More

    ಚುನಾವಣಾಧಿಕಾರಿ ನಡೆ ಹೈಕೋರ್ಟ್‌ನಲ್ಲಿ ಪ್ರಶ್ನೆ- ಜಿಲ್ಲಾಧ್ಯಕ್ಷ ಆರೋಪ

    ರಾಯಚೂರು: ರಾಯಚೂರು ನಗರ ವಿಧಾನಸಭೆ ಕ್ಷೇತ್ರದಲ್ಲಿ ಸಲ್ಲಿಸಲಾಗಿದ್ದ ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿ ರಾತ್ರೋರಾತ್ರಿ ಸ್ವೀಕೃತಗೊಳಿಸಿರುವುದು ಅನುಮಾನಕ್ಕೆ ಕಾರಣವಾಗಿದೆ. ಚುನಾವಣಾಧಿಕಾರಿ ಪ್ರಭಾವಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರೂಪಾಕ್ಷಿ ಆರೋಪಿಸಿದರು.

    ಸ್ಥಳೀಯ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಈ ಕುರಿತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದರ ಜತೆಗೆ ಹೈಕೋರ್ಟ್‌ನಲ್ಲಿ ಚುನಾವಣಾಧಿಕಾರಿ ರಜನಿಕಾಂತ ಚೌಹಾಣ್ ನಡೆಯನ್ನು ಪ್ರಶ್ನಿಸಲಾಗುವುದು ಎಂದರು.

    ಏ.21ರಂದು ನಡೆದ ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಅಗತ್ಯ ದಾಖಲೆ ಇಲ್ಲದಿರುವುದು ಮತ್ತು ಕ್ರಮಬದ್ಧವಾಗಿ ಭರ್ತಿ ಮಾಡದಿರುವುದರಿಂದ ಮಾಜಿ ಶಾಸಕ ಸೈಯದ್ ಯಾಸೀನ್, ಸಾಜೀದ್ ಸಮೀರ್, ಬಷೀರುದ್ದೀನ್, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ರಾಮನಗೌಡ ಏಗನೂರು ನಾಮಪತ್ರಗಳನ್ನು ರಜನಿಕಾಂತ ಚೌಹಾಣ್ ತಿರಸ್ಕೃತಗೊಳಿಸಿದ್ದರು.

    ರಾತ್ರೋರಾತ್ರಿ ನಾಮಪತ್ರಗಳ ಸ್ವೀಕೃತ

    ಉಮೇದುವಾರಿಕೆ ತಿರಸ್ಕೃತಗೊಂಡ ಅಭ್ಯರ್ಥಿಗಳು ಮರು ಮನವಿ ಮಾಡಿದರೂ ನಾಮಪತ್ರಗಳನ್ನು ಸ್ವೀಕಾರಗೊಳಿಸಿರಲಿಲ್ಲ. ಆದರೆ ರಾತ್ರೋರಾತ್ರಿ ರಾಮನಗೌಡ ಏಗನೂರು ಸೇರಿ ಮೂವರ ನಾಮಪತ್ರಗಳನ್ನು ಸ್ವೀಕೃತಗೊಳಿಸಿದ್ದಾರೆ. ಇದರ ಹಿಂದೆ ಭ್ರಷ್ಟಾಚಾರ ನಡೆದಿರುವ ಶಂಕೆಯಿದೆ. ಆಯೋಗದ ನಿಮಯಗಳನ್ನು ಉಲ್ಲಂಘಿಸಿರುವ ಚುನಾವಣಾಧಿಕಾರಿ ರಜನಿಕಾಂತ್ ಚೌಹಾಣ್ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಎಂ.ವಿರೂಪಾಕ್ಷಿ ಒತ್ತಾಯಿಸಿದರು.

    ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ಅವಕಾಶ

    ರಾಯಚೂರು ನಗರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಈ.ವಿನಯಕುಮಾರ ಮಾತನಾಡಿ, ಚುನಾವಣಾಧಿಕಾರಿ ನಾಮಪತ್ರದಲ್ಲಿನ ದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡದೆ ಉಮೇದುವಾರಿಕೆಗಳನ್ನು ತಿರಸ್ಕರಿಸಿದ್ದು, ನಂತರ ಸ್ವೀಕೃತಗೊಳಿಸಿದ್ದು ನಿಯಮಗಳ ಉಲ್ಲಂಘನೆಯಾಗಿದೆ.

    ನಾಮಪತ್ರ ಪರಿಶೀಲನೆ ಸಂದರ್ಭದಲ್ಲಿ ಸರಿಪಡಿಸಲು ಅವಕಾಶ ನೀಡುವಂತೆ ಮನವಿ ಮಾಡಿದರೂ ಅವಕಾಶ ನೀಡದೆ ತಿರಸ್ಕರಿಸಿ, ನಂತರ ಒಬ್ಬರ ನಾಮಪತ್ರ ಸ್ವೀಕೃತಗೊಳಿಸಿದ್ದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದರು. ಪದಾಧಿಕಾರಿಗಳಾದ ಎನ್.ಶಿವಶಂಕರ, ಯುಸೂಫ್ ಖಾನ್, ವಿಶ್ವನಾಥ ಪಟ್ಟಿ, ಬಿ.ತಿಮ್ಮಾರೆಡ್ಡಿ, ಲಕ್ಷ್ಮೀಪತಿ ಗಾಣಧಾಳ, ನರಸಿಂಹಲು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts