ಮದುವೆಗೆ ಒಪ್ಪಲಿಲ್ಲ ಎಂದು ಪ್ರಿಯಕರನ ಜತೆಗೂಡಿ ಅಪ್ಪ-ಅಮ್ಮನನ್ನೇ ಕೊಲೆ ಮಾಡಿದ ಬಾಲಕಿ!

murder pic
Published on

ಬಿಜನೂರ (ಉತ್ತರಪ್ರದೇಶ): ಮದುವೆಗೆ ಒಪ್ಪಲಿಲ್ಲ ಎಂದು ಅಪ್ಪ-ಅಮ್ಮನನ್ನೇ ಬಾಲಕಿಯೊಬ್ಬಳು ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಬಿಜನೋರ್​ನಲ್ಲಿ ನಡೆದಿದೆ.

17 ವರ್ಷದ ಬಾಲಕಿ ತನ್ನ 20 ವರ್ಷದ ಪ್ರಿಯಕರನ ಜತೆಗೂಡಿ ತಂದೆ ತಾಯಿಯನ್ನೇ ಕೊಲೆ ಮಾಡಿದ್ದಾಳೆ. ಬಾಲಕಿ ಮತ್ತು ಯುವಕ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಇವರು ಮದುವೆ ಆಗಬೇಕೆಂಬ ಇಚ್ಛೆಗೆ ಬಾಲಕಿಯ ಪೋಷಕರು ಒಪ್ಪಿರಲಿಲ್ಲ. ಆದ್ದರಿಂದ ಈ ಕೊಲೆ ನಡೆದಿದೆ.

ಇದೇ ತಿಂಗಳ 6ರಂದು ಬಾಲಕಿ ತಂದೆಯ ಮೃತದೇಹ ಮನೆಯಲ್ಲೇ ಪತ್ತೆಯಾಗಿತ್ತು. ಆದರೆ ಕೊಲೆಯಾದುದ್ದಕ್ಕೆ ಬಾಲಕಿ ಏನೋ ಒಂದು ಕಥೆ ಕಟ್ಟಿದ್ದಳು. ಪೊಲೀಸರು ತನಿಖೆ ನಡೆಸಿದರೂ ಕೊಲೆ ಮಾಡಿದ್ದು ಯಾರು ಎಂದು ತಿಳಿದಿರಲಿಲ್ಲ. ನಂತರ ಅವರು ಕೊಲೆಯಾದ ರೀತಿಯಲ್ಲಿಯೇ ಕೆಲ ದಿನಗಳ ನಂತರ ಬಾಲಕಿಯ ತಾಯಿ ಕೂಡ ಮೃತಪಟ್ಟರು. ಇದರಿಂದ ಪೊಲೀಸರಿಗೆ ಅನುಮಾನ ಬಲವಾಯಿತು. ಪರಿಚಯಸ್ಥರೇ ಯಾರೋ ಕೊಲೆ ಮಾಡಿರುವುದಾಗಿ ಸಂದೇಹ ವ್ಯಕ್ತವಾಗಿತ್ತು.

ನಂತರ ತನಿಖೆಯ ವೇಳೆ ಬಾಲಕಿಯ ಬಾಯಿ ಬಿಡಿಸಿದಾಗ ವಿಷಯ ಬಹಿರಂಗಗೊಂಡಿದೆ. ಪ್ರಿಯಕರನ ಜತೆಗೂಡಿ ಇಬ್ಬರ ಕೊಲೆ ಮಾಡಿರುವುದಾಗಿ ಬಾಲಕಿ ಒಪ್ಪಿಕೊಂಡಿದ್ದಾಳೆ.

ಸದ್ಯ ಆರೋಪಿ ಬಾಲಕಿಯು ಅಪ್ರಾಪ್ತೆಯಾಗಿರುವುದರಿಂದ ಆಕೆಯನ್ನು ಬಾಲಾರೋಪಿ ಗೃಹಕ್ಕೆ ಸ್ಥಳಾಂತರ ಮಾಡಲಾಗಿದೆ. ಆರೋಪಿ ಯುವಕನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net