More

    ದಿಢೀರ್​ ನಾಪತ್ತೆಯಾದ 6ನೇ ಕ್ಲಾಸ್​ ಬಾಲಕಿ: ಆಕೆಯ ಮೊಬೈಲ್​ನಲ್ಲಿ ಸಿಕ್ತು ಬೆಚ್ಚಿಬೀಳೋ ಕಥೆ…

    ಲುಧಿಯಾನಾ: ಆನ್​ಲೈನ್​ ಕ್ಲಾಸ್​ನಿಂದಾಗಿ ಮಕ್ಕಳಿಗೆ ಈಗ ಸುಲಭದಲ್ಲಿ ಮೊಬೈಲ್​ಗಳು ಸಿಗುತ್ತಿವೆ. ಅದೇ ಮೊಬೈಲ್​ನಿಂದ ಏನೆಲ್ಲಾ ಆವಂತರಗಳನ್ನು ವಿದ್ಯಾರ್ಥಿಗಳು ಮಾಡುತ್ತಿದ್ದಾರೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ.
    ಆರನೇ ಕ್ಲಾಸ್​ನಲ್ಲಿ ಓದುತ್ತಿರುವ ಬಾಲಕಿಯೊಬ್ಬಳು ಹುಡುಗನ ಫ್ರೆಂಡ್​ಷಿಪ್​ ಮಾಡಿಕೊಂಡು ಆತನ ಜತೆ ಓಡಿಹೋಗಿರುವ ಭಯಾನಕ ಘಟನೆ ಪಂಜಾಬ್​ನ ಲುಧಿಯಾನಾದಲ್ಲಿ ನಡೆದಿದೆ. ಇಷ್ಟೇ ಅಲ್ಲದೇ ಪಾಲಕರಿಗೆ ಈ ವಿಷಯ ತಿಳಿಯಬಾರದು ಎಂಬ ಕಾರಣಕ್ಕೆ ಈ ಬಾಲಕಿ ಮಾಡಿರುವ ಪ್ಲ್ಯಾನ್​ ಮಾತ್ರ ತುಂಬಾ ಕುತೂಹಲ ಹಾಗೂ ಪಾಲಕರಿಗೆ ಎಚ್ಚರಿಕೆಯ ಗಂಟೆಯೂ ಆಗಿದೆ.

    ಪಂಜಾಬ್​ನ ಲೂಧಿಯಾನ ಜಿಲ್ಲೆಯ ಭಮಿಯಾನ ಕಲನ್​ ಏರಿಯಾದ ಆರನೇ ಕ್ಲಾಸ್​ನ ಬಾಲಕಿಯ ಕಥೆ ಇದು. ಇದ್ದಕ್ಕಿದ್ದಂತೆಯೇ ಈಕೆ ನಾಪತ್ತೆಯಾಗಿದ್ದಾಳೆ. ಪಾಲಕರು ಎಲ್ಲೆಡೆ ಹುಡುಕಾಡಿದರೂ ಆಕೆ ಸಿಗಲಿಲ್ಲ. ನಂತರ ಅವಳ ಸ್ನೇಹಿತೆಯರನ್ನು ಕೇಳಿದಾಗ ಅವರೆಲ್ಲರೂ ನಮ್ಮ ಕಣ್ಣೆದುರಿಗೇ ಬಾಲಕಿಯನ್ನು ಯಾರೋ ಕಿಡ್ನಾಪ್​ ಮಾಡಿಕೊಂಡು ಹೋಗಿದ್ದಾರೆ ಎಂದು ಹೇಳಿದ್ದಾರೆ.

    ಇದನ್ನು ನಂಬಿದ ಪಾಲಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲೆಡೆ ಹುಡುಕಾಡಿದರೂ ಬಾಲಕಿ ಸಿಗಲಿಲ್ಲ. ನಂತರ ಯಾರಾದರೂ ಅವಳಿಗೆ ಕರೆ ಮಾಡಿದ್ದರೋ ಎಂಬಿತ್ಯಾದಿಯಾಗಿ ನೋಡಲು ಆಕೆಯ ಪಾಲಕರು ಅವಳಿಗೆ ಆನ್​ಲೈನ್​ ಕ್ಲಾಸ್​ಗೆಂದು ಕೊಡಿಸಿದ್ದ ಮೊಬೈಲ್​ ಅನ್ನು ನೋಡಿದ್ದಾರೆ. ಅದರಲ್ಲಿ ವಾಟ್ಸ್ಆ್ಯಪ್​ ಚಾಟ್​ ನೋಡಿದಾಗ ಪಾಲಕರು ಬೆಚ್ಚಿಬಿದ್ದಿದ್ದಾರೆ. ಅದರಲ್ಲಿ ಅವಳು ಹುಡುಗನೊಬ್ಬನ ಜತೆ ಚಾಟ್​ ಮಾಡಿರುವುದು ಕಂಡುಬಂದಿದೆ. ಅಲ್ಲಿ ಆಕೆ ನಡೆಸಿರುವ ಸಂಭಾಷಣೆಗಳನ್ನು ನೋಡಿ, ಪಾಲಕರಿಗೆ ತಲೆ ತಿರುಗಿದಂತೆ ಆಗಿದೆ. ಆಗಲೇ ಅವರಿಗೆ ತಿಳಿದದ್ದು ಅನೇಕ ತಿಂಗಳಿನಿಂದ ತಮ್ಮ ಈ ಚಿಕ್ಕಮಗಳು ಪ್ರೇಮಪಾಶಕ್ಕೆ ಬಿದ್ದಿದ್ದಾಳೆ ಎಂದು.

    ನಂತರ ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ನೇಹಿತೆಯರನ್ನು ಕರೆದು ಪೊಲೀಸರು ವಿಚಾರಣೆ ನಡೆಸಿದಾಗ, ಅವರು ತಾವು ಸುಳ್ಳು ಹೇಳಿರುವುದಾಗಿ ಒಪ್ಪಿಕೊಂಡಿದ್ದಾರೆ. ಬಾಲಕಿ ಹೀಗೆ ಹೇಳಲು ತಮಗೆ ಒಪ್ಪಿಸಿರುವುದಾಗಿ ಅವಳು ಹೇಳಿದ್ದಾಳೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಮೂರು ಗಂಟೆಯಲ್ಲಿಯೇ ಬಾಲಕಿಯನ್ನು ಕಂಡುಹಿಡಿದಿದ್ದಾರೆ. ಈ ವೇಳೆ ಬಾಲಕಿ ಸ್ನೇಹಿತನ ಜತೆ ಸಿಕ್ಕಿಬಿದ್ದಿದ್ದಾಳೆ. ಅವಳನ್ನು ಪಾಲಕರಿಗೆ ಒಪ್ಪಿಸಿದಾಗ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾಳೆ.

    ಪಾಲಕರು ಸಾಧ್ಯವಾದಷ್ಟು ತಮ್ಮ ಮಕ್ಕಳ ಮೇಲೆ ನಿಗಾ ಇಡುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

    ಅಭಿಮಾನಿಗಳ ಪ್ರಾರ್ಥನೆ ನೆರವೇರಿಲಿಲ್ಲ: ಸ್ಫೂರ್ತಿಯ ಚಿಲುಮೆಯಾಗಿದ್ದ ಯುವ ನಟಿ ಶರಣ್ಯಾ ಸಾವು

    ನನ್ನ ನಗ್ನ, ಕಾಮಪ್ರಚೋದಕ ವಿಡಿಯೋ ನೋಡಿ ಶಿಲ್ಪಾ ಖುಷಿ ಪಟ್ಟಿದ್ರು: ತನಿಖೆಯಲ್ಲಿ ನಟಿಯ ಸ್ಫೋಟಕ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts