ವರ್ಲ್ಡ್‌ ಕಪ್‌ ಆಟಕ್ಕೂ ಮುನ್ನ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳಿ ಎಂದಿದ್ದೆ: ಸ್ಫೋಟಕ ರಹಸ್ಯ ಬಿಚ್ಚಿಟ್ಟ ತರಬೇತುದಾರ

cricket
Published on

ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ಮಾಜಿ ಮಾನಸಿಕ ಸ್ಥಿತಿ ನಿಯಂತ್ರಣ ತರಬೇತುದಾರ ಪ್ಯಾಡಿ ಅಪ್ಟನ್ ಇದೀಗ ಸ್ಫೋಟಕ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಕ್ರಿಕೆಟ್‌ ಆಟಗಾರರ ಮಾನಸಿಕ ಸ್ಥಿತಿಯ ಕುರಿತಂತೆ ತರಬೇತು ನೀಡುತ್ತಿದ್ದ ಪ್ಯಾಡಿ ಅವರ ಈ ಹೇಳಿಕೆ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಅವರು ಹೇಳಿದ್ದೇನು ಎಂದರೆ 2011ರಲ್ಲಿ ವರ್ಡ್‌ ಕಪ್‌ ಆಡುವ ವೇಳೆ ಕ್ರೀಡಾಂಗಣಕ್ಕೆ ಇಳಿಯುವ ಮುನ್ನ ಸೆಕ್ಸ್‌ನಲ್ಲಿ ತೊಡಗಿಸಿಕೊಳ್ಳಲು ನಾನು ಭಾರತೀಯ ಆಟಗಾರರಿಗೆ ಸಲಹೆ ನೀಡಿದ್ದೆ. ಮಾನಸಿಕ ಸ್ಥಿತಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ಸಲುವಾಗಿ ನಾನು ಈ ಸಲಹೆ ನೀಡಿದ್ದೆ. ಆದರೆ ನನ್ನ ಮೇಲೆ ಅನೇಕ ಮಂದಿ ಕೋಪ ಮಾಡಿಕೊಂಡಿದ್ದರು ಎಂದು ಹೇಳಿದ್ದಾರೆ.

ಇವೆಲ್ಲವನ್ನೂ ಅವರು ತಮ್ಮ ಆತ್ಮಚರಿತ್ರೆ ʼದಿ ಬೇರ್ ಫೂಟ್ ಕೋಚ್ʼನಲ್ಲಿ ಬರೆದಿದ್ದಾರೆ. 2008 ರಿಂದ 2011ರವರೆಗೆ ಭಾರತ ತಂಡದೊಂದಿಗೆ ಕೆಲಸ ಮಾಡಿದ್ದರು ಪ್ಯಾಡಿ. ಈ ಸೆಕ್ಸ್‌ ವಿಷಯದ ಕುರಿತಂತೆ ಅವರು ಹೇಳಿದ್ದೇನೆಂದರೆ 'ನನ್ನ ಈ ಸಲಹೆಯು ಭಾರತ ತಂಡದ ಅಂದಿನ ಮುಖ್ಯ ತರಬೇತುದಾರ ಗ್ಯಾರಿ ಕರ್ಸ್ಟನ್ ಅವರನ್ನ ಕೆರಳಿಸಿತ್ತು. ನನ್ನ ಮೇಲೆ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡರು. ನಂತರ ನಾನು ಇದಕ್ಕಾಗಿ ಕ್ಷಮೆಯಾಚಿಸಿದೆ' ಎಂದಿದ್ದಾರೆ. ಆದರೆ ಅದೇ ವರ್ಷ ಅಂದರೆ 2011ರಲ್ಲಿ ಗ್ಯಾರಿ ಕರ್ಸ್ಟನ್ ನೇತೃತ್ವದಲ್ಲಿ ಭಾರತ 2011ರ ವಿಶ್ವಕಪ್ ಗೆದ್ದಿತ್ತು.

ಆಮೇಲೆ ನನಗೆ ಅನ್ನಿಸಿದ್ದು ಇಷ್ಟೇ, ನಾನು ಆ ರೀತಿ ಹೇಳಬಾರದಿತ್ತು. ತಪ್ಪು ಹೇಳಿದ್ದೇನೆ ಎನ್ನಿಸಿತು. ಅದಕ್ಕಾಗಿ ಕ್ಷಮೆ ಕೋರಿದೆ ಎಂದರು. ಇವರು ತಮ್ಮ ಪುಸ್ತಕದಲ್ಲಿ ರಾಹುಲ್ ದ್ರಾವಿಡ್ ಅವರಿಂದ ಗೌತಮ್ ಗಂಭೀರ್‌ವರೆಗೆ ಎಲ್ಲಾ ಆಟಗಾರರನ್ನು ಉಲ್ಲೇಖಿಸಿದ್ದಾರೆ.

ಸದ್ಯ ಪ್ಯಾಡಿ ಅವರು, ಐಪಿಎಲ್ ತಂಡ ರಾಜಸ್ಥಾನ್ ರಾಯಲ್ಸ್ʼನ ಮುಖ್ಯ ತರಬೇತುದಾರರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net