ಷಾರ್ಟ್‌ಹ್ಯಾಂಡ್‌, ಟೈಪಿಂಗ್‌ ಬಲ್ಲಿರಾ? ಅಬಕಾರಿ ತೆರಿಗೆ ಇಲಾಖೆಯಿಂದ ಅರ್ಜಿ ಆಹ್ವಾನ

udyoga-tax
Published on

ತಮಿಳುನಾಡು ಮತ್ತು ಪುದುಚೇರಿಯಲ್ಲಿರುವ ಜಿಎಸ್​ಟಿ ಮತ್ತು ಕೇಂದ್ರ ಅಬಕಾರಿ ಸುಂಕ ಪ್ರಧಾನ ಮುಖ್ಯ ಆಯುಕ್ತ ಕಚೇರಿಯಲ್ಲಿ ವಿವಿಧ ಹುದ್ದೆಗೆ ಪ್ರತಿಭಾವಂತ ಕ್ರೀಡಾಪಟುಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದಾಗಿದೆ. ಕ್ರಿಕೆಟ್, ಫುಟ್​ಬಾಲ್, ಹಾಕಿ, ಕಬ್ಬಡಿ, ವಾಲಿಬಾಲ್, ಅಥ್ಲೆಟಿಕ್ಸ್- ಟ್ರಾ್ಯಕ್ ಆಂಡ್ ಫೀಲ್ಡ್ (ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ) ಕ್ರೀಡೆಯಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ, ಅಂತರ ವಿವಿಯ ಟೂರ್ನಮೆಂಟ್​ಗಳಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಅರ್ಹರಾಗಿದ್ದಾರೆ.

ಒಟ್ಟು ಹುದ್ದೆಗಳು: 19

ಹುದ್ದೆ ವಿವರ

* ಟ್ಯಾಕ್ಸ್ ಅಸಿಸ್ಟೆಂಟ್ - 13

* ಸ್ಟೆನೋಗ್ರ್ರಾಫರ್ ಗ್ರೇಡ್2 - 2

* ಹವಾಲ್ದಾರ್ - 3

* ಮಲ್ಟಿ ಟಾಸ್ಕಿಂಗ್ ಸ್ಟಾಫ್ - 1

ಶೈಕ್ಷಣಿಕ ಅರ್ಹತೆ: ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ ಪಡೆದಿರಬೇಕು. ಟ್ಯಾಕ್ಸ್ ಅಸಿಸ್ಟೆಂಟ್​ಗೆ ಪ್ರತಿ ಗಂಟೆಗೆ 8,000 ಪದಗಳ ಡೇಟಾ ಎಂಟ್ರಿ ವೇಗ ಹೊಂದಿರಬೇಕು. ಸ್ಟೆನೋಗ್ರಾಫರ್​ಗೆ ಡಿಕ್ಟೇಷನ್ ಪ್ರತಿ ನಿಮಿಷಕ್ಕೆ 80 ಪದಗಳ ಟೈಪಿಂಗ್ ಸ್ಪೀಡ್, ಇಂಗ್ಲಿಷ್​ನಲ್ಲಿ ಪ್ರತಿ ನಿಮಿಷಕ್ಕೆ 50 ಪದ, ಹಿಂದಿ 65 ಪದಗಳ ಪ್ರತಿಲೇಖನ ಕೌಶಲ ಹೊಂದಿರಬೇಕು. ಹವಾಲ್ದಾರ್​ಗೆ ದೈಹಿಕ ಮಾನದಂಡ ವಿಧಿಸಲಾಗಿದೆ.

ವಯೋಮಿತಿ: ಎಲ್ಲ ಹುದ್ದೆಗಳಿಗೂ ಕನಿಷ್ಠ 18 ವರ್ಷ, ಗರಿಷ್ಠ 27 ವರ್ಷ ವಯೋಮಿತಿ ನಿಗದಿಪಡಿಸಲಾಗಿದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ವೇತನ: ಟ್ಯಾಕ್ಸ್ ಅಸಿಸ್ಟೆಂಟ್ ಹಾಗೂ ಸ್ಟೆನೋಗ್ರಾಫರ್​ಗೆ ಮಾಸಿಕ 25,500-81,100 ರೂ., ಹವಾಲ್ದಾರ್ ಮತ್ತು ಎಂಟಿಎಸ್​ಗೆ ಮಾಸಿಕ 18,000-56,900 ರೂ. ವೇತನ ಇದೆ.

ಆಯ್ಕೆ ಪ್ರಕ್ರಿಯೆ: ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಆಹ್ವಾನಿಸಲಾಗುವುದು. ಸಂದರ್ಶನದ ದಿನಾಂಕ, ಸ್ಥಳ, ಸ್ಥಳ ಹಾಗೂ ಇತರ ಮಾಹಿತಿಯನ್ನು ಶಾರ್ಟ್​ಲಿಸ್ಟ್ ಮಾಡಲಾದ ಅಭ್ಯರ್ಥಿಗಳಿಗೆ ಮೇಲ್ ಮೂಲಕ ತಿಳಿಸಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳು ಯಾವ ಹುದ್ದೆಗೆ ಅರ್ಜಿ ಸಲ್ಲಿಸಲಾಗುತ್ತಿದೆ ಹಾಗೂ ಕ್ರೀಡಾ ವಿಭಾಗದಲ್ಲಿ ಯಾವ ಕ್ರೀಡೆ ಎಂಬುದನ್ನು ಅರ್ಜಿಯಲ್ಲಿ ತಿಳಿಸಬೇಕು. ಅಗತ್ಯ ದಾಖಲೆಗಳ ಸಹಿತ ಅರ್ಜಿಯನ್ನು The Additional Commissioner-CCA, Office of the Principal Chief Commissioner of GST & Central Excise, Tamilnadu & Puducherry Zone, Chennai, GST Bhawan, 26/1 Mahatma Gandhi Road, Nungambakkam, Chennai 600 034 ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಕೆಗೆ ಕೊನೇ ದಿನ: 31.12.2021

ಅಧಿಸೂಚನೆಗೆ: https://bit.ly/3F2q8Cw

ಮಾಹಿತಿಗೆ: http://centralexcisechennai.gov.in

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net