More

    ನಾಸಾದಿಂದ ಬಂದಿದೆ ಆಘಾತಕಾರಿ ವರದಿ: ಕರ್ನಾಟಕದ ಊರು ಸೇರಿದಂತೆ ಭಾರತದ 12 ನಗರ ಮುಳುಗಡೆ

    ನವದೆಹಲಿ: ಇದಾಗಲೇ ಜಲಪ್ರಳಯ ಹಲವಾರು ರಾಜ್ಯಗಳನ್ನು, ಹಲವು ನಗರಗಳನ್ನು ಕಂಗೆಡಿಸಿವೆ. ಇವುಗಳ ನಡುವೆಯೇ ಇದೀಗ ಅಮೆರಿಕ ಬಾಹ್ಯಾಕಾಶ ಸಂಸ್ಥೆ (ನಾಸಾ) ಆಘಾತಕಾರಿ ಎನ್ನುವಂಥ ವರದಿಯನ್ನು ನೀಡಿದೆ.

    ಅದೇನೆಂದರೆ ಕರ್ನಾಟಕದ ಮಂಗಳೂರು ಸೇರಿದಂತೆ ಭಾರತದ 12 ನಗರಗಳು 2100ರ ವೇಳೆಗೆ ಭಾಗಶಃ ನೀರಿನಲ್ಲಿ ಮುಳುಗಡೆ ಆಗಲಿವೆ ಎಂದಿದೆ ನಾಸಾ. ಜಾಗತಿಕ ತಾಪಮಾನದ ದುಷ್ಪರಿಣಾಮಗಳ ಬಗ್ಗೆ ವಿಶ್ವಸಂಸ್ಥೆಯ 195 ಪರಿಸರ ತಜ್ಞರ ಸಮಿತಿ, ಬಿಡುಗಡೆ ಮಾಡಿರುವ ಎಚ್ಚರಿಕೆಯ ವರದಿಯನ್ನು (ಐಪಿಸಿಸಿ ವರದಿ) ಅವಲೋಕನ ಮಾಡಿರುವ ನಾಸಾ ಈ ಕುರಿತು ಮಾಹಿತಿ ನೀಡಿದ್ದು, ಭಾರತಕ್ಕೆ ಮುನ್ನೆಚ್ಚರಿಕೆ ನೀಡಿದೆ.
    ಒಂದು ಅಂದಾಜಿನ ಪ್ರಕಾರ ಇನ್ನು 10 ವರ್ಷಗಳಲ್ಲಿ ಮಂಗಳೂರಿನ ಸಮುದ್ರ ದಂಡೆ ಆಗಲೇ 2.75 ಇಂಚುಗಳಷ್ಟು ಮೇಲೇರುತ್ತದೆ. 2100ರ ವೇಳೆಗೆ ಮಂಗಳೂರು 1.87 ಅಡಿ ಸಮುದ್ರದೊಳಗೆ ಇರುತ್ತದೆ ಎಂದಿದೆ ಅದು ವರದಿಯಲ್ಲಿ ಹೇಳಿದೆ.

    ಇನ್ನು, ಇದಾಗಲೇ ಜಲಪ್ರಳಯದಿಂದ ಕಂಗೆಟ್ಟಿರುವ ವಾಣಿಜ್ಯ ನಗರಿ ಮುಂಬೈ ಈ ಅವಧಿಯಲ್ಲಿ ಅಂದರೆ 2100ರ ವೇಳೆಗೆ ಶೇಕಡಾ 65ರಷ್ಟು ಭಾಗ ಮುಳುಗಡೆ ಆಗಲಿದೆ. ಇದರಲ್ಲಿ ಕೊಲಾಬಾ, ಬಾಂದ್ರಾ ಮುಂತಾದ ಅನೇಕ ಪ್ರಮುಖ ಪ್ರದೇಶಗಳು ಸೇರಲಿವೆ. ಇನ್ನು ಗೋವಾದ ಮಾಪುಸಾ, ಚೊರಾಓ ದ್ವೀಪ, ಡಾಂಗ್ರಿಮ್ ಸೇರಿದಂತೆ ಅನೇಕ ಪ್ರದೇಶಗಳು ಮುಳುಗಡೆಯಾಗಲಿವೆ. ತಮಿಳುನಾಡಿನ ಚಿದಂಬರಂ, ಮಹಾಬಲಿಪುರಂ, ಕಲ್ಪಕ್ಕಂ, ಚೂನಂಪೇಟ್ ಮುಂತಾದ ಸಮುದ್ರ ತೀರದ ನಗರಗಳಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಶೇಕಡಾ 45ರಷ್ಟು ಚೆನ್ನೈ 2100ರ ವೇಳೆಗೆ ಸಮುದ್ರದ ಪಾಲಾಗಲಿದೆ ಎನ್ನಲಾಗಿದೆ. ಕೇರಳದಲ್ಲಿ ಸಮುದ್ರ ಉಕ್ಕಿ ಹರಿದಾಗ ಮೊದಲು ತನ್ನೊಳಗೆ ಎಳೆದುಕೊಳ್ಳೋದು ಕೊಚ್ಚಿಯನ್ನೇ ಎಂದಿದೆ ನಾಸಾ ವರದಿ. ಇದನ್ನು ಹೊರತುಪಡಿಸಿದರೆ, ಪಾರಾದೀಪ್, ಖಿದೀರ್‌ಪುರ್‌, ವಿಶಾಖಪಟ್ಟಣಂ, ಚೆನ್ನೈ, ತೂತ್ತುಕುಡಿ, ಕಾಂಡ್ಲಾ, ಒಖಾ, ಭಾವನಗರ ಅಪಾಯದಲ್ಲಿವೆ.

    ಪ್ರತೀ ಐದರಿಂದ ಏಳು ವರ್ಷಗಳಲ್ಲಿ ಒಮ್ಮೆ ಜಾಗತಿಕ ತಾಪಮಾನ, ಸಮುದ್ರ ಮಟ್ಟಗಳ ಬಗ್ಗೆ ಕೂಲಂಕುಷವಾಗಿ ಅಧ್ಯಯನ ಮಾಡಲಾಗುತ್ತದೆ. ಆಗೆಲ್ಲಾ ಹೀಗೆ ಭಯ ಹುಟ್ಟಿಸುವ ಆದ್ರೆ ಸತ್ಯ ವಿಚಾರಗಳು ಹೊರಬರುತ್ತವೆ.
    ಅಷ್ಟಕ್ಕೂ ಇಂಥದ್ದೊಂದು ಆಘಾತಕಾಗಿ ಘಟನೆಗಳಿಗೆ ಕಾರಣ ಜಾಗತಿಕ ಉಷ್ಣಾಂಷ ಏರಿಕೆ. ತಾಪಮಾನ ಹೆಚ್ಚಾದಂತೆ ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿನ ಮಂಜು ಕರಗಿ ಸಮುದ್ರ ಸೇರುತ್ತದೆ. ಆಗ ಸಹಜವಾಗಿಯೇ ಸಮುದ್ರಮಟ್ಟ ಏರುತ್ತದೆ. ಏಷ್ಯಾದ ಸುತ್ತಮುತ್ತಲಿನ ಸಮುದ್ರ ಮಟ್ಟ ಜಾಗತಿಕ ಸರಾಸರಿ ದರಕ್ಕಿಂತ ವೇಗವಾಗಿ ಹೆಚ್ಚುತ್ತಿದೆ. ಈ ಹಿಂದೆ ಇಂಥ ತೀವ್ರ ಬದಲಾವಣೆಗಳು ಪ್ರತಿ 100 ವರ್ಷಕ್ಕೊಮ್ಮೆ ಕಾಣಬಹುದಿತ್ತು. ಆದರೆ 2050ರ ಒಳಗಾಗಿ ಪ್ರತಿ 6 ರಿಂದ 9 ವಷಕ್ಕೊಮ್ಮೆ ಸಂಭವಿಸಬಹುದು. 2006-18ರಲ್ಲಿ ನಡೆದ ಅಧ್ಯಯನನದ ಪ್ರಕಾರ ಸಮುದ್ರದ ಮಟ್ಟ ಪ್ರತಿ ವರ್ಷ 3.7 ಮಿ.ಮೀ ನಷ್ಟು ಏರಿಕೆಯಾಗುತ್ತದೆ.

    ಏಳು ಮಕ್ಕಳ ತಂದೆಯ ಪ್ರೀತಿಗೆ ಸಿಲುಕಿದ 19ರ ಯುವತಿ! ಗಂಡ ಬೇಡ ಇವನೇ ಬೇಕು ಎಂದು ಪಟ್ಟು ಹಿಡಿದು ಕೋರ್ಟ್‌ ಮೊರೆ

    ದಿಢೀರ್​ ನಾಪತ್ತೆಯಾದ 6ನೇ ಕ್ಲಾಸ್​ ಬಾಲಕಿ: ಆಕೆಯ ಮೊಬೈಲ್​ನಲ್ಲಿ ಸಿಕ್ತು ಬೆಚ್ಚಿಬೀಳೋ ಕಥೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts