ಎರಡು ದಿನಗಳ ಮಟ್ಟಿಗೆ ಅತ್ತೆಗೆ ಬಾಯ್​ಫ್ರೆಂಡ್​ ಬೇಕು: 75 ಸಾವಿರ ರೂ. ಸಂಬಳ!

advertise
ಸಾಂದರ್ಭಿಕ ಚಿತ್ರ
Published on

ನ್ಯೂಯಾರ್ಕ್​: ವಧು- ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬಳು ಬಾಯ್​ಫ್ರೆಂಡ್​ ಬೇಕಾಗಿದ್ದಾನೆ ಎಂದು ಜಾಹೀರಾತು ನೀಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಾಳೆ. ಅಷ್ಟಕ್ಕೂ ಬಾಯ್​ಫ್ರೆಂಡ್​ ಕೇಳಿರುವುದು ತನ್ನ ಅತ್ತೆಗೆ!

ನ್ಯೂಯಾರ್ಕ್​ನ ಹುಡ್ಸನ್​ ನಿವಾಸಿಯಾದ ಮಹಿಳೆಯು ತನ್ನ 51 ವರ್ಷ ಪ್ರಾಯದ ಅತ್ತೆಗೆ ಬಾಯ್​ಫ್ರೆಂಡ್​ ಬೇಕು. ಮಾವ ಇಲ್ಲದೇ ಇರುವ ಕಾರಣ ಬಾಯ್​ಫ್ರೆಂಡ್​ ಬೇಕಾಗಿದ್ದಾನೆ 40- 60 ವರ್ಷ ಪ್ರಾಯದವನ ಹುಡುಕಾಟದಲ್ಲಿದ್ದೇವೆ. ಗುತ್ತಿಗೆ ಆಧಾರದ ಮೇಲೆ ಬಾಯ್​ಫ್ರೆಂಡ್​ ಬೇಕು. ಆಯ್ಕೆಯಾದ ವ್ಯಕ್ತಿಗೆ ಒಂದು ಸಾವಿರ ಡಾಲರ್​ (ಸುಮಾರು 75 ಸಾವಿರ ರೂಪಾಯಿ) ನೀಡಲಾಗುವುದು ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ. ಅಷ್ಟಕ್ಕೂ ಈ ಬಾಯ್​ಫ್ರೆಂಡ್ ಬೇಕಾಗಿರುವುದು ಮದುವೆಗೆ ಹೋಗಲು, ಕೇವಲ ಎರಡು ದಿನ ಮಾತ್ರ ಎಂದು ಬರೆಯಲಾಗಿದೆ.

ಬಾಯ್​ಫ್ರೆಂಡ್​ ಆಗಬಯಸುವ ವ್ಯಕ್ತಿಗೆ ನೃತ್ಯ ಮಾಡಲು ತಿಳಿದಿರಬೇಕು ಹಾಗೂ ಆತ ಉತ್ತಮ ಸಂಭಾಷಣೆ ನಡೆಸುವವನಾಗಿರಬೇಕು ಎಂದೂ ಹೇಳಲಾಗಿದೆ. ಅನೇಕರು ಇದು ಸೋಶಿಯಲ್​ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಡಿದ ತಂತ್ರ ಎಂದು ಕಮೆಂಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net