More

    ‘ಮೋದಿ ಅಂಕಲ್​, ನೀವೆಂದ್ರೆ ತುಂಬಾ ಇಷ್ಟ… ಪ್ಲೀಸ್​ ಮೀಟ್​ ಆಗ್ತೀರಾ? ನೀವು ರಾಷ್ಟ್ರಪತಿ ಆಗೋದು ಯಾವಾಗ?’

    ಮುಂಬೈ: ಪ್ರಧಾನಿ ಮೋದಿ ಅವರನ್ನು ಭೇಟಿಯಾಗಲು ಹಲವಾರು ತಿಂಗಳುಗಳಿಂದ ಕಾಯುತ್ತಿದ್ದ 10 ವರ್ಷದ ಬಾಲಕಿ ಅನಿಶಾ ಪಾಟೀಲ್​ ಕನಸು ಕೊನೆಗೂ ಈಡೇರಿದೆ. ಮಹಾರಾಷ್ಟ್ರದ ಅಹ್ಮದ್​ನಗರದ ಬಿಜೆಪಿ ಸಂಸದ ಡಾ.ಸುಜಯ್​ ವಿಖೆ ಪಾಟೀಲ್​ ಮಗಳಾಗಿರುವ ಅನಿಶಾ ಮೋದಿಯವರನ್ನು ಭೇಟಿ ಮಾಡಿಸುವಂತೆ ತಂದೆಗೆ ಹೇಳಿ ಹೇಳಿ ಸಾಕಾಗಿ ತಾನೇ ಕೊನೆಗೆ ಇ-ಮೇಲ್​ ಕಳುಹಿಸಿದ್ದಾಳೆ.

    ‘ನಾನು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಬೇಕು. ನನ್ನನ್ನು ನಿನ್ನೊಂದಿಗೆ ಕರೆದುಕೊಂಡು ಹೋಗು’ ಎಂದು ಅಪ್ಪನನ್ನು ಸದಾ ಪೀಡಿಸುತ್ತಿದ್ದಳು ಅನಿಶಾ. ಆದರೆ ಪ್ರಧಾನಿ ಅವರನ್ನು ಭೇಟಿಯಾಗುವುದು ಅಷ್ಟು ಸುಲಭವಲ್ಲ ಎಂದು ಹೇಳುತ್ತಿದ್ದರು ಅಪ್ಪ. ಇನ್ನು ಅಪ್ಪನಿಂದ ಕೆಲಸ ಆಗುವುದಿಲ್ಲ ಎಂದು ತಿಳಿದುಕೊಂಡ ಈ ಪುಟಾಣಿ ಅಪ್ಪನ ಲ್ಯಾಪ್​ಟಾಪ್​ ಹಿಡಿದು ಅವರ ಮೇಲ್​ನಿಂದ ತಾನೇ ಮೇಲ್​ ಕಳುಹಿಸಿದ್ದಾಳೆ.

    ನನಗೆ ನೀವು ಎಂದರೆ ತುಂಬಾ ಇಷ್ಟ. ಡ್ಯಾಡಿಗೆ ಹೇಳಿದ್ರೂ ನಿಮ್ಮನ್ನು ಭೇಟಿ ಮಾಡಿಸುತ್ತಿಲ್ಲ, ಪ್ಲೀಸ್​ ನನ್ನನ್ನು ಮೀಟ್​ ಆಗಿ ಎಂದು ಮೇಲ್​ ಮಾಡಿದ್ದಾಳೆ ಅನಿಶಾ. ಇದನ್ನು ನೋಡಿದ ಪ್ರಧಾನಿ ಮೋದಿಯವರು ತುಂಬಾ ಖುಷಿಯಿಂದ ‘ದೌಡ್​ ಕೆ ಆವೋ ಬೇಟಿ’ (ಓಡಿ ಬಾ ಮಗಳೇ) ಎಂದು ರಿಪ್ಲೈ ಮಾಡಿದ್ದಾರೆ. ಇದನ್ನು ಓದುತ್ತಲೇ ಖುಷಿಯಿಂದ ಜಿಗಿದಾಡಿದ ಬಾಲಕಿ ಈ ಇ-ಮೇಲ್​ ಅನ್ನು ಅಪ್ಪನಿಗೆ ತೋರಿಸಿದ್ದಾಳೆ. ನಂತರ ಅವಳ ಹಠಕ್ಕೆ ಮಣಿದು ತಂದೆ ಮೋದಿಯವರ ಅಪಾಯಿಮಟ್​ಮೆಂಟ್​ ತೆಗೆದುಕೊಂಡು ಅವರನ್ನು ಭೇಟಿ ಮಾಡಿಸಿದ್ದಾರೆ.

    PM Modi

    ವರ್ಷಗಳ ಕನಸು ನನಸಾದ ಖುಷಿಯಲ್ಲಿ ಓಡೋಡಿ ಪ್ರಧಾನಿಯವರ ಬಳಿ ಸಾಗಿದ ಬಾಲಕಿ, ಅವರ ಬಳಿ ಬಂದು, ಅಂಕಲ್​ ಅಂಕಲ್​ ನೀವು ಗುಜರಾತ್​ನವರು ಅಲ್ವಾ? ನೀವ್ಯಾಕೆ ಪ್ರಧಾನಿ ಹುದ್ದೆಯಿಂದ ಇನ್ನೂ ಮೇಲಿನ ಹುದ್ದೆಗೆ ಹೋಗಿ ರಾಷ್ಟ್ರಪತಿಯಾಗಬಾರದು? ನೀವೆಂದರೆ ನನಗೆ ತುಂಬಾ ಇಷ್ಟ ಎಂದಿದ್ದಾಳೆ. ಮುದ್ದು ಮಾತಿನಲ್ಲಿ ಈ ಪ್ರಶ್ನೆ ಕೇಳಿದ್ದಕ್ಕೆ ಪ್ರಧಾನಿ ಮೋದಿಯಾದಿಯಾಗಿ ಅಲ್ಲಿದ್ದವರೆಲ್ಲ ನಗೆಗಡಲಿನಲ್ಲಿ ತೇಲಿಹೋಗಿದ್ದಾರೆ.
    ಅನಿಶಾ ಪ್ರಧಾನಿ ಅವರನ್ನು ಭೇಟಿಯಾಗಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ನಾಸಾದಿಂದ ಬಂದಿದೆ ಆಘಾತಕಾರಿ ವರದಿ: ಕರ್ನಾಟಕದ ಊರು ಸೇರಿದಂತೆ ಭಾರತದ 12 ನಗರ ಮುಳುಗಡೆ

    ರೋಹಿಣಿ ಸಿಂಧೂರಿಗೆ ಎದುರಾಯ್ತು ಮತ್ತೊಂದು ಸಂಕಷ್ಟ: ಅಮಾನತಿಗೆ ಕೋರಿ ಕೇಸ್‌ ದಾಖಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts