

ಹೈದರಾಬಾದ್: ಹೊಸದಾಗಿ ಮದುವೆಯಾಗಿ ಹೋಗುವ ಮಕ್ಕಳಿಗೆ ಪಾಲಕರು ತಮ್ಮ ಶಕ್ತ್ಯಾನುಸಾರ ಒಂದಿಷ್ಟು ಹಣ, ಒಡವೆಗಳನ್ನು ನೀಡುವುದು ಮಾಮೂಲಿ. ಆದರೆ ಇಲ್ಲೊಬ್ಬ ಅಪ್ಪ, ತಮ್ಮ ಮಗಳಿಗೆ ನೀಡಿರುವ ಉಡುಗೊರೆ ಕೇಳಿದರೆ ಹುಬ್ಬೇರಿಸುವುದು ಗ್ಯಾರೆಂಟಿ!
ಹೀಗೆ ವಿಭಿನ್ನ ಉಡುಗೊರೆ ನೀಡಿದ ಕಾರಣಕ್ಕಾಗಿಯೇ ಈ ಅಪ್ಪ ಭಾರಿ ಫೇಮಸ್ ಆಗಿದ್ದಾರೆ. ಜಾಲತಾಣದ ತುಂಬ ಸುದ್ದಿ ಮಾಡುತ್ತಿರುವ ಅಪ್ಪನ ಹೆಸರು ಆಂಧ್ರಪ್ರದೇಶದ ಬಟುಲಾ ಬಲರಾಮ ಕೃಷ್ಣ. ರಾಜಮಂಡ್ರಿಯ ಉದ್ಯಮಿಯಾಗಿರುವ ಇವರು, ಮಗಳಿಗೆ ಕೊಟ್ಟಿರೋ ಗಿಫ್ಟ್ಗಳು ಏನು ಗೊತ್ತಾ?