ರಾಜ್​ ಕುಂದ್ರಾ ತಯಾರಿಸಿದ್ದು ಬ್ಲೂ ಫಿಲ್ಮ್​ ಅಲ್ಲಪ್ಪಾ... ಇದು ಮಾಮೂಲು ಎಂದ ಮಾಡೆಲ್​ ಗೆಹನಾ!

gehana1
Published on

ಮುಂಬೈ: ‌ ನೀಲಿ ಸಿನಿಮಾಗಳನ್ನು ಮಾಡಿರುವ ಆರೋಪದ ಮೇಲೆ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅವರನ್ನು ನಿನ್ನೆ ಬಂಧಿಸಲಾಗಿದೆ. ಅಶ್ಲೀಲ ಚಿತ್ರಗಳನ್ನು ಮಾಡಿ ಬೇರೆ ಬೇರೆ ಆ್ಯಪ್​ಗಳಲ್ಲಿ ಅವುಗಳನ್ನು ಅಪ್​ಲೊಡ್​ ಮಾಡುತ್ತಿದ್ದ ಆರೋಪ ಇವರ ಮೇಲಿದೆ.

ಇದಕ್ಕೆ ಸಂಬಂಧಿಸಿದಂತೆ ಇಂದು ಕೋರ್ಟ್​ ಮುಂದೆ ಇವರನ್ನು ಹಾಜರುಪಡಿಸಲಾಗಿದೆ. ಜುಲೈ 23ರವರೆಗೆ ನ್ಯಾಯಾಂಗ ಬಂಧನಕ್ಕೆ ಇವರನ್ನು ಒಪ್ಪಿಸಲಾಗಿದೆ.

ಇದರ ನಡುವೆಯೇ ರಾಜ್ ಕುಂದ್ರಾ ಪರ ಪ್ರಸಿದ್ಧ ಮಾಡೆಲ್ ಗೆಹನಾ ಮಾತನಾಡಿದ್ದಾರೆ. ಟ್ವಿಟರ್​ನಲ್ಲಿ ವಿಡಿಯೋ ಮೂಲಕ ಮಾತನಾಡಿರುವ ಅವರು, ರಾಜ್ ಕುಂದ್ರಾ ಪೋರ್ನ್ ವಿಡಿಯೋಗಳನ್ನು ತಯಾರು ಮಾಡುತ್ತಿರಲಿಲ್ಲ. ಇದು ಎರೊಟಿಕಾ. ಪೋರ್ನ್ ವಿಡಿಯೋಗಳ ಜತೆ ಎರೊಟಿಕಾ ವಿಡಿಯೋಗಳನ್ನು ಸೇರಿಸಬೇಡಿ. ಆ ವಿಡಿಯೋಗಳೇ ಬೇರೆ, ಈ ರೀತಿಯ ವಿಡಿಯೋಗಳೇ ಬೇರೆ. ಇದನ್ನು ಪೊಲೀಸರು ತಪ್ಪು ಅರ್ಥ ಮಾಡಿಕೊಂಡಿದ್ದಾರೆ ಎಂದು ಗೆಹನಾ ಸಮಜಾಯಿಷಿ ಕೊಟ್ಟಿದ್ದಾರೆ.

ಎರೋಟಿಕಾ ರೀತಿಯ ವಿಡಿಯೋಗಳನ್ನು ಬಾಲಿವುಡ್ ಸಿನಿಮಾಗಳಲ್ಲಿ ಬಳಸಲಾಗುತ್ತದೆ. ಏಕ್ತಾ ಕಪೂರ್ ಅವರ ಗಾಂಧಿ ಬಾತ್ ಚಿತ್ರದಲ್ಲಿ ಈ ರೀತಿಯ ವಿಡಿಯೋಗಳನ್ನು ಬಳಕೆ ಮಾಡಲಾಗಿದೆ. ಆದ್ದರಿಂದ ಇವೆರಡೂ ವಿಡಿಯೋಗಳನ್ನು ಹೋಲಿಕೆ ಮಾಡುವುದು ಸರಿಯಲ್ಲ ಎಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net