ಹಾಥರಸ್​ ರೇಪ್​ ಕೇಸ್​ಗೆ ಭಾರಿ ಟ್ವಿಸ್ಟ್​: ಆರೋಪಿಯೊಂದಿಗೆ 104 ಬಾರಿ ಫೋನ್​ಕಾಲ್​ ಮಾಡಿದ್ದ ಯುವತಿ!

hathras
Published on

ಹಾಥರಸ್​ (ಉತ್ತರಪ್ರದೇಶ): ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಉತ್ತರ ಪ್ರದೇಶದ ಹಾಥರಸ್​ ರೇಪ್​ ಆ್ಯಂಡ್​ ಮರ್ಡರ್​ ಕೇಸ್ ದಿನಕ್ಕೊಂದರಂತೆ ಹೊಸ ರೂಪ ಪಡೆಯುತ್ತಲೇ ಸಾಗಿದೆ.

​ ಒಂದೆಡೆ ಸಂತ್ರಸ್ತೆಯ ಕುಟುಂಬದ ಮೇಲೆ ನಿಜವಾದ ಕರುಣೆ ತೋರುವ ಬದಲು ರಾಜಕೀಯ ಲಾಭಕ್ಕಾಗಿ ಹಲವರು ಈ ಪ್ರಕರಣವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ  ಬಳಸಿಕೊಳ್ಳುತ್ತಿರುವುದರ ನಡುವೆಯೇ, ಉತ್ತರ ಪ್ರದೇಶ ಸರ್ಕಾರವನ್ನೇ ಅಲ್ಲಾಡಿಸುವ ಮಟ್ಟಿಗೆ ಹೋಗಿರುವ ಈ ಪ್ರಕರಣ ಇದೀಗ ಇನ್ನೊಂದು ಕುತೂಹಲದ ತಿರುವು ಪಡೆದುಕೊಂಡಿದೆ.

ಇದು ಅತ್ಯಾಚಾರವೇ ಅಲ್ಲ ಎಂದು ಪೊಲೀಸರು ವಾದ ಮಂಡಿಸುತ್ತಿರುವ ನಡುವೆಯೇ, ಅತ್ಯಾಚಾರಕ್ಕೆ ಒಳಗಾಗಿ ಮೃತಪಟ್ಟಿದ್ದಾಳೆ ಎನ್ನಲಾಗುತ್ತಿರುವ 19 ವರ್ಷದ ಯುವತಿಯು, ಪ್ರಕರಣದ ಪ್ರಮುಖ ಆರೋಪಿ ಸಂದೀಪ್​ ಸಿಂಗ್​ನೊಂದಿಗೆ ನಿರಂತರವಾಗಿ 104 ಬಾರಿ ಫೋನ್​ನಲ್ಲಿ ಸಂಪರ್ಕದಲ್ಲಿ ಇದ್ದಳು ಎಂಬ ಕುತೂಹಲದ ಅಂಶವನ್ನು ಉತ್ತರ ಪ್ರದೇಶ ಪೊಲೀಸರು ಹೊರಗೆಡವಿದ್ದಾರೆ.

ಸಂತ್ರಸ್ತೆ ಹಾಗೂ ಸಂದೀಪ್​ಸಿಂಗ್​ನ ಫೋನ್ ಸಂಖ್ಯೆಗಳ ನಡುವೆ 62 ಔಟ್ ಗೋಯಿಂಗ್ ಮತ್ತು 42 ಇನ್​ಕಮಿಂಗ್ ಕಾಲ್​ಗಳು ಬಂದಿದ್ದು, ಒಟ್ಟು 104 ಬಾರಿ ಸಂಪರ್ಕಿಸಲಾಗಿದೆ. ಈ ಪ್ರಕಾರ ಸಂತ್ರಸ್ತೆಯು ಮತ್ತು ಮುಖ್ಯ ಆರೋಪಿಗಳು ನಿರಂತರ ಸಂಪರ್ಕದಲ್ಲಿರುವುದು ಸ್ಪಷ್ಟ ಎಂದು ಉತ್ತರಪ್ರದೇಶ ಪೊಲೀಸರು ಹೇಳಿದ್ದಾರೆ. 2019ರ ಅಕ್ಟೋಬರ್​ 13ರಿಂದ ಈ ಫೋನ್​ಕಾಲ್​ಗಳು ಶುರುವಾಗಿವೆ.

ಸಂತ್ರಸ್ತೆಯ ಕುಟುಂಬ ಮತ್ತು ಸಂದೀಪ್ ಸಿಂಗ್​ನ ಫೋನ್ ಟ್ರ್ಯಾಕ್ ಮಾಡಿರುವ ಪೊಲೀಸರು, ಮುಖ್ಯ ಆರೋಪಿಯು ಯುವತಿಯೊಂದಿಗೆ ನಿರಂತರ ದೂರವಾಣಿ ಸಂಪರ್ಕದಲ್ಲಿದ್ದ ಎಂದು ತಿಳಿಸಿದ್ದಾರೆ. ಯುವತಿ ನೆಲೆಸಿರುವ ಬೂಲ್‌ಗಾಹಿ ಗ್ರಾಮದಿಂದ ಎರಡು ಕಿ.ಮೀ ದೂರದಲ್ಲಿರುವ ಚಂದಪಾ ಪ್ರದೇಶದಲ್ಲಿರುವ ಸೆಲ್ ಟವರ್‌ಗಳಿಂದ ಹೆಚ್ಚಿನ ಕರೆಗಳನ್ನು ಮಾಡಲಾಗಿದೆ.

ಸೆ. 14ರಂದು ಸಂತ್ರಸ್ತೆ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದಾಗ, ಅತ್ಯಾಚಾರ ನಡೆದಿದೆ ಎಂಬ ಆರೋಪವಿದೆ. ಗಂಭೀರ ಗಾಯಗೊಂಡಿದ್ದ ಯುವತಿ 29ರಂದು ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾಳೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net