ಮದ್ವೆಯಾಗೋದಾಗಿ ಹೇಳಿ ರೇಪ್​: ದುಬಾರಿ ಗಿಫ್ಟ್​ ಪಡೆದು ಸ್ಯಾಂಡಲ್​ವುಡ್​ ನಟಿಯ ಅಣ್ಣ ಎಸ್ಕೇಪ್​?

chandrakeerthi
Published on

ಬೆಂಗಳೂರು: ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್​ವುಡ್ ನಟಿಯ ಅಣ್ಣನ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

ಪ್ರಸಿದ್ಧ ನಟಿಯ ಅಣ್ಣ ಕೀರ್ತಿಚಂದ್ರ ಎಂಬಾತನ‌ ವಿರುದ್ಧ ಯುವತಿ ದೂರು ನೀಡಿದ್ದು, ಆತನ ವಿರುದ್ಧ ಬೆಂಗಳೂರಿನ ಬಸವನಗುಡಿ‌ ಮಹಿಳಾ‌ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ.

ಶಾದಿ ಡಾಟ್​ ಕಾಮ್​ ಮೂಲಕ 2021 ರ ಮೇ ನಲ್ಲಿ ಕೀರ್ತಿಚಂದ್ರನಿಗೆ ಯುವತಿ ಪರಿಚಯವಾಗಿತ್ತು. ನಂತರ ಪರಸ್ಪರ ಮೊಬೈಲ್​ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಮದುವೆಯಾಗುವುದಾಗಿ ಯುವತಿಗೆ ಆತ ನಂಬಿಸಿದ್ದ.

ಇದಾದ ಬಳಿಕ ಕೀರ್ತಿಚಂದ್ರನ ಹುಟ್ಟುಹಬ್ಬಕ್ಕೆ ಯುವತಿ ಐ ಫೋನ್ ಗಿಫ್ಟ್ ನೀಡಿದ್ದಳು. ನಂತರ ಲ್ಯಾಪ್​ಟಾಪ್​ ಹಾಗೂ ಆ್ಯಪಲ್ ವಾಚ್ ಕೂಡ ನೀಡಿದ್ದಳು. ನಂತರ ಖಾಸಗಿ ಹೋಟೆಲ್ ಒಂದಕ್ಕೆ ಕರೆಸಿಕೊಂಡಿದ್ದ ಕೀತ್ರಿಚಂದ್ರ ಅಲ್ಲಿ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾಗಿ ಯುವತಿ ಆರೋಪಿಸಿದ್ದಾಳೆ.

ಇಷ್ಟಾದ ಬಳಿದ ಸಂಪರ್ಕಕ್ಕೆ ಸಿಗದೆ ಆತ ತಲೆಮರೆಸಿಕೊಂಡಿರುವುದಾಗಿ ದೂರಿರುವ ಯುವತಿ, ಅತ್ಯಾಚಾರದ ಕೇಸ್​ ದಾಖಲಿಸಿದ್ದಾಳೆ. ತನಿಖೆ ಮುಂದುವರೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net