More

    ಕಡಲ್ಗಳ್ಳರು ಅಪಹರಿಸಿದ ಹಡಗಿನಿಂದ 15 ಭಾರತೀಯರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

    ನವದೆಹಲಿ: ಸೊಮಾಲಿಯಾ ಕರಾವಳಿಯಲ್ಲಿ ಕಡಲ್ಗಳ್ಳರಿಂದ ಅಪಹರಿಸಲ್ಪಟ್ಟ ಸರಕು ಸಾಗಣೆ ಹಡಗಿನಲ್ಲಿದ್ದ ಎಲ್ಲಾ 15 ಭಾರತೀಯರನ್ನು ರಕ್ಷಿಸಲಾಗಿದೆ ಎಂದು ಭಾರತೀಯ ನೌಕಾಪಡೆ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.

    ನೌಕಾಪಡೆಯ ಎಲೈಟ್​ ಮೆರೈನ್ ಕಮಾಂಡೋಸ್ ಅಥವಾ ಮಾರ್ಕೋಸ್ ಹಡಗಿನ ಇತರ ಭಾಗಗಳಲ್ಲಿ ಕಾರ್ಯಾಚರಣೆಗಳನ್ನು ಮುಂದುವರಿಸಿದ್ದಾರೆ ಎಂದು ನೌಕಾಪಡೆ ತಿಳಿಸಿದೆ.

    ಲೈಬೀರಿಯಾ ಧ್ವಜವಿರುವ ಎಂವಿ ಲೀಲಾ ನಾರ್ಫೋಕ್ ಎಂಬ ಹೆಸರಿನ ಹಡಗು ಪೋರ್ಟ್ ಡು ಅಕೋ (ಬ್ರೆಜಿಲ್) ಬಂದರಿನಿಂದ ನೌಕಾಯಾನ ಕೈಗೊಂಡು, ಬಹ್ರೇನ್‌ನಲ್ಲಿರುವ ಖಲೀಫಾ ಬಿನ್ ಸಲ್ಮಾನ್‌ ಬಂದರಿಗೆ ತೆರಳುತ್ತಿತ್ತು. ಸೋಮಾಲಿಯಾದಿಂದ ಪೂರ್ವಕ್ಕೆ 300 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಕಡಲ್ಗಳ್ಳರು ಇದನ್ನು ಅಪಹರಿಸಿದ್ದಾರೆ.

    ಜನವರಿ 4ರ ಸಂಜೆ ಐದರಿಂದ ಆರು ಅಪರಿಚಿತ ಶಸ್ತ್ರಸಜ್ಜಿತ ಸಿಬ್ಬಂದಿ ಹತ್ತಿದ್ದರು ಎಂದು ವ್ಯಾಪಾರಿ ಹಡಗು ಸಂದೇಶವನ್ನು ಕಳುಹಿಸಿದೆ ಎಂದು ಭಾರತೀಯ ನೌಕಾಪಡೆಯ ಹೇಳಿಕೆ ತಿಳಿಸಿದೆ.

    ಭಾರತೀಯ ನೌಕಾಪಡೆಯ ಯುದ್ಧನೌಕೆ ಐಎನ್​ಎಸ್​ ಚೆನ್ನೈ, ಕಡಲ ಗಸ್ತು ವಿಮಾನ ಪಿ- 8I ಮತ್ತು ದೀರ್ಘ-ಅಂತರದ ಪ್ರಿಡೇಟರ್ ಎಂಕ್ಯೂ9ಬಿ ಡ್ರೋನ್ ಅನ್ನು ಸಹಾಯಕ್ಕಾಗಿ ನಿಯೋಜಿಸಲಾಗಿದೆ. ಐಎನ್​ಎಸ್​ ಚೆನ್ನೈ ಯುದ್ಧನೌಕೆಯು ಅಪಹರಿಸಿದ ಹಡಗನ್ನು ಮಧ್ಯಾಹ್ನ 3:15 ಕ್ಕೆ ಉತ್ತರ ಅರೇಬಿಯನ್ ಸಮುದ್ರದಲ್ಲಿ ತಡೆಹಿಡಿದಿದೆ.

    ಅಡೆನ್ ಕೊಲ್ಲಿ ಮತ್ತು ಅರೇಬಿಯನ್ ಸಮುದ್ರದ ಬಳಿ ಇದೇ ರೀತಿಯ ಹಡಗು ಹೈಜಾಕ್​ ಘಟನೆಗಳು ನಡೆದಿವೆ. ಇರಾನ್ ಬೆಂಬಲಿತ ಹೌತಿ ಬಂಡುಕೋರರ ದಾಳಿಯನ್ನು ತಡೆಯಲು ಅಮೆರಿಕ ನೇತೃತ್ವದ ನೌಕಾ ಪಡೆಗಳು ತಮ್ಮ ಗಮನವನ್ನು ಕೆಂಪು ಸಮುದ್ರದತ್ತ ಗಮನ ನೀಡಿರುವುದರಿಂದ ಇತರೆ ಸಮುದ್ರಪ್ರದೇಶಗಳಲ್ಲಿ ಕಡಲ್ಗಳ್ಳತನ ಹೆಚ್ಚಾಗಿದೆ ಎಂದು ಹೇಳಲಾಗಿದೆ.

    21 ಭಾರತೀಯ ಸಿಬ್ಬಂದಿಗಳಿದ್ದ ಲೈಬೀರಿಯಾದ ಧ್ವಜದ ಇರುವ ಎಂವಿ ಕೆಮ್ ಪ್ಲುಟೊ ಎಂಬ ಇನ್ನೊಂದು ಹಡಗು ಕಳೆದ ವರ್ಷ ಡಿಸೆಂಬರ್ 23 ರಂದು ಭಾರತದ ಪಶ್ಚಿಮ ಕರಾವಳಿಯಲ್ಲಿ ಡ್ರೋನ್ ದಾಳಿಗೆ ಗುರಿಯಾಗಿತ್ತು.

    ಇದಲ್ಲಲ್ಲದೆ, ಭಾರತಕ್ಕೆ ತೆರಳುತ್ತಿದ್ದ ಮತ್ತೊಂದು ವಾಣಿಜ್ಯ ತೈಲ ಟ್ಯಾಂಕರ್ ಅದೇ ದಿನ ದಕ್ಷಿಣ ಕೆಂಪು ಸಮುದ್ರದಲ್ಲಿ ಶಂಕಿತ ಡ್ರೋನ್ ದಾಳಿಗೆ ಒಳಗಾಗಿತ್ತು. ಈ ನೌಕೆಯಲ್ಲಿ 25 ಭಾರತೀಯ ಸಿಬ್ಬಂದಿಯ ತಂಡವಿತ್ತು.

    ಮತ್ತೊಂದು ಘಟನೆಯಲ್ಲಿ, ಮಾಲ್ಟಾ-ಧ್ವಜದ ಹಡಗು ಎಂವಿ ರುಯೆನ್ ಅನ್ನು ಡಿಸೆಂಬರ್ 14 ರಂದು ಕಡಲ್ಗಳ್ಳರು ಅಪಹರಿಸಿದ್ದರು.

    ಉತ್ತರ ಮತ್ತು ಮಧ್ಯ ಅರೇಬಿಯನ್ ಸಮುದ್ರ ಮತ್ತು ಏಡನ್ ಕೊಲ್ಲಿಯಲ್ಲಿ ಕಡಲ ಭದ್ರತಾ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವುದನ್ನು ಮುಂದುವರಿಸಲಾಗಿದೆ ಎಂದು ಭಾರತೀಯ ನೌಕಾಪಡೆಯು ಬುಧವಾರ ಹೇಳಿದೆ.

    ಪುಣೆ ಬಿಜೆಪಿ ಶಾಸಕನಿಂದ ಕಾನ್‌ಸ್ಟೆಬಲ್‌ಗೆ ಕಪಾಳ ಮೋಕ್ಷ ವಿಡಿಯೋ ವೈರಲ್​

    ಜಗತ್ತಿನಲ್ಲೇ ಭಾರತದ ಆರ್ಥಿಕತೆ ಭರ್ಜರಿ ಬೆಳವಣಿಗೆ: ಜಿಡಿಪಿ ದರ ಶೇಕಡಾ 7.3 ಎಂದು ಅಂದಾಜಿಸಿದೆ ಎನ್​ಎಸ್​ಒ

    ಸತತ ಎರಡನೇ ದಿನ ವಿವಿಧ ಸೂಚ್ಯಂಕಗಳ ಏರಿಕೆ: ಷೇರುಗಳ ಬೆಲೆ ಹೆಚ್ಚಳಕ್ಕೆ ಕಾರಣಗಳೇನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts