ದಿನದಿಂದ ದಿನಕ್ಕೆ ಕಲ್ಲಾಗುತ್ತಿದ್ದಾಳೆ ಈ ಮುದ್ದು ಕಂದಮ್ಮ- ಇವಳದ್ದು ಕಣ್ಣೀರ ಕಥೆ!

stone
Published on

ಬ್ರಿಟನ್‌: ಈ ಚಿತ್ರದಲ್ಲಿರುವ ನಗುಮೊಗದ ಮುದ್ದು ಕಂದನನ್ನು ನೋಡಿದರೆ ಎಂಥವರಿಗೂ ಮುದ್ದಾಡಬೇಕು ಎನಿಸುತ್ತದೆ. ಆದರೆ ಈ ನಗುಮೊಗದ ಹಿಂದೆ ಭಯಾನಕ ಸತ್ಯವೊಂದು ಅಡಗಿದ್ದು, ಅದು ಎಂಥವರ ಎದೆಯನ್ನೂ ಝಲ್ಲೆನಿಸುತ್ತದೆ.

ಈ ಐದು ತಿಂಗಳ ಹೆಣ್ಣುಮಗುವಿನ ಹೆಸರು ಲೆಕ್ಸಿ ರಾಬಿನ್ಸ್​. ಈ ಕಂದನಿಗೆ ಭೀಕರವಾಗಿ ಅಪರೂಪದ ಕಾಯಿಲೆ ಇದ್ದು, ಅದರಿಂದಾಗಿ ದಿನದಿಂದ ದಿನಕ್ಕೆ ಕಲ್ಲಾಗುತ್ತಾ ಹೋಗುತ್ತಿದ್ದಾಳೆ. ಅತ್ಯಂತ ವಿರಳವಾದ ಅನುವಂಶಿಕ ತೊಂದರೆಯಿಂದ ಈಕೆ ಬಳಲುತ್ತಿದ್ದಾಳೆ.

ಇದು ಗುಣಪಡಿಸಲಾಗದ ಸಮಸ್ಯೆಯಾಗಿದ್ದು ಪ್ರತಿ 2 ದಶಲಕ್ಷ ಜನರಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುತ್ತದೆ. ಬ್ರಿಟನ್​​ನಲ್ಲಿ ಅಲೆಕ್ಸ್ ಹಾಗೂ ಡೇವ್​ ದಂಪತಿ ಪುತ್ರಿಯಾಗಿರುವ ಈಕೆ ಜನಿಸಿದ್ದು, ಕಳೆದ ಜನವರಿ 31ರಂದು. ಹುಟ್ಟುವಾಗಲೇ ಈಕೆಯ ಹೆಬ್ಬೆರಳು ಸರಿಯಾಗಿ ಚಲಿಸಲು ಆಗುತ್ತಿರಲಿಲ್ಲ. ಕಾಲಿನ ಹೆಬ್ಬೆರಳು ಕೂಡ ಬೆಳವಣಿಗೆ ಹೊಂದಿರಲಿಲ್ಲ. ನಂತರ ವೈದ್ಯರು ಪರಿಶೀಲಿಸಿದಾಗ ಇವಳಿಗೆ ಅಪರೂಪದ ಫೈಬ್ರಾಡೈಸ್‌ಪ್ಲಾಸಿಯಾ ಓಸಿಫಿಕಾನ್ಸ್ ಪ್ರೋಗ್ರೆಸ್ಸಿವಾ ಎಂಬ ಕಾಯಿಲೆಯಿಂದ ಇರುವುದು ತಿಳಿದಿದೆ.

ಈ ಕಾಯಿಲೆಯಿಂದ ಬಳಲುತ್ತಿದ್ದರೆ ಮೂಳೆಗಳು ಸರಿಯಾಗಿ ಬೆಳವಣಿಗೆ ಹೊಂದುವುದಿಲ್ಲ. ದೇಹದಲ್ಲಿ ಅತ್ಯಕ್ಕಿಂತ ಹೆಚ್ಚು ಮೂಳೆಗಳ ಬೆಳವಣಿಗೆ ಆಗಿ ಸಮಸ್ಯೆಯಾಗುತ್ತದೆ. ಇದರಿಂದ ದೇಹ ದಿನದಿಂದ ದಿನಕ್ಕೆ ಕಲ್ಲಿನಂತೆ ಮರಗಟ್ಟುತ್ತಾ ಹೋಗುತ್ತದೆ. 20 ವರ್ಷ ವಯಸ್ಸಾಗುತ್ತಿದ್ದಂತೆಯೇ ಅವರು ಸಂಪೂರ್ಣ ಹಾಸಿಗೆ ಹಿಡಿಯುತ್ತಾರೆ, ಇವರು ಬದುಕಿದ್ದರೂ 40 ವರ್ಷ ಮಾತ್ರ, ಅದೂ ಹಾಸಿಗೆಯ ಮೇಲೆಯೇ ಕಲ್ಲಿನಂತೆ!

ಇವರ ದೇಹ ಪೂರ್ತಿ ಕಲ್ಲಿನಂತೆ ಮರಗಟ್ಟುವ ಕಾರಣ ಯಾವುದೇ ಲಸಿಕೆ ನೀಡಲೂ ಸಾಧ್ಯವಾಗುವುದಿಲ್ಲ, ಆದ್ದರಿಂದ ಇದು ಗುಣಪಡಿಸಲಾಗದ ಕಾಯಿಲೆ ಎನ್ನುತ್ತಾರೆ ವೈದ್ಯರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net