More

    ಬೆಳಗಾವಿ ಬೀದಿ ಕಾಮಣ್ಣನಿಗೆ ಮಹಿಳೆಯಿಂದ ಗೂಸಾ: ಚಪ್ಪಲಿ ಏಟು ತಿಂದವ ಏನ್‌ ಮಾಡಿದ ನೋಡಿ…

    ಬೆಳಗಾವಿ: ತಮ್ಮನ್ನು ಚುಡಾಯಿಸಿ ಹಿಂಬಾಲಿಸುತ್ತಿದ್ದ ಕಾಮುಕನಿಗೆ ನಡು ರಸ್ತೆಯಲ್ಲೇ ಮಹಿಳೆಯೊಬ್ಬರು ಚಪ್ಪಲಿ ಏಟು ತಿಂದಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

    ಬೆಳಗಾವಿಯ ಎಸ್ಪಿ ಕಚೇರಿ ಬಳಿ ಈ ಘಟನೆ ನಡೆದಿದೆ. ಗೋಪಾಲ್ ಗುರನ್ನವರಗೆ ಎಂಬಾತನಿಗೆ ಮಹಿಳೆ ಚಪ್ಪಲಿಯಿಂದ ಗೂಸಾ ಕೊಟ್ಟಿದ್ದಾರೆ. ಮಹಿಳೆ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸ ಮುಗಿಸಿ ಮನೆಗೆ ವಾಪಸ್ ಮರಳುವ ವೇಳೆಯಲ್ಲಿ ಕೆಲ ತಿಂಗಳಿಂದ ಗೋಪಾಲ್‌ ಹಿಂಬಾಲಿಸುತ್ತಾ ಚುಡಾಯಿಸುತ್ತಿದ್ದ, ಜತೆಗೆ ಸಿಳ್ಳೆ ಹೊಡೆಯುತ್ತಾ ತೊಂದರೆ ಕೊಡುತ್ತಿದ್ದ.

    ಮಹಿಳೆ ಈ ಹಿಂದೆ ಹಲವು ಸಾರಿ ಎಚ್ಚರಿಕೆ ನೀಡಿದ್ದರೂ ಆತ ಸುಮ್ಮನಾಗಿರಲಿಲ್ಲ. ದ್ರೂ ಸಹ ಸುಮ್ಮನಾಗಿರಲಿಲ್ಲ. ಮಾತ್ರವಲ್ಲದೇ ಹಿಂಬಾಲಿಸುವುದು ನಿಲ್ಲಿಸಿಲ್ಲ. ಆದ್ದರಿಂದ ಏಟೇ ಈತನಿಗೆ ಸರಿಯಾದ ಶಿಕ್ಷೆ ಎಂದುಕೊಂಡ ಮಹಿಳೆ ಪತಿಯ ಜತೆಗೂಡಿ ನಡುರಸ್ತೆಯಲ್ಲೇ ಚಪ್ಪಲಿ ಏಟು ಕೊಟ್ಟಿದ್ದಾರೆ. ಕೂಡಲೇ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.

    ಇದರ ವಿಡಿಯೋ ಇಲ್ಲಿದೆ ನೋಡಿ…

    ‘ನಿಮ್ಮ ಮರಣ ಪ್ರಮಾಣ ಪತ್ರ ಬಂದಿದೆ, ಕಲೆಕ್ಟ್‌ ಮಾಡಿ’ ಎಂದು ಶಿಕ್ಷಕನಿಗೆ ಕಾರ್ಪೋರೇಷನ್‌ ಸಿಬ್ಬಂದಿ ಕರೆ!

    ಆಮೀರ್‌ ಡಿವೋರ್ಸ್‌ ಬೆನ್ನಲ್ಲೇ ಸದ್ದು ಮಾಡುತ್ತಿದೆ ‘ಲವ್‌ ಜಿಹಾದ್‌’: ಶಾರುಖ್‌, ಸೈಫ್‌ ಹೆಸರೂ ಮುನ್ನೆಲೆಗೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts