More

    ಭಾರತದ ವಿಮಾನವನ್ನೇ ಹೈಜಾಕ್​ ಮಾಡಿಸಿದ್ದ ಮೋಸ್ಟ್​ ವಾಂಟೆಡ್​ ಉಗ್ರನನ್ನು ಬಿಡುಗಡೆ ಮಾಡಿದ ಪಾಕ್​

    ಕರಾಚಿ: ಕೊಲೆ, ಅತ್ಯಾಚಾರ, ಭಯೋತ್ಪಾದನಾ ಚಟುವಟಿಕೆ ಸೇರಿದಂತೆ ಗಂಭೀರ ಪ್ರಮಾಣದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಾಕಿಸ್ತಾನದ ಜೈಲಿನಲ್ಲಿ ಬಂಧಿಯಾಗಿದ್ದ ಉಗ್ರ ಓಮರ್​ ಸಯೀದ್​ ಶೇಖ್​ನನ್ನು ಕೂಡಲೇ ಬಿಡುಗಡೆ ಮಾಡುವಂತೆ ಪಾಕಿಸ್ತಾನದ ಕೋರ್ಟ್​ ಆದೇಶಿಸಿದೆ.

    ಈತ ಭಾರತದ ಮೋಸ್ಟ್​ ವಾಂಟೆಡ್​ ಉಗ್ರ ಕೂಡ. ಅದ್ಹೇಗೆ ಎಂದರೆ ಉಗ್ರ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ಈತನ ವಿರುದ್ಧದ ಅಪರಾಧ ಸಾಬೀತಾಗಿದ್ದ ಹಿನ್ನೆಲೆಯಲ್ಲಿ 1999ರ ವೇಳೆಯಲ್ಲಿ ಭಾರತದ ಜೈಲಿನಲ್ಲಿ ಬಂಧಿಸಿ ಇಡಲಾಗಿತ್ತು.

    ಈತನ ಬಿಡುಗಡೆಗೆ ಪಾಕಿಸ್ತಾನದ ಉಗ್ರರಿಂದ ಭಾರಿ ಒತ್ತಡ ಬಂದಿತ್ತು. ಆದರೆ ಭಾರತ ಸರ್ಕಾರ ಜಗ್ಗಿರಲಿಲ್ಲ. ಜೈಲಿನಲ್ಲಿ ಇದ್ದುಕೊಂಡೇ ತನ್ನ ಪ್ರಭಾವ ಬಳಸಿಕೊಂಡಿದ್ದ ಈತ, ಭಾರತೀಯರನ್ನು ಹೊತ್ತಿದ್ದ ವಿಮಾನವನ್ನೇ ಹೈಜಾಕ್​ ಮಾಡಿಸಿದ್ದ. ವಿಮಾನದಲ್ಲಿ ಇದ್ದವರನ್ನು ಸುರಕ್ಷಿತವಾಗಿ ಬಿಡಬೇಕು ಎಂದರೆ, ಈತನ ಬಿಡುಗಡೆ ಮಾಡಬೇಕು ಎಂದು ಅಂದಿನ ಸರ್ಕಾರಕ್ಕೆ ಪಾಕಿಸ್ತಾನ ಹೇಳಿತ್ತು.

    ಅನ್ಯದಾರಿ ಕಾಣದೇ ಈ ಉಗ್ರನನ್ನು ಬಿಡುಗಡೆ ಮಾಡಲಾಗಿತ್ತು. ಆ ನಂತರವೂ ಹಲವಾರು ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ನೆಮ್ಮದಿಯಿಂದ ಇದ್ದ. ಆದರೆ 2002ರಲ್ಲಿ ಪತ್ರಕರ್ತ ಡೇನಿಯಲ್ ಪರ್ಲ್ ಶೂನ್ಯ ಅವರ ಹತ್ಯೆಯಾದ ಬಳಿಕ ಈತನ ಬಂಧನ ಮಾಡುವುದು ಪಾಕಿಸ್ತಾನದ ಪೊಲೀಸರಿಗೆ ಅನಿವಾರ್ಯವಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಅಂದರೆ 18 ವರ್ಷ ಜೈಲಿನಲ್ಲಿಯೇ ಇದ್ದ.

    ಈ ಪ್ರಕರಣದ ವಿಚಾರಣೆ ನಡೆಯುತ್ತಲೇ ಇತ್ತು. ಆದರೆ ಇಂದು ಪಾಕಿಸ್ತಾನದ ಕೋರ್ಟ್​, ಅನ್ಯಾಯವಾಗಿ ಒಬ್ಬ ನಿರಪರಾಧಿಯನ್ನು 18 ವರ್ಷ ಜೈಲಿನಲ್ಲಿ ಇರುವಂತೆ ಮಾಡಿರುವುದು ಉಚಿತವಲ್ಲ. ಕೂಡಲೇ ಈತನನ್ನು ಬಿಡುಗಡೆ ಮಾಡಿ ಎಂದು ಆದೇಶಿಸಿದೆ.

    ಈತನ ಜತೆಗೆ ಇನ್ನೂ ಕೆಲವರನ್ನು ಬಂಧಿಸಿ ಜೈಲಿಗೆ ಹಾಕಿರುವುದು ಅಕ್ರಮ. ಈ ರೀತಿ ನಿರಪರಾಧಿಗಳನ್ನು ಇಟ್ಟುಕೊಂಡಿರುವುದು ಸರಿಯಲ್ಲ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಸಿಂಧ್​ ಹೈಕೋರ್ಟ್​ ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿದೆ.

    ಈತನಿಗೆ ಕೆಳಹಂತದ ಕೋರ್ಟ್​ ಗಲ್ಲುಶಿಕ್ಷೆ ವಿಧಿಸಿತ್ತು. ಅದನ್ನು ಆತ ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ. 18 ವರ್ಷಗಳಿಂದ ವಿಚಾರಣೆ ನಡೆಯುತ್ತಲಿತ್ತು. ಇದೀಗ ಆತ ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸುತ್ತಿರುವುದಾಗಿ ಕೋರ್ಟ್​ ಹೇಳಿದೆ.

    ಲಸಿಕೆಯಲ್ಲಿ ಹಂದಿಮಾಂಸ: ಅಲ್ಲಿಯವರು ಓಕೆ ಎಂದರು, ಇಲ್ಲಿಯವರು ಇದು ‘ಹರಾಂ’ ಎಂದರು

    ಸೌದಿಯಿಂದ ಬಂದ ಭಾವಿಪತಿಗಾಗಿ ಮದುಮಗಳು ರೆಡಿಯಾಗಿ ಕುಳಿತರೆ ವರ ಹೀಗೆ ಮಾಡೋದಾ?

    ಕೆಲಸ ಸಿಗುತ್ತಿದ್ದಂತೆಯೇ ಇನ್ನೊಬ್ಬನ ಪ್ರೀತಿಸಿದಳು: ಬೆಂಕಿ ಹಚ್ಚಿ ಸಾಯಿಸಿದ ಮಾಜಿ ಪ್ರೇಮಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts