More

    ಬೆಂಗಳೂರು ರೇವ್​ ಪಾರ್ಟಿ ಕೇಸ್​: ಫಾರ್ಮ್​ ಹೌಸ್​ ಒಳಗೆ ನಡೆದಿದ್ದೇನು? ಸ್ಫೋಟಕ ಹೇಳಿಕೆ ನೀಡಿದ ನಟಿ ಆಶಿ ರಾಯ್​

    ಹೈದರಾಬಾದ್​: ಸದ್ಯ ಬೆಂಗಳೂರು ರೇವ್ ಪಾರ್ಟಿ ಪ್ರಕರಣ ತೆಲುಗು ರಾಜ್ಯಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ. ಈ ರೇವ್ ಪಾರ್ಟಿಯಲ್ಲಿ ಟಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಇವರಲ್ಲಿ ಖ್ಯಾತ ನಟಿ ಹೇಮಾ ಕೂಡ ಇದ್ದರು ಎಂದು ಬೆಂಗಳೂರು ಪೊಲೀಸರು ಮಾಹಿತಿ ನೀಡಿದ್ದಾರೆ. ಆದರೆ, ನಾನು ಪಾರ್ಟಿಯಲ್ಲಿ ಭಾಗವಹಿಸಿಲ್ಲ ಅಂತಾ ಹೇಳಿ ಹೇಮಾ ಬಿಡುಗಡೆ ಮಾಡಿರುವ ಇದೀಗ ಚರ್ಚೆಗೆ ಗ್ರಾಸವಾಗಲಿದೆ.

    ರೇವ್​ ಪಾರ್ಟಿಯಲ್ಲಿ ಭಾಗವಹಿಸಿದವರಲ್ಲಿ ಹೇಮಾ ಮತ್ತು ಶ್ರೀಕಾಂತ್ ಹೆಸರುಗಳು ಪ್ರಮುಖವಾಗಿ ಕೇಳಿಬಂದಿದ್ದವು. ಮೊನ್ನೆಯಷ್ಟೇ ಹೇಮಾ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದರು. ನಾನು ಹೈದರಾಬಾದ್ ಫಾರ್ಮ್ ಹೌಸ್​ನಲ್ಲಿ ಇದ್ದೇನೆ. ಪಾರ್ಟಿಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. ಆದರೆ, ಹೇಮಾ ಹೇಳುತ್ತಿರುವುದು ಸುಳ್ಳು. ಅವರು ಪಾರ್ಟಿಯಲ್ಲಿ ಇದ್ದಿದ್ದು ನಿಜ ಎಂದು ಬೆಂಗಳೂರು ಪೊಲೀಸರು ಹೇಳುತ್ತಿದ್ದಾರೆ. ಇದಾದ ಬಳಿಕ ಶ್ರೀಕಾಂತ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಅವರು ಹೈದರಾಬಾದ್​ನಲ್ಲಿ ಇರುವುದು ಖಚಿತವಾಗಿದೆ. ಆದರೆ ಈ ಪಾರ್ಟಿಯಲ್ಲಿ ಮತ್ತೊಬ್ಬ ನಟಿ ಆಶಿ ರಾಯ್ ಕೂಡ ಇದ್ದರು ಎಂಬುದು ತಡವಾಗಿ ಬೆಳಕಿಗೆ ಬಂದಿದೆ.

    ಆದರೆ ಆಶಿ ರಾಯ್​, ರೇವ್​ ಪಾರ್ಟಿಯ ಬಗ್ಗೆ ಆಸಕ್ತಿದಾಯಕ ಕಾಮೆಂಟ್​ಗಳನ್ನು ಮಾಡಿದ್ದಾರೆ. ನಾನು ಹೇಳಲು ಬಯಸುವುದೇನೆಂದರೆ ನಾನು ಹುಟ್ಟುಹಬ್ಬದ ಸಂತೋಷಕೂಟಕ್ಕೆ ಮಾತ್ರ ಹೋಗಿದ್ದೆ. ನಾನು ವಾಸುವನ್ನು ನನ್ನ ಸಹೋದರ ಎಂದು ಕರೆಯುತ್ತೇನೆ. ಅಲ್ಲಿ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿತ್ತು ಮತ್ತು ಒಳಗೆ ಎಲ್ಲರೂ ಏನು ಮಾಡುತ್ತಿದ್ದಾರೆ ಎಂಬುದು ನನಗೆ ತಿಳಿದಿರಲಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನೀವೆಲ್ಲರೂ ನನ್ನನ್ನು ಬೆಂಬಲಿಸಿ. ನಾನು ಕಷ್ಟಪಟ್ಟು ಉದ್ಯಮದಲ್ಲಿ ಬೆಳೆಯುತ್ತಿರುವ ಹುಡುಗಿ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ಆಶಿ ರಾಯ್​ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

    ಆದರೆ, ನಿನ್ನೆ ಹಲವು ಚಾನೆಲ್‌ಗಳಿಗೆ ಸಂದರ್ಶನ ನೀಡುತ್ತಿದ್ದ ಆಶಿ ರಾಯ್​, ಪಾರ್ಟಿಯಲ್ಲಿ ಹೇಮಾ ಅವರನ್ನು ನೋಡಿಲ್ಲ ಎಂದು ಹೇಳಿದರು. ಹೇಮಾ ಅವರು ನನಗೆ ಮೊದಲಿನಿಂದಲೂ ಪರಿಚಿತರು. ಆದರೆ ಅವರು ಆ ಫಾರ್ಮ್ ಹೌಸ್‌ನಲ್ಲಿ ಅಥವಾ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ಪಾರ್ಟಿಯಲ್ಲಿ ಭಾಗವಹಿಸಿದ ಎಲ್ಲರಿಂದ ಮಾದರಿಗಳನ್ನು ತೆಗೆದುಕೊಂದು ಪೊಲೀಸರು ಅಲ್ಲಿಂದ ತೊರೆದರು ಎಂದು ಆಶಿ ರಾಯ್ ಬಹಿರಂಗಪಡಿಸಿದರು.

    ಸಿನಿಮಾ ವಿಚಾರಕ್ಕೆ ಬರುವುದಾದರೆ, ಕೆಎಸ್ ಹಂಡ್ರೆಡ್ ಮತ್ತು ಮಿಸ್ಟರಿ ಆಫ್ ಸಾರಿಕಾ ಮುಂತಾದ ತೆಲುಗು ಚಿತ್ರಗಳಲ್ಲಿ ಆಶಿ ರಾಯ್​ ನಾಯಕಿಯಾಗಿ ನಟಿಸಿದ್ದಾರೆ. ಈಗ ಅನಿರೀಕ್ಷಿತವಾಗಿ ಈ ಡ್ರಗ್ಸ್ ಪ್ರಕರಣ ಮುನ್ನೆಲೆಗೆ ಬಂದಿದೆ. (ಏಜೆನ್ಸೀಸ್​)

    ಬೆಂಗಳೂರು ರೇವ್​ ಪಾರ್ಟಿ ಕೇಸ್​: ದಿನಕ್ಕೊಂದು ಹೈಡ್ರಾಮ ಮಾಡುತ್ತಿರುವ ನಟಿ ಹೇಮಾಗೆ ಬಿಗ್​ ಶಾಕ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts