More

    ಜಗತ್‌ಪ್ರಸಿದ್ಧ ನಾಸ್ಟ್ರಾಡಾಮಸ್ ಭವಿಷ್ಯವಾಣಿಯಲ್ಲೇನಿದೆ? ಈತ ಹೇಳಿದ್ದೆಲ್ಲ ನಿಜವಾಗಿವೆಯಂತೆ!

    ಫ್ರಾನ್ಸ್‌: 2020ನೇ ಸಾಲು ಕೋಟ್ಯಂತರ ಮಂದಿಯ ಬಾಳಿನಲ್ಲಿ ಅಕ್ಷರಶಃ ಕರಾಳವೇ ಆಗಿಹೋಗಿದೆ. 2021 ಆದರೂ ನೆಮ್ಮದಿ ತರಬಹುದು ಎಂದು ನೋಡಿದರೆ, ದಿಗಿಲು ಇನ್ನೂ ಬಿಟ್ಟಿಲ್ಲ. ಕೋವಿಡ್‌-19 ನಿಂದ ಸುಧಾರಿಸಿಕೊಳ್ಳುವ ಮೊದಲೇ, ಕರೊನಾ ರೂಪಾಂತರಿ ಬಂದು ಇದೀಗ ಹಕ್ಕಿಜ್ವರದ ಭೀತಿ ಎದುರಾಗಿದೆ.

    ಹಾಗಿದ್ದರೆ 2021 ಕೂಡ ಕಳೆದ ವರ್ಷದಂತೆಯೇ ಇರಲಿದೆಯೆ ಅಥವಾ ಜಗತ್ತಿಗೆ ಏನಾದರೂ ಸುಖ ಇರಲಿದೆಯೇ ಎಂಬ ಬಗ್ಗೆ ಫ್ರೆಂಚ್ ಭೌತಜ್ಞಾನಿ ಮೈಕಲ್ ದಿ ನಾಸ್ಟ್ರಾಡಾಮಸ್ ಭವಿಷ್ಯವಾಣಿ ನುಡಿದಿದ್ದು ಇದೀಗ ಬಹಿರಂಗವಾಗಿದೆ. 2020ರ ಕರಾಳ ದಿನಗಳ ಬಗ್ಗೆಯೂ ಹೇಳಿದ್ದ ನಾಸ್ಟ್ರಾಡಾಮಸ್‌ 2021ರ ಕುರಿತು ನುಡಿದಿರುವ ಭವಿಷ್ಯವಾಣಿ ಆತಂಕಕ್ಕೆ ಕಾರಣವಾಗಿದೆ.

    ಪ್ರತಿವರ್ಷ ಜಗತ್ತಿನ ವಿವಿಧ ಭಾಗಗಳಲ್ಲಿ ಏನೇನು ಸಂಭವಿಸುತ್ತದೆ ಎಂದು ಮೊದಲೇ ಅಂದಾಜಿಸಿದ್ದ ನಾಸ್ಟ್ರಾಡಾಮಸ್. 465 ವರ್ಷಗಳ ಹಿಂದೆ ಈತ ಜಗತ್ತಿನ ಬಗ್ಗೆ ಹೇಳಿರುವ ಮುನ್ಸೂಚನೆಗಳು ಇಲ್ಲಿಯವರೆಗೆ ಜನರನ್ನು ಅಚ್ಚರಿಗೊಳಿಸಿವೆ. ಪ್ರೊಫೆಸೀಸ್ ಆಫ್ ನಾಸ್ಟ್ರಾಡಾಮಸ್ ಎಂಬ ಪುಸ್ತಕದಲ್ಲಿ, ಈತ 6338 ಭವಿಷ್ಯವಾಣಿಗಳನ್ನು ಉಲ್ಲೇಖಿಸಿದ್ದಾನೆ. ಅದರಲ್ಲಿ ಇದುವರೆಗೆ ಶೇ. 70 ರಷ್ಟು ನಿಜವೆಂದು ಸಾಬೀತಾಗಿವೆಯಂತೆ.

    2020ರ ಭವಿಷ್ಯವಾಣಿಯನ್ನೂ ಈತ ನುಡಿದಿದ್ದು, ಅದು ಕೂಡ ಸಾಕಷ್ಟು ಸರಿಯಾಗಿದೆ ಎಂದು ಉಲ್ಲೇಖಿಸಲಾಗಿದೆ. ಇದೇ ಕಾರಣಕ್ಕೆ ನಾಸ್ಟ್ರಾಡಾಮಸ್ ಭವಿಷ್ಯವಾಣಿ ಜಗತ್ತಿನಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿದೆ. ಈತನ ಸಾವಿನ ಬಳಿಕ ಪುಸ್ತಕ ಪ್ರಸಿದ್ಧಿ ಪಡೆದಿದೆ.

    ಹಾಗಿದ್ದರೆ 2021ರ ಬಗ್ಗೆ ನಾಸ್ಟ್ರಾಡಾಮಸ್ ಏನು ಹೇಳಿದ್ದಾನೆ ನೋಡುವುದಾದರೆ, ಈ ವರ್ಷ ಜಗತ್ತಿನಲ್ಲಿ ಭಾರಿ ಅನಾವೃಷ್ಟಿ ಸಂಭವಿಸಲಿದೆ ಎಂದಿದ್ದಾನೆ.
    ಚಿತ್ರ ವಿಚಿತ್ರ ಸಾಂಕ್ರಮಿಕ ರೋಗಗಳು , ಬರ ಹಾಗೂ ಭೂಕಂಪನಗಳಂಥ ಪ್ರಾಕೃತಿಕ ವಿಕೋಪಗಳಿಂದ ಜನರು ತತ್ತರಿಸುತ್ತಾರೆ ಎಂದು ಪುಸ್ತಕದಲ್ಲಿ ಉಲ್ಲೇಖವಾಗಿದೆ. ಕರೊನಾಗಿಂತಲೂ ಭಯಂಕರವಾದ ವೈರಸ್‌ಗಳು ನಮಗೆ ಕಾಟ ಕೊಡಲಿವೆ ಎನ್ನುವ ಸೂಚ್ಯ ವಾಕ್ಯಗಳು ಇದರಲ್ಲಿವೆ. ಇದರ ಮುನ್ಸೂಚನೆ ಇದಾಗಲೇ ಸಿಗುತ್ತಿವೆ.

    ಜೈವಿಕ ಅಸ್ತ್ರವೊಂದನ್ನು ರಷ್ಯಾದ ವಿಜ್ಞಾನಿಗಳು ಸಿದ್ಧಪಡಿಸುತ್ತಿದ್ದು, ಅದು ನಮ್ಮನ್ನೆಲ್ಲಾ ನಾಶ ಮಾಡಬಲ್ಲದು. ಜಲವಾಯು ಪರಿವರ್ತನೆಯ ಈ ಹಾನಿ ಯುದ್ಧ ಹಾಗೂ ಸಮರದ ಸ್ಥಿತಿಗಳನ್ನು ಸೃಷ್ಟಿಸಲಿದೆ. ಸಂಪನ್ಮೂಲಗಳಿಗಾಗಿ ವಿಶ್ವದಲ್ಲಿ ಹಾಹಾಕಾರ ಸೃಷ್ಟಿಯಾಗಲಿದೆ ಹಾಗೂ ಜನರು ಪಲಾಯನಗೈಯಲ್ಲಿದ್ದಾರೆ ಎಂದು ನಾಸ್ಟ್ರಾಡಾಮಸ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾನೆ.

    ಈ ವರ್ಷ ಅನೇಕ ಆಸೆಗಳನ್ನು ಇಟ್ಟುಕೊಂಡ ಹಲವು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಇಲ್ಲವೇ ವಿವಿಧ ಅವಘಡಗಳಲ್ಲಿ ಮೃತಪಡುತ್ತಾರೆ. ಅಂದರೆ ಇವರು ಅರ್ಧ ಸತ್ತಿರುವ ಕಾರಣ, ಅವುಗಳ ಪ್ರೇತಾತ್ಮಗಳೆಲ್ಲಾ ನಮ್ಮ ಸುತ್ತ ಗಿರಕಿ ಹಾಕುತ್ತಿರುತ್ತವೆ, ಆದ್ದರಿಂದ ಪ್ರಪಂಚದ ತುಂಬ ಪ್ರೇತಾತ್ಮಗಳ ಕಾಟ ಇರಲಿದೆ ಎಂದಿದ್ದಾರೆ.

    ಮುಂದಿನ ದಿನಗಳಲ್ಲಿ ಭೂಮಿಯ ಮೇಲೆ ಉಲ್ಕೆಯೊಂದು ಬಂದು ಬೀಳಲಿದೆ ಎಂದು ನಾಸ್ಟ್ರಾಡಾಮಸ್ ನಾಲ್ಕು ಶತಮಾನಗಳ ಹಿಂದೆಯೇ ಭವಿಷ್ಯ ನುಡಿದಿದ್ದ. ಅಚ್ಚರಿ ಎಂದರೆ ಈ ಮಾತನ್ನು ಅಮೆರಿಕದ ನಾಸಾದ ವಿಜ್ಞಾನಿಗಳು ಕೂಡ ಖಚಿತಪಡಿಸಿದ್ದಾರೆ. ಇಷ್ಟೇ ಅಲ್ಲದೇ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭೂಕಂಪನವೊಂದು ಸಂಭವಿಸುವ ಸಾಧ್ಯತೆ ಇದೆ. ಇದು ಅಪಾಯಕಾರಿ ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.

    2021ರಲ್ಲಿ ಭೂಮಿಯನ್ನ ಡ್ರ್ಯಾಗನ್​ ವಶಪಡಿಸಿಕೊಳ್ಳತ್ತೆ! ಭೀಕರವಾಗಿರುತ್ತೆ ಈ ವರ್ಷ ಎಂದ ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ!

    ನಿತ್ಯಭವಿಷ್ಯ| ಈ ರಾಶಿಯವರಿಗೆ ಜನಸಂಘಟನಾ ಶಕ್ತಿ ಪ್ರದರ್ಶಿಸಲು ಅವಕಾಶ ಕೂಡಿ ಬರಲಿದೆ..

    ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?

    ಮಕ್ಕಳು ಪಾಲಕರನ್ನು ಕಡೆಗಣಿಸುತ್ತಿದ್ದರೆ, ಅವರಿಗೆ ಆಸ್ತಿ ಕೊಡದೇ ಮಾರಲು ಅವಕಾಶವಿದೆಯಾ?

    ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಕಡ್ಡಾಯ ಮಾಡಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts