‘ಮೀ ಟೂ’ ಎಂದು ನಟನ ವಿರುದ್ಧ ರೀಲು ಬಿಟ್ಟಿದ್ದ ಖ್ಯಾತ ನಟಿಯಿಂದ ಪಿಕ್‌ಪಾಕೆಟ್‌- ಈಕೆಯ ಹಿಸ್ಟರಿ ಕೇಳಿ ಪೊಲೀಸರೇ ಸುಸ್ತು!

roopa
Published on

ಕೋಲ್ಕತಾ: ಲೈಂಗಿಕ ದೌರ್ಜನ್ಯದ ವಿರುದ್ಧ 2018ರಲ್ಲಿ ಭಾರಿ ಸದ್ದು ಮಾಡಿದ್ದ ‘ಮೀ ಟೂ’ ಚಳವಳಿ. ನಟಿಯೊಬ್ಬಳು ತನ್ನ ಮೇಲಾಗಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಿದಾಗ, ತಮಗೂ ಅದೇ ರೀತಿ ಆಗಿತ್ತು ಎಂಬುದಾಗಿ ಬಹುತೇಕ ಕ್ಷೇತ್ರಗಳ ಮಹಿಳೆಯರು ‘ಮೀ ಟೂ’ ಅಭಿಯಾನ ಆರಂಭಿಸಿದ್ದರು. ತಮ್ಮ ವಿರುದ್ಧ ಆಗಿರುವ ಲೈಂಗಿಕ ದೌರ್ಜನ್ಯವನ್ನು ಮುಕ್ತವಾಗಿ ಮಾತನಾಡತೊಡಗಿದರು.

ಆಗ ಚಾಲ್ತಿಗೆ ಬಂದಿದ್ದ ಕೆಲವು ಮಹಿಳೆಯರ ಪೈಕಿ ಬೆಂಗಾಲಿ ಚಿತ್ರರಂಗದ ಖ್ಯಾತ ನಟಿ ರೂಪಾ ದತ್ತಾ ಅವರ ಹೆಸರು ಕೂಡ ಒಂದು. ನಟ ಅನುರಾಗ್ ಕಶ್ಯಪ್ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ನಂತರ ಅದು ಸುಳ್ಳು ಎಂದು ತಿಳಿದಿತ್ತು.

ಆದರೆ ಇದೀಗ ಪೊಲೀಸರೇ ಸುಸ್ತು ಬೀಳುವ ಘಟನೆ ನಡೆದಿದೆ. ಅದೇನೆಂದರೆ, ಇದೇ ನಟಿ, ಪಿಕ್‌ಪಾಕೆಟ್‌ ಮಾಡಿ ಸಿಕ್ಕಿಬಿದ್ದಿದ್ದಾಳೆ. ಕೋಲ್ಕತಾದ ಅಂತಾರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಪಿಕ್‌ ಪಾಕೆಟ್‌ ಮಾಡಲು ಹೋದಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು, ಆಕೆಯನ್ನು ಬಂಧಿಸಲಾಗಿದೆ.

ಈ ಸಮ್ಮೇಳನದಲ್ಲಿ ಮಹಿಳೆಯೊಬ್ಬರು ಡಸ್ಟ್‌ಬಿನ್‌ಗೆ ಚೀಲವನ್ನು ಎಸೆಯುತ್ತಿದ್ದಳು. ಅದನ್ನು ನೋಡಿ ಅನುಮಾನ ಹುಟ್ಟಿತು. ನಂತರ ಹೋಗಿ ವಿಚಾರಿಸಿದಾಗ ಆ ಚೀಲದಲ್ಲಿ ದುಡ್ಡು ಇರುವುದು ಹಾಗೂ ಈಕೆ ಪ್ರಸಿದ್ಧ ನಟಿ ಎನ್ನುವುದು ತಿಳಿದುಬಂತು ಎಂದಿದ್ದಾರೆ ಪೊಲೀಸರು.

ಇದಾದ ಬಳಿಕ ರೂಪಾಳ ಬ್ಯಾಗ್‌ ತಪಾಸಣೆ ಮಾಡಿದಾಗ ಅದರಲ್ಲಿ ಹಲವು ಹಣದ ಚೀಲಗಳು ಪೊಲೀಸರಿಗೆ ಸಿಕ್ಕಿವೆ. ಅದರಲ್ಲಿ ಸುಮಾರು 75 ಸಾವಿರ ರೂಪಾಯಿಗಳು ಇದ್ದು, ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಇದಾಗಲೇ ಹಲವಾರು ಜಾತ್ರೆ, ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಜನಸಂದಣಿ ಇರುವ ಸ್ಥಳಗಳಿಗೆ ತೆರಳಿ ಪಿಕ್‌ ಪಾಕೆಟ್‌ ಮಾಡಿದ್ದನ್ನು ಆಕೆ ಬಾಯಿ ಬಿಟ್ಟಿದ್ದಾಳೆ!

ಒಬ್ಬ ನಟಿಯಾಗಿ ಅದ್ಹೇಗೆ ಜನರ ಪರ್ಸ್‌ ಕದಿಯುತ್ತಾರೆ ಎಲ್ಲರೂ ಆಶ್ಚರ್ಯ ಪಡುತ್ತಿದ್ದಾರೆ. ರೂಪಾ ದತ್ತಾ ಜನಪ್ರಿಯ ನಟಿ, ಅವರು ಅನೇಕ ಧಾರಾವಾಹಿಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವಳು ಆಗಾಗ್ಗೆ ದೊಡ್ಡ ಸಮಾರಂಭ, ಫಂಕ್ಷನ್, ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಳು. ಇದೀಗ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಅಭಿಮಾನಿಗಳು ಮಾತ್ರ ಶಾಕ್‌ ಆಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net