ಮುಸ್ಲಿಂ ಯುವಕನಿಂದ ಮೊದಲ ಕ್ರಿಸ್​ಮಸ್​ ವೈರಲ್​- ಟ್ವಿಟರ್​ನಲ್ಲಿ ಶ್ಲಾಘನೆಗಳ ಮಹಾಪೂರ

chrismass
Published on

ಹಿಂದೂ- ಮುಸ್ಲಿಮರು ಸೇರಿ ಅನೇಕ ಹಬ್ಬಗಳನ್ನು ಒಟ್ಟಿಗೇ ಮಾಡುವ ಸಂಪ್ರದಾಯ ಹಲವು ಊರುಗಳಲ್ಲಿ ಕಾಣಸಿಗುತ್ತದೆ. ಹಿಂದೂಗಳು ಮುಸ್ಲಿಮರ ಹಬ್ಬವನ್ನು, ಮುಸ್ಲಿಮರು ಹಿಂದೂಗಳ ಹಬ್ಬವನ್ನು ಜತೆಜತೆಯಲ್ಲಿಯೇ ಸೇರಿ ಆಚರಿಸಿ ಭಾತೃತ್ವ ಮೆರೆಯುವುದು ತಲೆತಲಾಂತರಗಳಿಂದಲೂ ನಡೆದುಬಂದಿದೆ.

ಆದರೆ ಇಲ್ಲೊಂದು ಅಪರೂಪದ ಪ್ರಕರಣದಲ್ಲಿ, ಮುಸ್ಲಿಂ ವ್ಯಕ್ತಿಯೊಬ್ಬರು ಕ್ರಿಸ್​ಮಸ್​ ಸಂಭ್ರವವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದು, ಇದು ತಮ್ಮ ಜೀವನದ ಮೊದಲ ಕ್ರಿಸ್​ಮಸ್​ ಎಂದು ಬರೆದುಕೊಂಡಿದ್ದಾರೆ. ಇದು ಸಾಮಾಜಿಕ ಜಾಲತಾನದಲ್ಲಿ ಸಕತ್​ ವೈರಲ್​ ಆಗಿದ್ದು, ಶ್ಲಾಘನೆಗಳ ಮಹಾಪೂರವೇ ಹರಿದುಬರುತ್ತಿದೆ.

ಕೆನಡಾದಲ್ಲಿರುವ ಮೊಹಮ್ಮದ್ ಹುಸೇನ್ ಡಿಸೆಂಬರ್‌ 20ರಂದು ಈ ಟ್ವೀಟ್ ಮಾಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ನನ್ನ ತವರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಕ್ರಿಸ್‌ಮಸ್‌ ಬಗ್ಗೆ ತನ್ನೆಲ್ಲಾ ಚಿಂತನೆಗಳನ್ನು ಈ ಮೂಲಕ ಹಂಚಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಜತೆಗೆ ಕ್ರಿಸ್​ಮಸ್​ ಟ್ರೀ ಯನ್ನು ಅವರು ಟ್ವಿಟರ್​ನಲ್ಲಿ ಶೇರ್​ ಮಾಡಿದ್ದಾರೆ.

ನನ್ನದು ಮುಸ್ಲಿಂ ಕುಟುಂಬ. ಇದುವರೆಗೆ ಒಮ್ಮೆಯೂ ಕ್ರಿಸ್‌ಮಸ್ ಆಚರಿಸಿಲ್ಲ. ಈ ವರ್ಷ ಕೋವಿಡ್​ನಿಂದಾಗಿ ಇಲ್ಲೇ ಇರಬೇಕಾಗಿ ಬಂದಿದೆ. ಆದ್ದರಿಂದ ನನ್ನ ಸ್ನೇಹಿತರಿಂದ ಕ್ರಿಸ್‌ಮಸ್ ಆಚರಿಸುವುದು ಹೇಗೆ ಎಂದು ಕಲಿಯುತ್ತಿದ್ದೇನೆ ಎಂದು ಮೊಹಮ್ಮದ್ ಹೇಳಿಕೊಂಡಿದ್ದಾರೆ.

ನವೆಂಬರ್‌ ಮಧ್ಯದಿಂದ ಆರಂಭಗೊಂಡು ಜನವರಿ ಆರಂಭದವರೆಗೂ ಸಾಗುವ ಕ್ರಿಸ್‌ಮಸ್ ವೈಭವದ ವಿವಿಧ ಮಜಲುಗಳ ಬಗ್ಗೆ ಮೊಹಮ್ಮದ್ ಟ್ವೀಟ್‌ನಲ್ಲಿ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net