ ಅನುಮತಿ ಬೇಕೇ ಬೇಕಾ? ಕಾನೂನು ಏನು ಹೇಳುತ್ತದೆ?

    ಮಸೀದಿಗಳಲ್ಲಿ ಧ್ವನಿವರ್ಧಕ ಬಳಕೆಗೆ ನಿರ್ಬಂಧ: ಸೌದಿ ಅರೇಬಿಯಾದಿಂದ ಹೊರಟ ಸ್ಟ್ರಿಕ್ಟ್‌ ರೂಲ್ಸ್‌ ಇಲ್ಲಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts