ಆಮೀರ್‌ ಡಿವೋರ್ಸ್‌ ಬೆನ್ನಲ್ಲೇ ಸದ್ದು ಮಾಡುತ್ತಿದೆ ‘ಲವ್‌ ಜಿಹಾದ್‌’: ಶಾರುಖ್‌, ಸೈಫ್‌ ಹೆಸರೂ ಮುನ್ನೆಲೆಗೆ!

amir khan
Published on

ಮುಂಬೈ: ಕೆಲ ತಿಂಗಳ ಹಿಂದೆ ಭಾರಿ ಸದ್ದು ಮಾಡಿದ್ದ ‘ಲವ್‌ ಜಿಹಾದ್‌’ ಮತ್ತೆ ಮುನ್ನೆಲೆಗೆ ಬಂದಿದೆ. ನಿನ್ನೆ ನಟ ಆಮೀರ್‌ ಖಾನ್‌ ತಮ್ಮ ಪತ್ನಿಗೆ ವಿಚ್ಛೇದನ ಕೊಡುತ್ತಲೇ ಜಾಲತಾಣದ ತುಂಬ ಲವ್‌ ಜಿಹಾದ್‌ದ್ದೇ ಮಾತು.

ಇದಕ್ಕೆ ಕಾರಣ, ಆಮೀರ್‌ ಖಾನ್‌ ಇದಾಗಲೇ ಒಬ್ಬ ಹಿಂದೂ ಪತ್ನಿಗೆ ವಿಚ್ಛೇದನ ನೀಡಿದ್ದು, ಈಗ ನಡೆದಿರುವುದು ಎರಡನೆಯ ವಿಚ್ಛೇದನ, ಇವರು ಕೂಡ ಹಿಂದೂ. ತಮ್ಮ 15 ವರ್ಷಗಳ ಎರಡನೆಯ ದಾಂಪತ್ಯವನ್ನು ಅಂತ್ಯಗೊಳಿಸುತ್ತಿರುವುದಾಗಿ ನಿನ್ನೆ ಆಮೀರ್‌ ಖಾನ್‌ ಮತ್ತು ಕಿರಣ್‌ ರಾವ್‌ ಹೇಳಿಕೊಂಡಿದ್ದರು. ಪ್ರತ್ಯೇಕವಾಗಿದ್ದರೂ ಸ್ನೇಹಿತರಾಗಿ ಉಳಿದ ಜೀವನವನ್ನು ಹಂಚಿಕೊಳ್ಳುತ್ತೇವೆ ಎಂದೂ ಹೇಳಿಕೆ ನೀಡಿದ್ದಾರೆ.

ದಾಂಪತ್ಯಕ್ಕೆ ಕೊನೆಹಾಡಲು ಕಾರಣ ಏನೇ ಇರಲಿ, ಆದರೆ ಈ ವಿಚ್ಛೇದನವು ಇದೀಗ ಲವ್‌ ಜಿಹಾದ್‌ ರೂಪ ಪಡೆದುಕೊಂಡಿದೆ. ಹಿಂದೆ ಅಸಹಿಷ್ಣುತೆಯ ಮಾತನ್ನಾಡಿದ್ದ ಆಮೀರ್‌ ಖಾನ್‌ ಈಗ ಈ ರೀತಿ ಘೋಷಣೆ ಮಾಡಿರುವುದೂ ಆಕ್ರೋಶಕ್ಕೆ ಕಾರಣವಾಗಿದೆ.

ಕಿರಣ್ ರಾವ್​ ಅವರಿಗಿಂತ ಮೊದಲು ಆಮೀರ್​ ರೀನಾ ದತ್ತ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ ಐರಾ ಹಾಗೂ ಜುನೇದ್​ ಮಕ್ಕಳಿದ್ದಾರೆ. ಹಿಂದೂ ಪತ್ನಿಯಿಂದ ಎರಡು ಮಕ್ಕಳನ್ನು ಹುಟ್ಟಿಸಿ ಅವರನ್ನು ಖಾನ್‌ ಮಾಡಿರುವ ಆಮೀರ್‌ 2002ರಲ್ಲಿ ಆಮೀರ್​ ಹಾಗೂ ರೀನಾ ಅವರ ವಿಚ್ಛೇದನಕೊಟ್ಟು ಇನ್ನೊಂದು ಹಿಂದೂ ಯುವತಿಯನ್ನು ಮದುವೆಯಾಗಿರುವುದು ಲವ್‌ ಜಿಹಾದ್‌ನ ಇನ್ನೊಂದು ರೂಪ ಎನ್ನುವುದು ಕಮೆಂಟಿಗರ ಅನಿಸಿಕೆ.

ಅಂದಹಾಗೆ ರಾಜಮನೆತನಕ್ಕೆ ಸೇರಿದ ಕಿರಣ್​ ರಾವ್ ಅವರನ್ನು ಮದುವೆಯಾದ ಆಮೀರ್​ ದಂಪತಿಗೆ ಓರ್ವ ಪುತ್ರನಿದ್ದಾನೆ. ಆಮೀರ್‌ ಜತೆಗೇನೇ ಹಿಂದೂ ಯುವತಿಯನ್ನು ಮದುವೆಯಾಗಿರುವ ಬಾಲಿವುಡ್‌ ನಟರಾಗಿರುವ ಶಾರುಖ್‌ ಖಾನ್‌ (ಪತ್ನಿ ಗೌರಿ ಖಾನ್‌) ಹಾಗೂ ಮೊದಲ ಪತ್ನಿಗೆ ವಿಚ್ಛೇದನ ನೀಡಿ ನಟಿ ಕರೀನಾ ಕಪೂರ್‌ ಅವರನ್ನು ಮದುವೆಯಾಗಿರುವ  ಸೈಫ್‌ ಅಲಿ ಖಾನ್‌ ಅವರ ಹೆಸರೂ ಇದೀಗ ಥಳಕು ಹಾಕಿಕೊಂಡಿದ್ದು, ಇವರನ್ನು ಕೂಡ ಲವ್‌ ಜಿಹಾದ್‌ ವರ್ಗಕ್ಕೆ ಸೇರಿಸಲಾಗುತ್ತಿದೆ! ಒಂದು ವೇಳೆ ಇವರು ನಿಜವಾಗಿಯೂ ಪ್ರೀತಿ ಮಾಡುತ್ತಿದ್ದುದೇ ಹೌದಾದರೆ ಈ ನಟರು ಹಿಂದೂ ಧರ್ಮಕ್ಕೆ ಮತಾಂತರ ಆಗಲು ಹೇಳಿ ನೋಡುವ ಎಂದು ಹಲವರು ಚಾಲೆಂಜ್‌ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net