More

    ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುವಾಗ ಮಾಸ್ಕ್‌ ಕಡ್ಡಾಯ ಮಾಡಿಲ್ಲ: ಹೈಕೋರ್ಟ್‌ಗೆ ಕೇಂದ್ರದ ಹೇಳಿಕೆ

    ನವದೆಹಲಿ: ಕರೊನಾ ವೈರಸ್‌ನ ಈ ದಿನಗಳಲ್ಲಿ ಮಾಸ್ಕ್‌ ಕಡ್ಡಾಯ ಮಾಡಿ ವರ್ಷ ಉರುಳುತ್ತಾ ಬಂತು. ಹಲವು ಕಡೆಗಳಲ್ಲಿ ಮಾಸ್ಕ್‌ ಧರಿಸದೇ ಹೋದವರಿಂದ ಲಕ್ಷ ಲಕ್ಷ ರೂಪಾಯಿ ವಸೂಲು ಮಾಡಲಾಗುತ್ತಿದೆ. ಅದೇ ರೀತಿ ವಾಹನಗಳಲ್ಲಿ ಹೋಗಲಿ, ನಡೆದು ಹೋಗಲಿ, ಮನೆಯ ಬಳಿಯೇ ಹೋಗುತ್ತಿರಲಿ ಒಟ್ಟಿನಲ್ಲಿ ಮುಖದ ಮೇಲೊಂದು ಮಾಸ್ಕ್‌ ಇರಲೇಬೇಕು ಎನ್ನುವುದು ನಿಯಮ.

    ಆದರೆ ಕಾರಿನಲ್ಲಿ ಒಂಟಿಯಾಗಿ ಹೋಗುತ್ತಿದ್ದರೆ ಮಾಸ್ಕ್‌ ಧರಿಸಲೇಬೇಕಾ ಅಥವಾ ಧರಿಸದಿದ್ದರೂ ಓಕೆನಾ ಎಂಬುದು ಕೋಟ್ಯಂತರ ಮಂದಿಯ ಪ್ರಶ್ನೆಯಾಗಿದೆ. ಈ ಕುರಿತು ಪೊಲೀಸರು ಮತ್ತು ವಾಹನ ಮಾಲೀಕರ ನಡುವೆ ವಾಗ್ವಿವಾದ ನಡೆಯುತ್ತಲೇ ಇದೆ.

    ಇದಕ್ಕೀಗ ಸ್ಪಷ್ಟ ಉತ್ತರವನ್ನು ಕೇಂದ್ರ ಸರ್ಕಾರ ನೀಡಿದೆ. ಅದೇನೆಂದರೆ, ಕಾರಿನಲ್ಲಿ ಒಂಟಿಯಾಗಿ ಒಬ್ಬಂಟಿಯಾಗಿ ಪ್ರಯಾಣಿಸುವಾಗ ಮಾಸ್ಕ್​ ಕಡ್ಡಾಯವಲ್ಲ ಎಂದು ಹೇಳಿದೆ. ತಾನು ಆ ರೀತಿಯ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ದೆಹಲಿ ಹೈಕೋರ್ಟ್‌ಗೆ ಹೇಳಿದೆ.

    ಆರೋಗ್ಯದ ವಿಷಯವು ಆಯಾ ರಾಜ್ಯ ಸರ್ಕಾರಗಳಿಗೆ ಬಿಟ್ಟಿರುವ ವಿಷಯ. ಆದ್ದರಿಂದ ತಾನು ಈ ಕುರಿತು ಮಾರ್ಗಸೂಚಿ ಹೊರಡಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಹಿನ್ನೆಲೆಯಲ್ಲಿ, ಆಯಾ ರಾಜ್ಯ ಸರ್ಕಾರಗಳ ತೀರ್ಮಾನ ಅಂತಿಮವಾಗಿರಲಿದೆ.

    ವಕೀಲರೊಬ್ಬರು ತಮಗೆ ಪೊಲೀಸರು ವಿಧಿಸಿದ್ದ ದಂಡವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ ಕೇಳಿದ ಪ್ರಶ್ನೆಗೆ ಸರ್ಕಾರ ಈ ಮಾಹಿತಿ ನೀಡಿದೆ. ಸೌರಭ್​ ಶರ್ಮಾ ಎಂಬ ವಕೀಲರು ಸಲ್ಲಿಸಿರುವ ಅರ್ಜಿ ಇದಾಗಿದೆ. ಇವರು ಮಾಸ್ಕ್‌ ಧರಿಸಿರಲಿಲ್ಲ ಎಂದು ಅವರಿಗೆ 500 ರೂಪಾಯಿ ದಂಡ ಹಾಕಲಾಗಿತ್ತು. ಇದನ್ನು ಅವರು ದೆಹಲಿ ಹೈಕೋರ್ಟ್​​ನಲ್ಲಿ ಪ್ರಶ್ನೆ ಮಾಡಿದ್ದರು. ಅಲ್ಲದೆ, ಮಾನಸಿಕವಾಗಿ ಹಿಂಸೆ ನೀಡಿದ್ದಕ್ಕೆ 10 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೋರಿದ್ದಾರೆ.

    ಅರ್ಜಿ ವಿಚಾರಣೆ ವೇಳೆ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ದೆಹಲಿ ಹೈಕೋರ್ಟ್‌ಗೆ ಪ್ರತಿಕ್ರಿಯಿಸಿತು. ವಾಹನಗಳಲ್ಲಿ ಒಂಟಿಯಾಗಿ ತೆರಳುವಾಗ ಮಾಸ್ಕ್​ ಹಾಕಬೇಕು ಎನ್ನುವುದು ನಿಯಮಾವಳಿಯಲ್ಲಿ ಇಲ್ಲ ಎಂದು ಹೇಳಿದೆ.

    ಇನ್ನು ಬೆಂಗಳೂರಿನ ವಿಷಯಕ್ಕೆ ಬರುವುದಾದರೆ ಕಳೆದ ಆಗಸ್ಟ್‌ನಲ್ಲಿ ಬಿಬಿಎಂಪಿ ಒಂಟಿಯಾಗಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರೂ ಮಾಸ್ಕ್‌ ಕಡ್ಡಾಯ ಎಂದು ಆದೇಶಿಸಿದೆ. ಇಲ್ಲದಿದ್ದರೆ ದಂಡ ವಿಧಿಸಲಾಗುತ್ತಿದೆ.

    ಮೊದಲ ರಾತ್ರಿಯೇ ನೀವು ನನಗೆ ಬೇಡ ಎಂದುಬಿಟ್ಟಳು- ನರಕವಾಗಿರುವ ಬದುಕನ್ನು ಹೇಗೆ ಸಹಿಸಲಿ?

    ಎಲ್ಲರಿಗೂ ಉಚಿತ ಕರೊನಾ ಲಸಿಕೆ: ಘೋಷಣೆ ಮಾಡಿದ್ರು ಇಲ್ಲಿಯ ಸಿಎಂ

    ನಿನ್ನನ್ನೇ ಪ್ರೀತಿಸೋದು ಅಂದೋಳು ಈಗ ಬೇರೆ ಮದ್ವೆಯಾಗಹೊರಟಿದ್ದಾಳೆ- ಸಾಯೋಣ ಎನಿಸ್ತಿದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts