More

    ಕೇರಳ ಬಾಲಕಿ ಕಿಡ್ನ್ಯಾಪ್​ ಪ್ರಕರಣ ಸುಖಾಂತ್ಯ; 20 ಗಂಟೆಗಳ ಹುಡುಕಾಟದ ನಂತರ ಪತ್ತೆ

    ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಸೋಮವಾರ ಟ್ಯೂಷನ್‌ಗೆ ತೆರಳುತ್ತಿದ್ದಾಗ ಅಪಹರಣಕ್ಕೊಳಗಾಗಿದ್ದ 6 ವರ್ಷದ ಬಾಲಕಿ ಪ್ರಕರಣವು ಸಾಕಷ್ಟು ಸದ್ದು ಮಾಡಿತ್ತು. ಸ್ವತಃ ಕೇರಳ ಮುಖ್ಯಮಂತ್ರಿಗಳೇ ಆಸಕ್ತಿ ತೋರಿ, ತ್ವರಿತ ಶೋಧಕ್ಕಾಗಿ ಪೊಲೀಸರಿಗೆ ಸೂಚನೆ ನೀಡಿದ್ದು ಫಲ ನೀಡಿದೆ. ಕಣ್ಮರೆಯಾದ 20 ಗಂಟೆಗಳ ಹುಡುಕಾಟದ ಬಳಿಕ ಕೇರಳ ಪೊಲೀಸರು ಬಾಲಕಿಯನ್ನು ಮಂಗಳವಾರ ಪತ್ತೆ ಮಾಡಿದ್ದಾರೆ.

    ಅಪಹರಣಕ್ಕೆ ಒಳಗಾಗಿದ್ದ ಓಯೂರು ಮೂಲದ ಬಾಲಕಿ ಅಬಿಗೈಲ್ ಸಾರಾ ರೆಜಿ, ಕೊಲ್ಲಂನ ಆಶ್ರಮ ಮೈದಾನದಲ್ಲಿ ಪರಿತ್ಯಕ್ತ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

    ಬಾಲಕಿಯರ ಪೋಷಕರು ಅಪಹರಣಕಾರರಿಂದ ಸುಲಿಗೆ ಕರೆ ಸ್ವೀಕರಿಸಿದ್ದು, ಬಾಲಕಿಯನ್ನು ಸುರಕ್ಷಿತವಾಗಿ ಹಿಂದಿರುಗಿಸಲು 10 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಮಕ್ಕಳ ಪೋಷಕರು ಎರಡು ಪ್ರತ್ಯೇಕ ಖಾಸಗಿ ಆಸ್ಪತ್ರೆಗಳಲ್ಲಿ ನರ್ಸ್‌ಗಳಾಗಿದ್ದಾರೆ. ಅಪಹರಣದ ಕೆಲ ಗಂಟೆಗಳ ನಂತರ ಸ್ವತಃ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್​ ಅವರು ತ್ವರಿತ ತನಿಖೆ ಖಚಿತಪಡಿಸಿಕೊಳ್ಳಲು ರಾಜ್ಯ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದರು.

    ಕರೆ ಬಂದ ಕೂಡಲೇ ಕೇರಳ ಪೊಲೀಸರು ಬಾಲಕಿಯ ಹುಡುಕಾಟವನ್ನು ತೀವ್ರಗೊಳಿಸಿದರು, ಕೊಲ್ಲಂ, ಪತ್ತನಂತಿಟ್ಟ ಮತ್ತು ತಿರುವನಂತಪುರಂನ ದಕ್ಷಿಣ ಜಿಲ್ಲೆಗಳ ಎಲ್ಲಾ ಪ್ರಮುಖ ಮತ್ತು ಚಿಕ್ಕ ರಸ್ತೆಗಳಲ್ಲಿ ವಾಹನಗಳನ್ನು ತಪಾಸಣೆ ನಡೆಸಲಾಯಿತು.

    ಸೋಮವಾರ ಸಂಜೆ 4 ರಿಂದ 4.30 ರ ನಡುವೆ ಅಪಹರಣದ ಘಟನೆ ನಡೆದಿತ್ತು. ಬಾಲಕಿಯ ಎಂಟು ವರ್ಷದ ಸಹೋದರನ ಪ್ರಕಾರ, ಅಪಹರಣಕಾರರು ಬಿಳಿ ಕಾರಿನಲ್ಲಿ ಬಂದು ಬಾಲಕಿಯನ್ನು ಅಪಹರಿಸಿದ್ದಾರೆ. ಬಾಲಕಿಯ ಸಹೋದರ ತನ್ನ ಸಹೋದರಿಯನ್ನು ಉಳಿಸಲು ಪ್ರಯತ್ನಿಸುವಾಗ ಮೊಣಕಾಲುಗಳಿಗೆ ಗಾಯಗಳಾಗಿವೆ ಎಂದು ಪೊಲೀಸರು ತಿಳಿಸಿದ್ದರು.

    ಸಂಜೆಯ ಹೊತ್ತಿಗೆ ಬರಬಹುದು ಸಿಹಿ ಸುದ್ದಿ; ಸುರಂಗ ಕೊರೆತ ಬಹುತೇಕ ಪೂರ್ಣ, ಆಗರ್ ಯಂತ್ರದೊಂದಿಗೆ ಪೈಪ್‌ ಅಳವಡಿಕೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts