More

    ಜನಸಂಖ್ಯೆಯಲ್ಲಿ ಟಾಪ್‌ 1ನಲ್ಲಿರೋ ಚೀನಾದಲ್ಲಿ ಇನ್ಮುಂದೆ ಒಂದಲ್ಲ, ಎರಡಲ್ಲ…. ಮೂರು ಮಕ್ಕಳಾಗ್ಬೋದು!

    ಬೀಜಿಂಗ್: ಜಗತ್ತಿನಲ್ಲಿಯೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾ. ಚೀನಾ, ಭಾರತದಂತೆ ಪ್ರಜಾಪ್ರಭುತ್ವ ರಾಷ್ಟ್ರವಲ್ಲದ ಹಿನ್ನೆಲೆಯಲ್ಲಿ ಅಲ್ಲಿ ಜನತೆಗೆ ಯಾವುದೇ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿಲ್ಲ. ಜನತೆ ಸಂಪೂರ್ಣವಾಗಿ ಸರ್ಕಾರದ ಆದೇಶಕ್ಕೆ ಒಳಪಟ್ಟಿದ್ದು, ಸರ್ಕಾರ ಹೇಳಿದಂತೆಯೇ ಕೇಳಬೇಕಿದೆ.

    ಆದ್ದರಿಂದ ದಿನೇ ದಿನೇ ಏರುತ್ತಿರುವ ಜನಸಂಖ್ಯೆಯಿಂದ ಆತಂಕಗೊಂಡಿದ್ದ ಸರ್ಕಾರ ಮೊದಲು ಇದ್ದ ಎರಡು ಮಕ್ಕಳ ನೀತಿಯನ್ನು ಒಂದು ಮಗುವಿಗೆ ಇಳಿಸಿತ್ತು. ಈ ಆದೇಶ ಪಾಲನೆ ಮಾಡದೇ ಜನರಿಗೆ ಬೇರೆ ವಿಧಿ ಇರಲಿಲ್ಲ. ಒಂದು ಮಗುವನ್ನು ಕಡ್ಡಾಯ ಮಾಡಿ ಆದೇಶ ಹೊರಡಿಸಿತ್ತು. ಆದರೆ ಇದೀಗ ಅಚ್ಚರಿಯ ಬೆಳವಣಿಗೆಯಲ್ಲಿ ಸರ್ಕಾರ ಒಂದು ಮೂರು ಮಕ್ಕಳಿಗೆ ಜಂಪ್‌ ಮಾಡಿದೆ!

    ಇದಕ್ಕೆ ಕಾರಣ, ಜನಸಂಖ್ಯೆಯಲ್ಲಿ ಆಗುತ್ತಿರುವ ಭಾರಿ ಕುಸಿತವಂತೆ! ಅಷ್ಟಕ್ಕೂ ಆಗಿರುವುದು ಏನೆಂದರೆ, 970ರ ದಶಕದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಚೀನಾ ಸರ್ಕಾರ ಒಂದು ಮಗು ಪಡೆಯಲು ಮಾತ್ರ ಅನುಮತಿ ನೀಡಿತ್ತು. ಇದು ಕಟ್ಟುನಿಟ್ಟಾಗಿ ಅನುಸರಿಸಲೇಬೇಕಿರುವ ಅನಿವಾರ್ಯತೆ ದಂಪತಿಗೆ ಬಂದಿತ್ತು.

    ಇದರ ಪರಿಣಾಮವಾಗಿ ಕಳೆದ ಐದು ದಶಕಗಳಿಂದ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಾ, ಜನಸಂಖ್ಯೆಯಲ್ಲಿ ವೃದ್ಯಾಪ್ಯ ಹಂತಕ್ಕೆ ತೆರಳುತ್ತಿರುವ ಸಂಖ್ಯೆ ವೇಗವಾಗಿ ಏರತೊಡಗಿದೆ. ಇದನ್ನು ಮನಗಂಡು 2009ರಲ್ಲಿ ಎರಡು ಮಕ್ಕಳನ್ನು ಹೇರಲು ಸರ್ಕಾರ ಅನುಮತಿ ನೀಡಿತು. ಆದರೆ ಯುವಜನರ ಸಂಖ್ಯೆ ಕುಸಿಯುತ್ತಿರುವ ಕಾರಣ ಹೀಗಾದರೆ ಮುಂದೆ ಗತಿಯೇನು ಎಂದು ಚಿಂತಿಸಿರುವ ಚೀನಾ ಅಧ್ಯಕ್ಷ ಕ್ಷಿ ಜಿನ್‍ಪಿಂಗ್ ಈಗ ಒಂದರಿಂದ ಮೂರು ಮಕ್ಕಳು ಆಗಬಹುದು ಎಂದು ಅನುಮತಿ ನೀಡಿದ್ದಾರೆ.

    ಇಲ್ಲಿಯ ಜನಸಂಖ್ಯೆಯ ಅಂಕಿ ಅಂಶ ನೋಡುವುದಾದರೆ 2010 ರಿಂದ 2020ರ ನಡುವೆ ಚೀನಾದ ಜನಸಂಖ್ಯೆ ಬೆಳವಣಿಗೆ ದರ ಶೇ.0.53ರಷ್ಟಿತ್ತು. ಇದಕ್ಕೂ ಮುಂಚೆ 2000 ರಿಂದ 2010ರ ನಡುವೆ ಬೆಳವಣಿಗೆ ಶೇ.0.57ರಷ್ಟಿತ್ತು. ಕಳೆದ ಎರಡು ದಶಕಗಳಿಂದ ಚೀನಾದ ಜನಸಂಖ್ಯೆ ಬೆಳವಣಿಗೆ ದರ ಅತಿ ಕಡಿಮೆ ಹಂತಕ್ಕೆ ತಲುಪಿತ್ತು. 2020ರಲ್ಲಿ ಕೇವಲ 12 ಲಕ್ಷ ಮಕ್ಕಳ ಜನನವಾಗಿದೆ. 2016ರಲ್ಲಿ ಈ ಸಂಖ್ಯೆ 18 ಲಕ್ಷ ಇತ್ತು. 1960ರ ಬಳಿಕ ಚೀನಾದಲ್ಲಿ ಅತಿ ಕಡಿಮೆ ಜನನ ಪ್ರಮಾಣ ದಾಖಲಾಗಿತ್ತು.

    ಅರೆ ವೈದ್ಯಕಿಯ ಕೋರ್ಸ್​ ಮಾಡಿರುವಿರಾ? 28 ಹುದ್ದೆಗಳಿಗೆ ವೈದ್ಯಕೀಯ ವಿಜ್ಞಾನ ಸಂಸ್ಥೆಯಂದ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts