More

    ಶರಣಾಗಲು ಹೇಳಿದರೆ ಉಗ್ರರಿಂದ ಗುಂಡಿನ ದಾಳಿ: ಇಬ್ಬರನ್ನು ಹೊಡೆದುರುಳಿಸಿದ ಯೋಧರು

    ಜಮ್ಮು: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಭಾರತೀಯ ಸೇನಾಪಡೆ ಎನ್​ಕೌಂಟರ್​ ನಡೆಸಿದ್ದು, ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.

    ಶೋಪಿಯಾನ್ ಜಿಲ್ಲೆಯ ಸುಗಾನ್ ಗ್ರಾಮದಲ್ಲಿ ಭದ್ರತಾಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿದ್ದು ಇದರಲ್ಲಿ ಭಾರತೀಯ ಯೋಧರು ಭಯೋತ್ಪಾದಕರನ್ನು ಹತ್ಯೆ ಮಾಡಿದ್ದಾರೆ.

    ಇಬ್ಬರು ಉಗ್ರರನ್ನು ಹತ್ಯೆ ಮಾಡಲಾಗಿದ್ದು, ಗುರುತು ಪತ್ತೆಯಾಗಿಲ್ಲ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದ್ದು, ಇನ್ನೂ ಹೆಚ್ಚಿನ ಉಗ್ರರು ಅಡಗಿರುವ ಸಾಧ್ಯತೆ ಇದೆ.

    ಜೈನಪೊರಾ ಪ್ರದೇಶದಲ್ಲಿ ಉಗ್ರರ ಅನುಮಾನಾಸ್ಪದ ಓಡಾಟಗಳು ಕಂಡು ಬಂದ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಕಾರ್ಯಾಚರಣೆ ನಡೆಸಲು ಆರಂಭಿಸಿತ್ತು. ಈ ವೇಳೆ ಉಗ್ರರು ಭದ್ರತಾಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಕಾಶ್ಮೀರ ಐಜಿಪಿ ವಿವಿರಣೆ ನೀಡಿದ್ದಾರೆ.

    ಇದನ್ನೂ ಓದಿ: ಹಾಥರಸ್​ ಘಟನೆ ಖಂಡಿಸಿ ತಂದೆಯ ಪ್ರತಿಭಟನೆ: ಇತ್ತ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮಗನ ಬಂಧನ!

    ಇದಕ್ಕೂ ಮೊದಲು ಉಗ್ರರಿಗೆ ಶರಣಾಗುವಂತೆ ಭದ್ರತಾಪಡೆಗಳು ತಿಳಿಸಿದ್ದವು. ಆದರೆ ಉಗ್ರರು ಏಕಾಏಕಿ ಗುಂಡು ಹಾರಿಸಿದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯನ್ನು ಎನ್​ಕೌಂಟರ್​ ಆಗಿ ಮಾರ್ಪಡಿಸಲಾಯಿತು. ಸೇನಾಪಡೆ ಸ್ಥಳವನ್ನು ಸುತ್ತುವರೆದು ಇದೀಗ ಇಬ್ಬರು ಉಗ್ರರನ್ನು ಹತ್ಯೆ ಮಾಡಿದೆ. ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎನ್​ಕೌಂಟರ್ ಸ್ಥಳದಿಂದ ಭಾರೀ ಪ್ರಮಾಣ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

    ಮಂಗಳವಾರ ಜಮ್ಮು ಕಾಶ್ಮೀರದ ಗಂದೇರ್ ಬಲ್ ಜಿಲ್ಲೆಯಲ್ಲಿ ಬಿಜೆಪಿ ನಾಯಕ ಗುಲಾಮ್ ಖಾದಿರ್ ಮೇಲೆ ಉಗ್ರರು ದಾಳಿ ನಡೆಸಿದ್ದರು. ಆದರೇ ಅಂಗರಕ್ಷಕರ ಸಮಯಪ್ರಜ್ಞೆಯಿಂದ ಸ್ವಲ್ಪದರಲ್ಲೇ ಪಾರಾಗಿದ್ದರು. ಈ ವೇಳೆ ಓರ್ವ ಪೊಲೀಸ್ ಕಾನ್ಸ್ ಟೇಬಲ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.

    ಗಂಡ ಕರೊನಾದಿಂದ ಮೃತಪಟ್ಟದ್ದಕ್ಕೆ ಹೆಂಡ್ತಿ ವಿರುದ್ಧ ದಾಖಲಾಯ್ತು ಎಫ್​ಐಆರ್!

    ದಾಳಿ ವೇಳೆ ಹಲ್ಲೆ ಮಾಡಿದ್ರು ಎಂದ ಅಣ್ಣ: ಸೌಜನ್ಯದಿಂದ ನಡೆದುಕೊಂಡ್ರು ಎಂದು ಥ್ಯಾಂಕ್ಸ್​ ಹೇಳಿದ ತಮ್ಮ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts