More

    ಕೇಂದ್ರೀಯ ವಿವಿಯಲ್ಲಿದೆ 71 ಬೋಧಕ ಹುದ್ದೆಗಳು: 1.45 ಲಕ್ಷ ರೂ.ವರೆಗೆ ಸಂಬಳ, ಕೆಲವೇ ದಿನ ಬಾಕಿ…

    ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ ( ಕೇರಳ ಸೆಂಟ್ರಲ್ ಯೂನಿವರ್ಸಿಟಿ) ವಿವಿಧ ವಿಭಾಗಗಳಲ್ಲಿ ಬೋಧಕ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಯುಜಿಸಿ ನಿಯಮಾನುಸಾರ ನೇಮಕಾತಿ ಪ್ರಕ್ರಿಯೆ ಹಾಗೂ ಅರ್ಹತಾ ಮಾನದಂಡಗಳನ್ನು ಪರಿಗಣಿಸಲಾಗುವುದು. ಹೀಗಾಗಿ ಅಭ್ಯರ್ಥಿಗಳು ಯುಜಿಸಿ ವೆಬ್​ಸೈಟ್ ಪರೀಕ್ಷಿಸಿಕೊಳ್ಳುತ್ತಿರುವುದು ಉತ್ತಮ ಎಂದು ತಿಳಿಸಲಾಗಿದೆ.

    ಒಟ್ಟು ಹುದ್ದೆಗಳು: 71
    ಹುದ್ದೆ ವಿವರ

    * ಪ್ರೊಫೆಸರ್ – 15

    * ಅಸೋಸಿಯೇಟ್ ಪ್ರೊಫೆಸರ್ – 29

    * ಅಸಿಸ್ಟೆಂಟ್ ಪ್ರೊಫೆಸರ್ – 27

     

    ಯಾವ ವಿಭಾಗಗಳಲ್ಲಿ ನೇಮಕ?: ಕಾಮರ್ಸ್ ಆಂಡ್ ಇಂಟರ್​ನ್ಯಾಷನಲ್ ಬಿಜಿನೆಸ್, ಇಂಗ್ಲಿಷ್ ಆಂಡ್ ಕಂಪ್ಯಾರೇಟಿವ್ ಲಿಟೆರೇಚರ್, ಕಂಪ್ಯೂಟರ್ ಸೈನ್ಸ್, ಅರ್ಥಶಾಸ್ತ್ರ, ಶಿಕ್ಷಣ, ಜಿನೋಮಿಕ್ ಸೈನ್ಸ್, ಜಿಯಾಲಜಿ, ಕನ್ನಡ, ಲಿಂಗ್ವಿಸ್ಟಿಕ್ಸ್, ಮ್ಯಾನೇಜ್​ವೆುಂಟ್ ಸ್ಟಡೀಸ್, ಗಣಿತಶಾಸ್ತ್ರ, ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ಆಂಡ್ ಪಾಲಿಸಿ ಸ್ಟಡೀಸ್, ಪಬ್ಲಿಕ್ ಹೆಲ್ತ್ ಆಂಡ್ ಕಮ್ಯುನಿಟಿ ಮೆಡಿಸನ್, ಸೋಷಿಯಲ್ ವರ್ಕ್, ಟೂರಿಸಂ ಸ್ಟಡೀಸ್, ಕೆಮಿಸ್ಟ್ರಿ, ಎನ್ವಿರಾನ್​ವೆುಂಟಲ್ ಸೈನ್ಸ್, ಹಿಂದಿ, ಇಂಟರ್​ನ್ಯಾಷನಲ್ ರಿಲೇಷನ್ಸ್, ಕಾನೂನು, ಮಲಯಾಳಂ, ಪ್ಲಾಂಟ್ ಸೈನ್ಸ್, ಯೋಗ ಸ್ಟಡೀಸ್, ಝೂಲಾಜಿ, ಬಯೋಕೆಮಿಸ್ಟ್ರಿ ಆಂಡ್ ಮಾಲಿಕ್ಯುಲರ್ ಬಯಾಲಜಿ, ಫಿಜಿಕ್ಸ್ ವಿಭಾಗಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ.

    ಶೈಕ್ಷಣಿಕ ಅರ್ಹತೆ: ಕಲಾ, ವಾಣಿಜ್ಯ, ಶಿಕ್ಷಣ, ಕಾನೂನು, ಸಮಾಜ ವಿಜ್ಞಾನ, ಭಾಷೆ, ಯೋಗ, ಪಬ್ಲಿಕ್ ಹೆಲ್ತ್ ಮತ್ತು ಕಮ್ಯುನಿಟಿ ಮೆಡಿಸನ್​ನಲ್ಲಿ 2018ರ ಯುಜಿಸಿ ನಿಯಮಾನುಸಾರ ಕನಿಷ್ಠ ಶಿಕ್ಷಣ ಪಡೆದಿರಬೇಕು. ಮ್ಯಾನೇಜ್​ವೆುಂಟ್ ಸ್ಟಡೀಸ್ ಮತ್ತು ಟೂರಿಸಂ ಸ್ಟಡೀಸ್​ಗೆ ಎಐಸಿಟಿಇಯ 2019ನೇ ನಿಯಮಾನುಸಾರ ಶಿಕ್ಷಣ ಪಡೆದಿರಬೇಕು. ಮೀಸಲಾತಿ ಅಭ್ಯರ್ಥಿಗಳಿಗೆ ಶೇ.5 ಅಂಕ ವಿನಾಯಿತಿ ಇದೆ. ಪಿಎಚ್​ಡಿ, ಎಂಫಿಲ್ ಮಾಡಿರುವ ಅಭ್ಯರ್ಥಿಗಳಿಗೂ ಶೇ.5 ಅಂಕ ವಿನಾಯಿತಿ ಜತೆ ಪಿಎಚ್.ಡಿ ಮತ್ತು ಎಂಫಿಲ್ ಮಾಡಲು ತೆಗೆದುಕೊಂಡ ಅವಧಿಯನ್ನು ವೃತ್ತಿ ಅನುಭವ ಎಂದು ಪರಿಗಣಿಸಲಾಗುವುದು.

    ವೇತನ: ಪ್ರೊಫೆಸರ್ ಹುದ್ದೆಗೆ ಮಾಸಿಕ 1,44,200 ರೂ., ಅಸೋಸಿಯೇಟ್ ಪ್ರೊಫೆಸರ್​ಗೆ ಮಾಸಿಕ 1,31,400 ರೂ., ಅಸಿಸ್ಟೆಂಟ್ ಪ್ರೊಫೆಸರ್​ಗೆ ಮಾಸಿಕ 57,700 ರೂ. ವೇತನ ನಿಗದಿಪಡಿಸಲಾಗಿದೆ.

    ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳ ಶೈಕ್ಷಣಿಕ ಅರ್ಹತೆ (ಹೆಚ್ಚಿನ ವಿದ್ಯಾರ್ಹತೆ ಹೊಂದಿದವರಿಗೆ ಆದ್ಯತೆ), ವೃತ್ತಿ ಅನುಭವ ಆಧರಿಸಿ ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನದಲ್ಲಿನ ಭಾಗವಹಿಸುವಿಕೆ ಆಧರಿಸಿ ಆಯ್ಕೆ ಮಾಡಲಾಗುವುದು.

    ಅರ್ಜಿ ಶುಲ್ಕ: ಎಸ್ಸಿ, ಎಸ್ಟಿ, ಮಹಿಳಾ ಮತ್ತು ಡಿಎ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು 1500 ರೂ. ಪ್ರೊಸೆಸಿಂಗ್ ಶುಲ್ಕವನ್ನು ಸಲ್ಲಿಸಬೇಕು.

     

    ಅರ್ಜಿ ಸಲ್ಲಿಸಲು ಕೊನೇ ದಿನ: 20.12.2021

    ಅಂಚೆ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯದಿನ: 31.12.2021

    ಅಂಚೆ ವಿಳಾಸ:The Recruitment Cell, Central University Of Kerala, Tejaswini Hills, Periye, Kasaragod- 671 320

    ಅಧಿಸೂಚನೆಗೆ: https://bit.ly/3kO3kP1


    ಮಾಹಿತಿಗೆ: http://www.cukerala.ac.in/

    ಷಾರ್ಟ್‌ಹ್ಯಾಂಡ್‌, ಟೈಪಿಂಗ್‌ ಬಲ್ಲಿರಾ? ಅಬಕಾರಿ ತೆರಿಗೆ ಇಲಾಖೆಯಿಂದ ಅರ್ಜಿ ಆಹ್ವಾನ

    ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿ: ಸೈನಿಕ ಶಾಲೆಯಲ್ಲಿವೆ ಹಲವು ಉದ್ಯೋಗ- 1.42ಲಕ್ಷ ರೂ.ವರೆಗೆ ಸಂಬಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts