ಆ ಟೀಚರ್‌ ಲೈಂಗಿಕ ಸಂಬಂಧ ಬೆಳೆಸಿದ್ದಾರೆ, ಪ್ಲೀಸ್‌ ಬೇರೆ ಮದ್ವೆಯಾಗೋಕೆ ಬಿಡ್ಬೇಡಿ- ಯುವತಿ ಗೋಳಾಟ

raichur-dokha
Published on

ರಾಯಚೂರು: ಖಾಸಗಿ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡುತ್ತಿರುವ ರಾಯಚೂರಿನ ಯುವಕನ ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದ್ದು, ನ್ಯಾಯಕ್ಕಾಗಿ ಯುವತಿ ಮತ್ತು ಆಕೆಯ ಕುಟುಂಬಸ್ಥರು ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸುತ್ತಿದ್ದಾರೆ.

ರಾಯಚೂರು ವಡವಟ್ಟಿ ಗ್ರಾಮದ ಉಮೇಶ ಎನ್ನುವ ಶಿಕ್ಷಕ ತನ್ನನ್ನು ದೈಹಿಕವಾಗಿ ಬಳಸಿಕೊಂಡು ಸೋಮವಾರ (ಮೇ 31) ಬೇರೆ ಯುವತಿಯ ಜತೆ ಮದುವೆಯಾಗುವ ತಯಾರಿ ನಡೆಸಿರುವುದಾಗಿ ಯುವತಿ ಕಣ್ಣೀರು ಹಾಕುತ್ತಿದ್ದಾಳೆ.

ನನ್ನ ಜತೆ ಸಲುಗೆ ಬೆಳೆಸಿ, ಲೈಂಗಿಕವಾಗಿ ಬಳಸಿಕೊಂಡು ಕೈಕೊಟ್ಟಿದ್ದಾರೆ ಎಂದು ಯುವತಿ ದೂರಿದ್ದಾಳೆ.

ಪೊಲೀಸರು ಮದುವೆ ಮಾಡಿಸುವುದಾಗಿ ಕರೆದುಕೊಂಡು ಬಂದು ಅನ್ಯಾಯ ಮಾಡಿದ್ದಾರೆ. ಇಬ್ಬರನ್ನೂ ಕರೆದುಕೊಂಡು ಬಂದು ಅವರನ್ನು ನಾಪತ್ತೆ ಮಾಡಿದ್ದಾರೆ ಎಂದು ಯುವತಿ ರಾಯಚೂರಿನ ನೇತಾಜಿ ನಗರ ಪೋಲೀಸ್ ಪಿಎಸ್ಐ ಬಸವರಾಜ ವಿರುದ್ಧ ಆರೋಪ ಮಾಡಿದ್ದಾಳೆ. ಈ ನಡುವೆಯೇ ಮದುವೆಗೆ ಶಿಕ್ಷಕ ತಯಾರಿ ನಡೆಸಿದ್ದು, ಯುವತಿ ಮತ್ತು ಕುಟುಂಬದವರ ಗೋಳು ನೋಡಲಾಗುತ್ತಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net