More

    ಸಂಜೆಯ ಹೊತ್ತಿಗೆ ಬರಬಹುದು ಸಿಹಿ ಸುದ್ದಿ; ಸುರಂಗ ಕೊರೆತ ಬಹುತೇಕ ಪೂರ್ಣ, ಆಗರ್ ಯಂತ್ರದೊಂದಿಗೆ ಪೈಪ್‌ ಅಳವಡಿಕೆ ಆರಂಭ

    ಉತ್ತರಕಾಶಿ: ಕಳೆದ 16 ದಿನಗಳಿಂದ ಸಿಲ್ಕ್​ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣೆಗೆ ಸಂಬಂಧಿಸಿದಂತೆ ಇಂದು (ನ.28) ಸಂಜೆಯ ಹೊತ್ತಿಗೆ ಸಿಹಿ ಸುದ್ದಿ ಬರಬಹುದಾಗಿದೆ.

    ಯಾವುದೇ ಅಡೆತಡೆಗಳನ್ನು ಎದುರಿಸದಿದ್ದರೆ, ಇಂದು ಸಂಜೆಯೊಳಗೆ ಒಳ್ಳೆಯ ಸುದ್ದಿ ನಿರೀಕ್ಷಿಸಬಹುದು ಎಂದು ಆಗರ್ ಯಂತ್ರದೊಂದಿಗೆ ಪೈಪ್‌ಗಳನ್ನು ತಳ್ಳುತ್ತಿರುವ ಟ್ರೆಂಚ್‌ಲೆಸ್ ಕಂಪನಿಯ ಕಾರ್ಮಿಕರೊಬ್ಬರು ಹೇಳಿದ್ದಾರೆ.

    ಕೈಯಿಂದ ರಂಧ್ರ ಕೊರೆಯುವ ಕಾರ್ಯ ಬಹುತೇಕ ಮುಕ್ತಾಯ ಹಂತ ತಲುಪಿದ್ದು, ಇನ್ನು 2-3 ಮೀಟರ್ ಮಾತ್ರ ಬಾಕಿ ಇದೆ ಎಂದು ತಿಳಿದುಬಂದಿದೆ. ಸೋಮವಾರದಿಂದ ಸುರಂಗದಲ್ಲಿ ಹಸ್ತಚಾಲಿತ ಕೊರೆಯುವ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ.

    ಈ ಮೊದಲು ಬೃಹತ್ ಆಗರ್ ಯಂತ್ರದ ಮೂಲಕ ಈ ಕೊರೆತವನ್ನು ನಡೆಸಲಾಗಿದ್ದು, ಶುಕ್ರವಾರ ಈ ಯಂತ್ರವು 47 ಮೀಟರ್‌ನಲ್ಲಿ ಅವಶೇಷಗಳಡಿ ಸಿಲುಕಿ ಛಿದ್ರವಾಗಿತ್ತು.

    “ನಾವು ಈಗ 50 ಮೀಟರ್ ದಾಟಿದ್ದೇವೆ” ಎಂದು ಎಲ್ & ಟಿ ತಂಡದ ನಾಯಕ ಕ್ರಿಸ್ ಕೂಪರ್ ಮಂಗಳವಾರ ತಿಳಿಸಿದ್ದಾರೆ. ರಕ್ಷಕರು ಇನ್ನು ಕೆಲವು ಮೀಟರ್‌ಗಳವರೆಗೆ ಮಾತ್ರ ಹೋಗಬೇಕಾಗಿರುವುದರಿಂದ ಈಗ ರಕ್ಷಣಾ ಕಾರ್ಯದಲ್ಲಿ ಸಾಕಷ್ಟು ಭರವಸೆ ಮೂಡಿದೆ ಎಂದೂ ಅವರು ಹೇಳಿದ್ದಾರೆ.

    ಸುರಂಗದ ಅವಶೇಷಗಳ ಮೂಲಕ 52 ಮೀಟರ್‌ಗಳವರೆಗೆ ಪೈಪ್‌ಗಳನ್ನು ಅಳವಡಿಸಲಾಗಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಮಂಗಳವಾರ ಹೇಳಿದ್ದಾರೆ, 57 ಮೀಟರ್ ಪೈಪ್​ ಅಳವಡಿಸಿದರೆ ಯಶಸ್ಸು ಸಿಗಲಿದೆ ಎಂದು ಅವರು ತಿಳಿಸಿದ್ದಾರೆ.

    ನುರಿತ ಕಾರ್ಮಿಕರ ತಂಡವು ಇಲಿ-ಕುಳಿ ಗಣಿಗಾರಿಕೆ ತಂತ್ರವನ್ನು ಬಳಸಿಕೊಂಡು ಕೈಯಿಂದ ರಂಧ್ರ ಕೊರೆಯಲಾಗುತ್ತಿದೆ. 800-ಎಂಎಂ ವ್ಯಾಸದ ಪೈಪ್ ಅನ್ನು ಆಗರ್ ಯಂತ್ರದಿಂದ ಅವಶೇಷಗಳ ಮೂಲಕ ಸೇರಿಸಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts