More

    ಸಂಬAಧಗಳನ್ನು ಮುಳುಗಿಸಿದ ವಾರಾಹಿ ಮುಳುಗಡೆ: ಡಾ.ಗಜಾನನ ಶರ್ಮ ವಿಷಾದ

    ಹೊಸನಗರ: ಮುಳುಗಡೆ ಎಂಬುದು ಕೇವಲ ತೋಟ, ಮನೆ ಮುಳುಗಿಸಿಲ್ಲ. ಇದು ಅಲ್ಲಿನ ಸಂಸ್ಕೃತಿ, ಜನಪದ, ನಂಬಿದ ದೇವರು ದೈವ ಹಾಗೂ ಸಂಬAಧಗಳನ್ನು ಮುಳುಗಿಸಿ ಅನಾಥ ಭಾವ ಮೂಡಿಸಿದೆ ಎಂದು ಸಾಹಿತಿ ಡಾ. ಗಜಾನನ ಶರ್ಮ ವಿಷಾದಿಸಿದರು.
    ತಾಲೂಕಿನ ಮೇಲುಸುಂಕ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮಂಗಳವಾರ ಸಾಹಿತಿ ಅಂಕಣಕಾರ, ಪತ್ರಕರ್ತ ಎಂ.ಎA.ಪ್ರಭಾಕರ ಕಾರಂತ ಅವರ ವಾರಾಹಿ ಸಂತ್ರಸ್ತರ ಬದುಕು, ಬವಣೆ ಕುರಿತ ಮುಳುಗಡೆ ಒಡಲಾಳ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
    ೭೦ರ ದಶಕದಲ್ಲಿ ಜಲವಿದ್ಯುತ್ ಅನಿವಾರ್ಯವಾಗಿತ್ತು. ಆದರೆ ಯೋಜನೆಯ ಸಂತ್ರಸ್ತರನ್ನು ಸರ್ಕಾರ ಹಾಗೂ ಅಽಕಾರಿ ವರ್ಗ ನೋಡಿಕೊಂಡ ರೀತಿ ಸರಿ ಇಲ್ಲ. ಭೌತಿಕವಾಗಿ ಕನಿಷ್ಠ ಪರಿಹಾರ ನೀಡಿದೆ ಹೊರತು ಅವರ ಜನ-ಜೀವನ ಬಗ್ಗೆ ಕಾಳಜಿ ವಹಿಸಿಲ್ಲ. ವಾರಾಹಿ ನೀರಿನ ಮುಳುಗಡೆ ಸಂತ್ರಸ್ತರ ಸಾಮಾಜಿಕ, ಜಾನಪದ, ನೋವು, ನಲಿವು ಕುರಿತಂತೆ ಮುಳುಗಡೆ ಒಡಲಾಳ ಹೆಚ್ಚು ಬೆಳಕು ಚೆಲ್ಲಿದೆ. ಇದೊಂದು ದಾಖಲೆ ಹಾಗೂ ಉ¯್ಲೆÃಖನೀಯ ಕೃತಿಯಾಗಿದೆ ಎಂದರು.
    ಪರಿಸರ ಸಾಹಿತಿ ಶಿವಾನಂದ ಕಳವೆ ಮಾತನಾಡಿ, ಇಂದಿನ ತಲೆಮಾರಿಗೆ ನಿಸರ್ಗ e್ಞÁನ ಇಲ್ಲದಂತಾಗಿದೆ. ನಿಸರ್ಗ ಶಿಕ್ಷಣವನ್ನು ಕೇವಲ ಪುಸ್ತಕಕ್ಕೆ ಮೀಸಲಿಡಬಾರದು. ನಿಸರ್ಗದಲ್ಲಿರುವ ಕಾಡು, ತೊರೆ, ಪ್ರಾಣಿ, ಪಕ್ಷಿ ಗುರುತಿಸುವಿಕೆಯ ಮೂಲಕ ರಕ್ಷಣೆಯ ಕೆಲಸ ಆಗಬೇಕು. ಹೊಸ ತಲೆಮಾರಿನ ಮಾಹಿತಿಯಾಗಿ ಮುಳುಗಡೆ ಸಂತ್ರಸ್ತರ ಕುರಿತಂತೆ ಈ ಕೃತಿ ಬಿಂಬಿಸುತ್ತದೆ. ಇಲ್ಲಿನ ಮರ, ಗಿಡ, ಬಳ್ಳಿ, ಹೂವು, ಹಣ್ಣು, ಹಂಪಲುಗಳ ಮರು ನೆನಪು ಹಾಗೂ ದಾಖಲೆಯ ರೂಪದಲ್ಲಿ ನೋಡಬಹುದು ಎಂದು ಅಭಿಪ್ರಾಯಪಟ್ಟರು.
    ಹಿರಿಯ ಸಾಹಿತಿ, ಪತ್ರಕರ್ತ ಶರತ್ ಕಲ್ಕೋಡ್ ಮಲೆನಾಡಿನ ಸ್ಥಿತ್ಯಂತರ ಕುರಿತಂತೆ ಮಾತನಾಡಿ, ಮುಳುಗಡೆಯ ಕಾರಣ ಮನುಷ್ಯ ಸಂಬAಧಗಳು ದೂರ ಆಗಿದೆ. ಹಳ್ಳಿಯಲ್ಲಿ ಒಟ್ಟಾಗಿದ್ದ ಕೂಡು ಕುಟುಂಬ ಈಗ ಇಲ್ಲದಂತಾಗಿದೆ ಎಂದು ವಿಷಾದಿಸಿದರು.
    ಉಡುಪಿ ಜಿ¯್ಲÁ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಕಾರ್ಯಕ್ರಮ ಉದ್ಘಾಟಿಸಿದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅಡಕೆ ಕೃಷಿ, ದರ ವಹಿವಾಟು ಬಗ್ಗೆ ಮಾತನಾಡಿದರು. ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಕೆ ಬೇರೆ ರಾಜ್ಯಗಳಿಗೆ ಗುಳೆ ಹೋಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
    ಕೃತಿಯ ಸಮಕಾಲೀನ ಮಹತ್ವ ಕುರಿತಂತೆ ಪತ್ರಕರ್ತ ಗಿರಿಜಾ ಶಂಕರ್ ಮಾತನಾಡಿದರು. ಕೃತಿಯನ್ನು ಸಾಹಿತಿ ರೂಪಕಲಾ, ಅಂಕಣಕಾರ್ತಿ ಪೂರ್ಣಿಮಾ ನರಸಿಂಹ, ಹಿರಿಯ ಪತ್ರಕರ್ತರಾದ ಜಯರಾಮ ಅಡಿಗ, ಮುರಳೀಕೃಷ್ಣ ಮಡ್ಡಿಕೇರಿ, ಸಾಹಿತಿಗಳಾದ ಡಾ. ಜಯಪ್ರಕಾಶ್ ಮಾವಿನಕುಳಿ, ತಿರುಪತಿ ನಾಯಕ್, ಡಾ. ಮಂಜುಳಾ ಹುಲ್ಲಹಳ್ಳಿ, ಜಿ.ವಿ.ಗಣೇಶಯ್ಯ ಹಾಗೂ ಕಿಶೋರ್ ಶೀರ್ನಾಳಿ ಜತೆಯಾಗಿ ಲೋಕಾರ್ಪಣೆ ಮಾಡಿದರು.
    ಚಿತ್ರ ನಟಿ ನಾಗಶ್ರೀ ಬೇಗಾರ್ ಅವರನ್ನು ಸನ್ಮಾನಿಸಲಾಯಿತು. ಲೇಖಕ ಎಂ.ಎA.ಪ್ರಭಾಕರ್ ಕಾರಂತ್, ಸುಜಾತಾ ರಾವ್, ಚಂದ್ರಶೇಖರ ಶಾಸಿö , ಚಿತ್ರ ನಿರ್ದೇಶಕ ರಮೇಶ ಬೇಗಾರ್, ತಾರಾ ನಾಗರಾಜ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts