ಎಸ್‌ಎಸ್‌ಎಲ್‌ಸಿಯಿಂದ ಸ್ನಾತಕೋತ್ತರ ಪದವಿ: ಸೈನಿಕ ಶಾಲೆಯಲ್ಲಿವೆ ಹಲವು ಉದ್ಯೋಗ- 1.42ಲಕ್ಷ ರೂ.ವರೆಗೆ ಸಂಬಳ

sainik school
Published on

ಪದವೀಧರರಾಗಿದ್ದು, ಬೋಧನೆಗೆ ಆಸಕ್ತಿಯಿದ್ದು, ಸೂಕ್ತ ವಿದ್ಯಾರ್ಹತೆಯನ್ನು ಹೊಂದಿದ್ದರೆ, ಸೈನಿಕ ಶಾಲೆಯಲ್ಲಿ ಬೋದಕ ಹಾಗೂ ಬೋಧಕೇತರ ವಿಭಾಗದಲ್ಲಿ ಹಲವು ಉದ್ಯೋಗಾವಕಾಶಗಳಿವೆ. ಪ್ರತಿಭಾವಂತ ಅಭ್ಯರ್ಥಿಗಳಿಗೆ ಉದ್ಯೋಗ ಸಿಗುವುದು ಖಚಿತ. ಜಮ್ಮು-ಕಾಶ್ಮೀರದ ನಗ್ರೋತಾದಲ್ಲಿರುವ ಸೈನಿಕ್ ಶಾಲೆಯಲ್ಲಿ ಬೋಧಕ ಹಾಗೂ ಬೋಧಕೇತರ ಹುದ್ದೆಗೆ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಲಾಗಿದೆ. ಪದವಿಗಿಂತ ಉನ್ನತ ಶಿಕ್ಷಣ ಪಡೆದಿರುವ ಅಭ್ಯರ್ಥಿಗಳೂ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆ ವಿವರ

* ಪೋಸ್ಟ್ ಗ್ರಾಜುಯೇಟ್ ಟೀಚರ್ (ಪಿಜಿಟಿ) (ಬಯೋ) - 1

* ಟ್ರೇನ್ಡ್ ಗ್ರಾಜುಯೇಟ್ ಟೀಚರ್ (ಟಿಜಿಟಿ) (ಗಣಿತ - 1, ಎಸ್​ಎಸ್​ಟಿ - 1, ಹಿಂದಿ- 1) - 3

* ಬ್ಯಾಂಡ್ ಮಾಸ್ಟರ್ - 1

* ಕೌನ್ಸಿಲರ್ - 1

* ಪಿಇಎಂ/ ಪಿಟಿಐ ಕಮ್ ಮೇಟ್ರನ್ (ಮಹಿಳಾ ಅಭ್ಯರ್ಥಿ) - 1

* ವಾರ್ಡ್ ಬಾಯ್್ಸ - 4

ವೇತನ: ಎಲ್ಲ ಭತ್ಯೆಗಳನ್ನು ಸೇರಿ ಪಿಜಿಟಿಗೆ ಮಾಸಿಕ 47,600-1,51,100 ರೂ., ಟಿಜಿಟಿ ಗಣಿತ ಮತ್ತುಎಸ್​ಎಸ್​ಟಿಗೆ ಮಾಸಿಕ 44,900-1,42,400 ರೂ., ಟಿಜಿಟಿ ಹಿಂದಿ ಶಿಕ್ಷಕರಿಗೆ ಮಾಸಿಕ 30,000 ರೂ., ವಾರ್ಡ್ ಬಾಯ್ಗೆ ಮಾಸಿಕ 18,000 ರೂ., ಉಳಿದ ಹುದ್ದೆಗಳಿಗೆ ಮಾಸಿಕ 25,000 ರೂ. ವೇತನ ಇದೆ.

ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ, ದೈಹಿಕ ಶಿಕ್ಷಣದಲ್ಲಿ ಪದವಿ (ಬಿಪಿಇಡಿ), ಮನಃಶಾಸ್ತ್ರದಲ್ಲಿ ಪದವಿ/ ಚೈಲ್ಡ್ ಡೆವಲಪ್​ವೆುಂಟ್ ಸ್ನಾತಕೋತ್ತರ ಪದವಿ/ ಕೌನ್ಸಿಲಿಂಗ್​ನಲ್ಲಿ ಡಿಪ್ಲೊಮಾ, ಹಿಂದಿಯಲ್ಲಿ 4 ವರ್ಷದ ಇಂಟಿಗ್ರೇಟೆಡ್ ಪದವಿ ಕೋರ್ಸ್, ಇತಿಹಾಸ/ ಜಿಯೋಗ್ರಫಿ, ಗಣಿತದಲ್ಲಿ ಪದವಿ, ಬಾಟ್ನಿ/ ಜೂವಾಲಜಿ/ ಲೈಫ್ ಸೈನ್ಸ್/ ಬಯೋಸೈನ್ಸ್/ ಜೆನೆಟಿಕ್ಸ್/ ಮೈಕ್ರೋ ಬಯೋ/ ಬಯೋಟೆಕ್/ ಪ್ಲಾಂಟ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು. ಪದವಿಯಲ್ಲಿ ಕನಿಷ್ಠ ಶೇ.50 ಅಂಕ ಪಡೆದಿರಬೇಕು.

ವಯೋಮಿತಿ: 1.12.2021ಕ್ಕೆ ಅನ್ವಯವಾಗುವಂತೆ ವಾರ್ಡ್​ಬಾಯ್ ಹುದ್ದೆಗೆ ಕನಿಷ್ಠ 18 ವರ್ಷ, ಉಳಿದ ಹುದ್ದೆಗಳಿಗೆ ಕನಿಷ್ಠ 21 ವರ್ಷ, ಪಿಜಿಟಿಗೆ ಗರಿಷ್ಠ 40 ವರ್ಷ, ಟಿಜಿಟಿಗೆ ಗರಿಷ್ಠ 35 ವರ್ಷ, ಬ್ಯಾಂಡ್ ಮಾಸ್ಟರ್ ಹಾಗೂ ವಾರ್ಡ್​ಬಾಯ್ಗೆ ಗರಿಷ್ಠ 50 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ.

ಅರ್ಜಿ ಸಲ್ಲಿಸಲು ಕೊನೇ ದಿನ: 18.12.2021

(ಅರ್ಜಿ ಸಲ್ಲಿಕೆ ದಿನ ವಿಸ್ತರಿಸಿರುವ ಅಧಿಸೂಚನೆ https://bit.ly/3IhoLSv)

ಅಧಿಸೂಚನೆಗೆ: https://bit.ly/3Ga8w83(ಎಂಪ್ಲಾಮೆಂಟ್ ನ್ಯೂಸ್​ನ ನ.27ರ ಸಂಚಿಕೆಯ ಪುಟ 28 ನೋಡಿ)

ಮಾಹಿತಿಗೆ: http://www.sainikschoolnagrota.com

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net