More

  ಪ್ರಧಾನಿ ಮೋದಿ ಗಗನಯಾನಿಯಾಗುವರೇ? ನಾಸಾ ಮುಖ್ಯಸ್ಥರು ಹೇಳಿದ್ದೇನು?

  ನವದೆಹಲಿ: ಮುಂದಿನ ವರ್ಷದ ಕೊನೆಯಲ್ಲಿ ಅಂತಾರಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಾಟ ಕೈಗೊಳ್ಳಲಾಗುವ ಎರಡು ವಾರಗಳ ವೈಜ್ಞಾನಿಕ ಕಾರ್ಯಾಚರಣೆಗಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾ ಭಾರತೀಯ ಗಗನಯಾತ್ರಿಗಳಿಗೆ ತರಬೇತಿ ನೀಡಲಿದೆ. ಹಾಗಿದ್ದರೆ ಈ ಅಂತರಿಕ್ಷ ಪ್ರವಾಸದಲ್ಲಿ ಗಗನಯಾನಿಗಳಾಗುವ ಭಾರತೀಯರು ಯಾರು? ಈಗಷ್ಟೇ ಯುದ್ಧ ವಿಮಾನದಲ್ಲಿ ಹಾರಾಟ ನಡೆಸಿ ಎಲ್ಲರ ಗಮನಸೆಳೆದಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾರತದ ಗಗನಯಾನಿಯಾಗುವರೇ?

  ಭಾರತಕ್ಕೆ ಆಗಮಿಸಿರುವ ನಾಸಾ ಮುಖ್ಯಸ್ಥ ಬಿಲ್ ನೆಲ್ಸನ್ ಅವರಿಗೆ ಮಾಧ್ಯಮದವರು ಪ್ರಧಾನಿ ನರೇಂದ್ರ ಮೋದಿ ಅವರು ಗಗನಯಾತ್ರಿಯಾಗಬಹುದೇ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಲ್ಸನ್​, “ಎರಡು ವಾರಗಳ ವೈಜ್ಞಾನಿಕ ಕಾರ್ಯಾಚರಣೆಗಾಗಿ ಮುಂದಿನ ವರ್ಷದ ಕೊನೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯು ಭಾರತೀಯ ಗಗನಯಾತ್ರಿಗೆ ತರಬೇತಿ ನೀಡಲಿದೆ. ಬಾಹ್ಯಾಕಾಶಕ್ಕೆ ಹಾರುವುದು ಯಾವುದೇ ರಾಜಕಾರಣಿಗೆ, ಅದರಲ್ಲೂ ರಾಷ್ಟ್ರದ ಮುಖ್ಯಸ್ಥರಿಗೆ ಅಮೂಲ್ಯವಾದ ಅನುಭವವಾಗಿರುತ್ತದೆ. ಪ್ರಧಾನಿ ಮೋದಿ ಅವರು ಬಾಹ್ಯಾಕಾಶ ಅಭಿಮಾನಿ” ಎಂದಿದ್ದಾರೆ.

  ಪ್ರಸ್ತುತ ಭಾರತಕ್ಕೆ ಭೇಟಿ ನೀಡಿರುವ ನೆಲ್ಸನ್ ಅವರು ಅಮೆರಿಕದ ಸೆನೆಟರ್​ ಆಗಿದ್ದಾರೆ. ಅಲ್ಲದೆ, ರಾಜಕಾರಣಿಯಾಗಿ ಬಾಹ್ಯಾಕಾಶ ನೌಕೆಯಲ್ಲಿ ಪ್ರಯಾಣ ಕೂಡ ಕೈಗೊಂಡಿದ್ದಾರೆ.

  ” ಬಾಹ್ಯಾಕಾಶದಲ್ಲಿ ಯಾವುದೇ ರಾಜಕೀಯ ಗಡಿಗಳಿಲ್ಲ, ಯಾವುದೇ ಧಾರ್ಮಿಕ ಗಡಿಗಳು ಅಥವಾ ಜನಾಂಗೀಯ ಗಡಿಗಳಿಲ್ಲ.. ಎಲ್ಲರೂ ಭೂಮಿಯ ಪ್ರಜೆ” ಎಂದೂ ನೆಲ್ಸನ್​ ಹೇಳಿದ್ದಾರೆ.

  ಭಾರತವು “ಆರ್ಟೆಮಿಸ್” ಯೋಜನೆಯಲ್ಲಿ ತನ್ನ ಪಾತ್ರವನ್ನು ನಿರ್ಧರಿಸಬೇಕು.” ಎಂದು ನೆಲ್ಸನ್​ ಹೇಳಿದ್ದಾರೆ, ಆರ್ಟೆಮಿಸ್ ಯೋಜನೆಗೆ ಭಾರತದಿಂದ ನಾಸಾದ ನಿರೀಕ್ಷೆ ಏನು ಎಂದು ಕೇಳಿದಾಗ, ಚಂದ್ರನ ಕಾರ್ಯಾಚರಣೆಗಳಲ್ಲಿ ಅಂತಾರಾಷ್ಟ್ರೀಯ ಸಹಕಾರಕ್ಕೆ ಸಾಕಷ್ಟು ಅವಕಾಶಗಳಿದ್ದು, ನಿರ್ದಿಷ್ಟತೆಗಳನ್ನು ಇನ್ನೂ ನಿರ್ಧರಿಸಲಾಗಿಲ್ಲ ಎಂದು ತಿಳಿಸಿದ್ದಾರೆ.

  ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಹಕಾರವಿಲ್ಲದೆ ಇದು ಸಂಭವಿಸಬಹುದೇ ಎಂದು ಕೇಳಿದಾಗ, ಭವಿಷ್ಯದ ಚಂದ್ರಯಾನಗಳು “ವಾಣಿಜ್ಯ ಪಾಲುದಾರರು ಮತ್ತು ಅಂತಾರಾಷ್ಟ್ರೀಯ ಪಾಲುದಾರರೊಂದಿಗೆ” ಇರುತ್ತವೆ ಎಂದು ಪ್ರತಿಕ್ರಿಯಿಸಿದ್ದಾರೆ.

  ಏನಿದು ಆರ್ಟೆಮಿಸ್” ಯೋಜನೆ:

  ಈ ಯೋಜನೆಯು ಮಂಗಳ ಗ್ರಹಕ್ಕೆ ಮಾನವ ಕಾರ್ಯಾಚರಣೆಗಳಿಗೆ ತಯಾರಿ ಮಾಡುವುದಕ್ಕಾಗಿ ಚಂದ್ರನ ಮೇಲೆ ವಾಸಿಸುವ ಯೋಜನೆಯಾಗಿದೆ. ಇದರಲ್ಲಿ ಅನೇಕ ದೇಶಗಳು ಈಗಾಗಲೇ ಅಮೆರಿಕದ ಜತೆ ಕೈಜೋಡಿಸಿವೆ. ಈ ಯೋಜನೆಯ ಭಾಗವಾಗಿ ಚಂದ್ರನ ಮೇಲೆ ಮೊದಲ ಮಹಿಳೆ ಮತ್ತು ಮೊದಲ ಕಪ್ಪು ವರ್ಣಿಯ ವ್ಯಕ್ತಿಯನ್ನು ಕಳುಹಿಸಲು ನಾಸಾ ಯೋಜಿಸುತ್ತಿದೆ. ಅಂದಾಜು 50 ವರ್ಷಗಳ ಹಿಂದೆ 1969 ರಲ್ಲಿ ಅಮೆರಿಕದ ಗಗನಯಾತ್ರಿಗಳಾದ ನೀಲ್ ಆರ್ಮ್‌ಸ್ಟ್ರಾಂಗ್ ಮತ್ತು ಎಡ್ವಿನ್ ಆಲ್ಡ್ರಿನ್ ಅವರು ಮೊದಲ ಬಾರಿಗೆ ಚಂದ್ರನ ಮೇಲೆ ಇಳಿದಿದ್ದರು. ಇದಾದ ನಂತರ ಚಂದ್ರನ ಮೇಲೆ ಮಾನವಸಹಿತ ನೌಕೆ ಕಳುಹಿಸಲು ಅಮೆರಿಕ ಆರ್ಟೆಮಿಸ್​ ಯೋಜನೆ ರೂಪಿಸಿದೆ.

  ಸುರಂಗದಲ್ಲಿ ಸಿಲುಕಿದ ಕಾರ್ಮಿಕರ ರಕ್ಷಣೆಗೆ ಕೊನೆಗೂ ನೆರವಾಗಿದ್ದು ನಿಷೇಧಿತ- ಅಪಾಯಕಾರಿ ರ್ಯಾಟ್ ಹೋಲ್​ ಮೈನಿಂಗ್​!

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts