

ಮೇಷ: ಆಪ್ತ ಜನರು ಎನಿಸಿಕೊಂಡವರೇ ನೆರವಾಗಲು ಬಂದುನಿಲ್ಲುವುದು ಅನುಮಾನವಾಗಿದೆ. ಆದರೂ ಕೂಡ ಇತರರ ಬೆಂಬಲ ಲಭ್ಯ. ಶುಭಸಂಖ್ಯೆ: 8
ವೃಷಭ: ದಾರಿಯೇ ಕಾಣುತ್ತಿಲ್ಲ ಎಂಬಂತಹ ನಿಷ್ಕ್ರಿಯತೆ ಬೇಡ. ಕ್ರಿಯಾಶೀಲತೆಯ ಅಪಾರ ಶಕ್ತಿಯನ್ನು ನಂಬಿಕೊಂಡು ಮುಂದಕ್ಕೆ ಸಾಗಿ. ಶುಭಸಂಖ್ಯೆ: 4
ಮಿಥುನ: ಸಿದ್ಧಿದಾಯಕಿಯಾದ ದುರ್ಗಾದೇವಿಯನ್ನು ಶ್ರದ್ಧಾಭಕ್ತಿಗಳಿಂದ ಆರಾಧಿಸಿ. ಮಾನಸಿಕವಾದ ತಳಮಳ ಪರಿಹಾರವಾಗಲಿದೆ. ಶುಭಸಂಖ್ಯೆ: 1
ಕಟಕ: ನಿಮ್ಮ ಪ್ರಾಮಾಣಿಕತೆ ಗುಣದಿಂದಾಗಿ ಜನರ ಮೆಚ್ಚುಗೆ ಗಳಿಸುವಿರಿ. ಇದು ಮನೆಯಲ್ಲಿ ಸಂತಸದ ಅನುಭವಕ್ಕೆ ದಾರಿ ಮಾಡಲಿದೆ. ಶುಭಸಂಖ್ಯೆ: 6
ಸಿಂಹ : ಎಲ್ಲ ಬಾರಿಯೂ ಗ್ರಹಗತಿಗಳು ಅನುಕೂಲಕರ ಸ್ಥಿತಿಯಲ್ಲೇ ಇರಲಾರವು. ಆದರೂ ಕೂಡ ಇಂದು ಚಂದ್ರದೇವನಿಂದಾಗಿ ಲಾಭವಿದೆ. ಶುಭಸಂಖ್ಯೆ: 2
ಕನ್ಯಾ: ಅಧಿಕ ಪರಿಶ್ರಮಪಡುವುದರಿದಿಂದಲೇ ನಿಮ್ಮ ಇಚ್ಛಿತ ಯೋಜನೆಗಳಿಗೆ ಸಾಕಾರದ ಸಿದ್ಧಿಯನ್ನು ಪಡೆಯಲು ಸಾಧ್ಯವಾಗಲಿದೆ. ಶುಭಸಂಖ್ಯೆ: 7
ತುಲಾ: ವಿದ್ಯಾರ್ಥಿಗಳಾಗಿದ್ದಲ್ಲಿ ಉನ್ನತ ವಿದ್ಯಾಭ್ಯಾಸದ ಕನಸು ಈಡೇರಲು ಆಕಸ್ಮಿಕವಾದ ಸಹಾಯ ಸಹಕಾರಗಳು ದೊರೆಯುತ್ತವೆ. ಶುಭಸಂಖ್ಯೆ: 3
ವೃಶ್ಚಿಕ: ಉತ್ತಮವಾದ ಕೆಲಸಗಳನ್ನು ಮಾಡುವುದಕ್ಕೆ ಪ್ರಯತ್ನಿಸುತ್ತಿದ್ದೀರಿ. ಈ ಯತ್ನಗಳಲ್ಲಿ ಸೋಲು ಉಂಟಾಗದ ಸಿದ್ಧಿ ಹೊಂದುವಿರಿ. ಶುಭಸಂಖ್ಯೆ: 9
ಧನುಸ್ಸು: ತೊಂದರೆಗಳನ್ನು ದೂರ ಮಾಡಿ ಸಫಲತೆಯು ಕೈಗೆ ಬಂದೊದಗಲು ಶ್ರೀ ಮಹಾಗಣಪತಿಯನ್ನು ಗರಿಕೆಗಳಿಂದ ಆರಾಧನೆ ಮಾಡಿ. ಶುಭಸಂಖ್ಯೆ: 5
ಮಕರ : ಮಕ್ಕಳಿಂದ ಉತ್ತಮವಾದ ಪ್ರತಿಕ್ರಿಯೆಯನ್ನು ಪಡೆಯುವುದಕ್ಕಾಗಿ ಈ ಕಾಲಘಟ್ಟವೇ ನಿಮ್ಮನ್ನು ಕೈಹಿಡಿದು ಮುಂದೆ ನಡೆಸಲಿದೆ. ಶುಭಸಂಖ್ಯೆ: 1
ಕುಂಭ : ಪರಿಪೂರ್ಣವಾದ ನೆಮ್ಮದಿಯನ್ನು ಇಚ್ಛಿಸಿ ಮುಂದಿನ ಯೋಜನೆಗಳನ್ನು ರೂಪಿಸಿದರೆ ಗೆಲುವು, ಪ್ರಶಂಸೆಗಳು ಸಿಗಲಿವೆ. ಶುಭಸಂಖ್ಯೆ: 4
ಮೀನ : ಅಪ್ರತಿಮ ಜನಸಂಘಟನಾ ಶಕ್ತಿಯನ್ನು ಹೊಂದಿದ ನಿಮಗೆ ಅದನ್ನು ಪ್ರದರ್ಶಿಸಲು ಉತ್ತಮ ಅವಕಾಶ ಸದ್ಯದಲ್ಲಿಯೇ ಕೂಡಿಬರಲಿದೆ. ಶುಭಸಂಖ್ಯೆ: 8